ಬರಹ: ಡಾ. ಜೆ ಎಸ್ ಪಾಟೀಲ (ಲೇಖಕರು ಜನಪರ ಚಿಂತಕರು)
ಭಾರತ ದೇಶವು ಬಹುತೇಕ ಶತಮಾನ ಪರಕೀಯರ ಆಳ್ವಿಕೆಗೆ ಒಳಪಟ್ಟಿದೆ. ಕ್ರಿ.ಪೂ 4600 ವರ್ಷಗಳಷ್ಟು ಹಳೆಯದಾದ ಜಗತ್ತಿನಲ್ಲಿ ಅತ್ಯಂತ ಪ್ರಗತಿಪರ ಮತ್ತು ಮುಂದುವರೆದ ಹರಪ್ಪ ನಾಗರಿಕತೆ ಹೊಂದಿದ್ದ ಭಾರತ ಪರಕೀಯ ಸನಾತನಿ ಆರ್ಯರ ಒಳ ನುಸುಳುವಿಕೆಯ ನಂತರ ತನ್ನೆಲ್ಲ ಹಳೆಯ ಗತವೈಭವವನ್ನು ಕಳೆದುಕೊಂಡಿತು. ಮೂಲನಿವಾಸಿ ದ್ರಾವಿಡರು ಹುಟ್ಟುಹಾಕಿದ್ದ ಹರಪ್ಪ ನಾಗರಿಕತೆ ಅವಸಾನ ಕಾಣಲು ಪ್ರಾಕೃತಿಕ ಕಾರಣಗಳಷ್ಟೇ, ಅತಿಕ್ರಮಿತ ಸನಾತನಿಗಳ ಕುತಂತ್ರವೂ ಕಾರಣವಾಗಿದೆ.
ಆರಂಭದಲ್ಲಿ ಪ್ರಕೃತಿ ಆರಾಧಕರಾಗಿದ್ದ ಆರ್ಯರು ಅಗ್ನಿ ಪೂಜೆˌ ಇಂದ್ರ ಪೂಜೆˌ ಯಜ್ಞˌಯಾಗಗಳಿಂದ ಭಡ್ತಿ ಪಡೆಯುತ್ತ ಬ್ರಹ್ಮ ˌ ವಿಷ್ಣು ˌ ರುದ್ರರ ತ್ರಿಮೂರ್ತಿ ಪರಿಕಲ್ಪನೆಯನ್ನು ಹುಟ್ಟುಹಾಕಿ ಆನೇಯೆ ಕ್ರಮೇಣ ತೆತ್ತೀಸು ಕೋಟಿ ದೇವತೆಗಳನ್ನು ಸ್ರಷ್ಟಿಸಿದರು. ಆರ್ಯರು ಯಜ್ಞ ಯಾಗ ಮಾಡುತ್ತಿದ್ದದ್ದೆ ಮೂಲ ನಿವಾಸಿ ದ್ರಾವಿಡರನ್ನು ಸೋಲಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಲು ಎನ್ನುತ್ತದೆ ನಮ್ಮ ಇತಿಹಾಸ. ಕ್ರಿ.ಪೂ. 1500 ರಿಂದ ಕ್ರಿ.ಪೂ.700 ರವೆಗೆ ಮುಂದುವರೆದಿದ್ದ ವೇದ ಕಾಲ ಇಲ್ಲಿನ ಸಮಾಜವನ್ನು ವರ್ಣ ವ್ಯವಸ್ಥೆಯ ಮೂಲಕ ವಿಘಟಿಸಿತು. ಮುಂದೆ ಇಲ್ಲಿನ ಪ್ರತಿಯೊಂದು ಅವಘಡಗಳಿಗೆ ಸನಾತನಿ ಆರ್ಯರು ಮುನ್ನುಡಿ ಬರೆದರು. ಕಾಲಾನಂತರದಲ್ಲಿ ಆರ್ಯರು ಪರಕೀಯರ ದಾಳಿಯನ್ನು ಸ್ವಾಗತಿಸಿˌ ಅಂದಿನ ಆಳರಸರ ಆಸ್ಥಾನಗಳಲ್ಲಿ ದಿವಾನಗಿರಿ ಗಿಟ್ಟಿಸಿಕೊಂಡು ರಾಜಸತ್ತೆಯನ್ನು ನಿಯಂತ್ರಿಸುತ್ತ ವರ್ಣ ವ್ಯವಸ್ಥೆಯನ್ನು ಜೀವಂತವಾಗಿಟ್ಟುಕೊಂಡರು. ಆ ಮೂಲಕ ಭಾರತದ ಸಮಾಜಿಕ ವ್ಯವಸ್ಥೆಯ ಯಜಮಾನಿಕೆ ಸ್ಥಾಪಿಸಿಕೊಂಡರು. ಅಂದಿನಿಂದ ಇಂದಿನ ತನಕ ಭಾರತವು ಹಿಂದುಳಿಯಲು ಪರಕೀಯ ಸನಾತನಿ ಆರ್ಯರೇ ಕಾರಣರು.
ಏಕೆಂದರೆ:
? ಭಾರತೀಯ ಇತಿಹಾಸ ಆರ್ಯರಿಂದ ಮತ್ತು ಆರ್ಯರಿಗಾಗಿ ಅನ್ನುವಂತೆ ಮಾರ್ಪಡಿಸಿಕೊಂಡದ್ದು.
? ಈ ಇತಿಹಾಸದಲ್ಲಿ ಶೂದ್ರರು, ಅತೀಶೂದ್ರರುˌ ದಲಿತ ದಮನಿತರು ಮತ್ತು ಬುಡಕಟ್ಟು ಜನಾಂಗದವರಿಗೆ ಸ್ಥಾನವಿಲ್ಲ.
? ಇದೆಲ್ಲವನ್ನು ನೋಡಿದ ಮೇಲೆ ಅಷ್ಟಕ್ಕೂ ಈ ಆರ್ಯರ ಇತಿಹಾಸದಲ್ಲಿ ಕಲಿಯುವಂತದ್ದೇನಾದರೂ ಇದೆಯೆ? ಹಾಗೇನಾದರೂ ಕಲಿಯುವಂತದ್ದು ಇದ್ದರೆ ಅದು ಕೇವಲ ಸರಣಿ ಸೋಲುಗಳು ಮತ್ತು ಮತ್ತು ಪರಕೀಯರ ಆಕ್ರಮಣ ಮಾತ್ರ.
? ಧರ್ಮˌ ದೇವರು ಮತ್ತು ಸಂಸ್ಕ್ರತಿಯ ಹೆಸರಿನಲ್ಲಿ ಮೂಢ ನಂಬಿಕೆಗಳುˌ ಕಂದಾಚಾರˌ ಅಂಧ ಶ್ರದ್ಧೆ ಮುಂತಾದವುಗಳನ್ನು ಪೋಷಿಸಿದ ಸನಾತನಿ ಆರ್ಯರು ಭಾರತದಲ್ಲಿ ವಿಜ್ಞಾನ ಮತ್ತು ವಿಜ್ಞಾನಿಗಳು ಪ್ರವರ್ಧಮಾನಕ್ಕೆ ಬರುವುದನ್ನು ತಡೆಹಿಡಿದರು. ಸೃಜನಶೀಲತೆಯನ್ನು ವಿರೋಧಿಸುತ್ತ ಬಂದ ಸನಾತನಿ ಆರ್ಯರು ಆ ಮೂಲಕ ತಮ್ಮ ಸನಾತನ ಧರ್ಮವನ್ನು ರಕ್ಷಿಸಿ ಬೆಳೆಸಿದರು.
? ವೈಜ್ಞಾನಿಕ ಅಭಿವೃದ್ಧಿ, ಪ್ರಗತಿಪರ ಆಲೋಚನೆಗಳುˌ ಉನ್ನತ ಶಿಕ್ಷಣದಿಂದ ಜನರನ್ನು ದೂರ ಇಡಲೆಂದೇ ಸಂಪ್ರದಾಯದ ಹೆಸರಿನಲ್ಲಿ ಸಮುದ್ರೋಲಂಘನವನ್ನು ಸನಾತನಿಗಳು ನಿಷೇಧಿಸಿದರು.
? ಪ್ರಾಚೀನ ಭಾರತದಲ್ಲಿ ಯಾವುದಾದರೂ ವಿಜ್ಞಾನ ಚಿಂತನೆಗಳು ಬೆಳೆದವೆಂದರೆ ಅವು, ಬೌದ್ಧ ಮತ್ತು ಆನಂತರದ ಕಾಲಘಟ್ಟದಲ್ಲಿ. ಕಲ್ಯಾಣದ ಶರಣರ ವಚನ ಚಳುವಳಿ ಮತ್ತು ಶರಣ ಧರ್ಮದ ಆಶ್ರಯದಲ್ಲಿ ಒಂದಷ್ಟು ವೈಚಾರಿಕ ಚಿಂತನೆಗಳು ವೈಜ್ಞಾನಿಕ ತಳಹದಿಯಲ್ಲಿ ರೂಪಿತಗೊಂಡಿದ್ದವುಗಳು.
? ಆರ್ಯಭಟˌ ಬ್ರಹ್ಮದತ್ತ ˌ ರೋಹಿಣಿ ಮುಂತಾದ ವಿಜ್ಞಾನಿಗಳೆಲ್ಲರೂ ಬೌದ್ಧಧರ್ಮದ ಕೊಡುಗೆ. ಸನಾತನಿಗಳು ಈ ಮೇಲ್ಕಾಣಿಸಿದ ವಿದ್ವಾಂಸರು ತಮ್ಮದೆ ಸಮುದಾಯದವರಾಗಿದ್ದರೂ ಕೂಡ ಅವರ ವೈಜ್ಞಾನಿಕ ಚಿಂತನೆಗಳನ್ನು ಪ್ರಖರವಾಗಿ ವಿರೋಧಿಸಿದ್ದರು ಮತ್ತು ಅವರನ್ನು ಅವಮಾನಿಸಿದ್ದರು.
? ಆ ಕಾರಣದಿಂದಲೇ ಭಾರತದಲ್ಲಿ ಅಸಮಾನತೆ, ಮೂಢ ನಂಬಿಕೆ, ದ್ವೇಷ, ಗುಲಾಮಗಿರಿ, ಅನ್ಯಾಯ, ಹಿಂಸೆˌ ಬಡತನ, ನಿರುದ್ಯೋಗ, ಅಜ್ಞಾನ ಇತ್ಯಾದಿಗಳು ಅಪಾರ ಪ್ರಮಾಣದಲ್ಲಿ ಬೆಳೆದು ನಿಂತವು.
? ಈ ಎಲ್ಲ ಕಾರಣಗಳಿಂದಲೆ ಇಂದಿನ ಅಧುನಿತ ವೈಜ್ಞಾನಿಕ ಕಾಲಘಟ್ಟದಲ್ಲೂ ಕೂಡ, ಭಾರತೀಯರು, ಸುಶಿಕ್ಷಿತರಾಗಿದ್ದಾಗ್ಯೂ ಕೊರೋನ ರೋಗ ಗುಣಪಡಿಸಲು ವೈಜ್ಞಾನಿಕವಾಗಿ ಚಿಂತಿಸುವ ಬದಲಾಗಿ ಮೂಢನಂಬಿಕೆಗಳಿಗೆ ಮಾರುಹೋಗುತ್ತಿರುವುದು.
? ಈ ಮೂಢ ನಂಬಿಕೆಗಳನ್ನು ಅನುಚ್ಛಾನವಾಗಿ ಮುಂದುವರೆಸಿಕೊಂಡು ಹೋಗಲೆಂದೇ ಸನಾತನಿಗಳು ಗೋವು, ಗಂಜಳ, ಗೋಮೂತ್ರ ಇತ್ಯಾದಿಗಳನ್ನು ಸರ್ವವಿಧದ ಆಧುನಿಕ ಸಮಸ್ಯೆಗಳಿಗೆ ಪರಿಹಾರಗಳೆಂದು ಜನಪ್ರಿಯಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ.
? ಶೇಕಡ 85 ರಷ್ಟು ಅಸ್ಪರ್ಶ್ಯರುˌ ಶೂದ್ರರು, ಬುಡಕಟ್ಟು ಜನಾಂಗದವರಿಗೆ ಶಿಕ್ಷಣದಿಂದ ಸನಾತನಿಗಳು ವಂಚಿಸಿದ್ದರು. ಬ್ರಿಟಿಷ್ ಶಿಕ್ಷಣ ನೀತಿಯನ್ನು ಸನಾತನಿಗಳು ನಿರ್ಲಜ್ಜವಾಗಿ ಟೀಕಿಸುತ್ತಿದ್ದರು. ಏಕೆಂದರೆ ಬ್ರಿಟಿಷರು ಭಾರತೀಯ ಅಕ್ಷರವಂಚಿತ ಸಮುದಾಯಗಳಿಗೆ ಶಿಕ್ಷಣದ ಬಾಗಿಲು ತೆರೆದಿದ್ದರು.
? ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯನ್ನು ಸನಾತನಿಗಳು ವಿರೋಧಿಸಿದ್ದಕ್ಕೆ ಕಾರಣವೆಂದರೆ ಬ್ರಿಟೀಷರು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿ ವಿಸ್ತರಣೆ ಮಾಡಿದ್ದು ಮತ್ತು ವರ್ಣಾಶ್ರಮ ಧರ್ಮದ ಕಟ್ಟಳೆಯನ್ನು ದಿಕ್ಕರಿಸಿ ಶೂದ್ರರುˌ ಅತಿ ಶೂದ್ರರಿಗೆ ಆಡಳಿತದಲ್ಲಿ ಸಮಾನ ಅವಕಾಶ ನೀಡಿದ್ದು.
? ವೈಜ್ಞಾನಿಕತೆ ಮತ್ತು ವೃತ್ತಿಪರ ಶಿಕ್ಷಣದ ಈ ಡಿಜಿಟಲ್ ಯುಗದಲ್ಲೂ ಸನಾತನಿಗಳು ರೂಪಿಸುತ್ತಿರುವ ಶಿಕ್ಷಣ ನೀತಿಯಲ್ಲಿ ಏನಿದೆ ? ಸನಾತನಿಗಳಿಗೆ ವೈಜ್ಞಾನಿಕ ಉದ್ವೇಗ ಮತ್ತು ಪ್ರಗತಿಪರ ಆಲೋಚನೆಗಳ ಕುರಿತು ಯಾವುದೇ ಗೌರವವಿಲ್ಲ.
? ಬ್ರಿಟಿಷ್ ಶಿಕ್ಷಣವು ನಮಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸ್ವಾಭಿಮಾನ, ರಾಜನೀತಿˌ ಸಂವಿಧಾನˌ ಮಾನವೀಯತೆ, ಮೂಲಭೂತ ಹಕ್ಕುಗಳು, ವಿಜ್ಞಾನ, ತಂತ್ರಜ್ಞಾನ ಇತ್ಯಾದಿಗಳ ಹಲವಾರು ಮೌಲ್ಯಗಳನ್ನು ಕಲಿಸಿದೆ.
? ವಸಾಹತುಶಾಹಿ ಆಳ್ವಿಕೆಯ ನಿಜವಾದ ಫಲಾನುಭವಿಗಳು ಇದೇ ಸನಾತನಿಗಳು. ಏಕೆಂದರೆ ಅಧಿಕಾರವು ಬ್ರಿಟಿಷರಿಂದ ಭಾರತೀಯ ಸನಾತನಿಗಳ ಕೈಗೆ ಹಸ್ತಾಂತರಿಸಲ್ಪಟ್ಟಿತು.
? ಆದ್ದರಿಂದ ಇಂದು ಸನಾತನಿಗಳು ವಸಾಹತುಶಾಹಿ ಆಳ್ವಿಕೆಯಲ್ಲಿ ಚಾಲ್ತಿಯಲ್ಲಿರುವ ಎಲ್ಲ ವ್ಯವಸ್ಥೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಏಕೆಂದರೆ ಸನಾತನಿಗಳು ಪರೋಕ್ಷವಾಗಿ ಪ್ರಭುತ್ವವನ್ನು ನಿಯಂತ್ರಿಸುತ್ತ ಜನತಂತ್ರದ ಎಲ್ಲ ಸವಲತ್ತುಗಳನ್ನು ನಿಜವಾದ ಅರ್ಥದಲ್ಲಿ ಆನಂದಿಸುತ್ತಿದ್ದಾರೆ.
? ಈಗ, ಸನಾತನಿಗಳು ರಾಷ್ಟ್ರೀಯತೆಯನ್ನು ಭಾವನಾತ್ಮಕ ನೆಲೆಗಟ್ಟಿನಲ್ಲಿ ಎತ್ತಿ ತೋರಿಸುತ್ತ ತಮ್ಮ ಜನತಂತ್ರ ವಿರೋಧಿ ಕಾರ್ಯವನ್ನು ಸಾಧಿಸುತ್ತಿದ್ದಾರೆ.
ಇಂಥ ಸಂದಿಗ್ಧ ಮತ್ತು ಸಂಕೀರ್ಣ ಕಾಲಘಟ್ಟದಲ್ಲಿ ಭಾರತದ ಪ್ರಾಚೀನ ಬಹುತ್ವ ಪರಂಪರೆˌ ಸಹಬಾಳ್ವೆ ˌ ಸಾಮರಸ್ಯ ˌ ಮತ್ತು ಅಧುನಿಕ ಸಂವಿಧಾನˌ ಜನತಂತ್ರಗಳನ್ನು ಈ ಕ್ರೂರ ಸನಾತನಿ ಗಿಡುಗಗಳಿಂದ ರಕ್ಷಿಸಿಕೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ನಾವೆಲ್ಲ ತುರ್ತಾಗಿ ಅರಿತು ಕಾರ್ಯೋನ್ಮುಖರಾಗಬೇಕಿದೆ. ಇಲ್ಲದಿದ್ದರೆ ಇಲ್ಲಿನ ನ್ಯಾಯಾಂಗ ಮತ್ತು ಸೈನ್ಯವನ್ನು ವಸಕ್ಕೆ ಪಡೆದು ಧಾರ್ಮಿಕ ಮೂಲಭೂತವಾದಿ ಸನಾತನಿಗಳು ಈ ದೇಶವನ್ನು ಫ್ಯಾಸಿಸ್ಟ ರಾಷ್ಟ್ರವಾಗಿಸುವುದರಲ್ಲಿ ಅನುಮಾನವೇ ಇಲ್ಲ.
►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com