ಕೋವಿಡ್ ನೆಪದಲ್ಲಿ ಜನರನ್ನು ಹಿಂಸಿಸದಿರಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ.
ಕೋವಿಡ್ ನೆಪದಲ್ಲಿ ಜನರನ್ನು ಹಿಂಸಿಸದಿರಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ.
Advertisement
ಅವೈಜ್ಞಾನಿಕವಾದ ಕೋವಿಡ್ ನಿರ್ಬಂಧಗಳನ್ನು ಈ ಕೂಡಲೇ ರದ್ದು ಮಾಡಿ ಜನರನ್ನು ಬದುಕಲು ಬಿಡಬೇಕು. ಇನ್ನೆಂದಿಗೂ ಇಂಥ ಅವೈಜ್ಞಾನಿಕವಾದ, ಅಮಾನವೀಯವಾದ ನಿರ್ಬಂಧಗಳನ್ನು ಹೇರುವುದೇ ಇಲ್ಲ ಎಂದು ಸರಕಾರವು ಸ್ಪಷ್ಟವಾಗಿ ಹೇಳಬೇಕು.ಬಲವಂತದಿಂದ, ಮೋಸದಿಂದ ಲಸಿಕೆ ಹಾಕುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಲ್ಲಾ ಶಾಲೆಗಳನ್ನು ಈ ಕೂಡಲೇ ತೆರೆಯಬೇಕು, ಯಾವುದೇ ಕಾರಣಕ್ಕೂ ಕೋವಿಡ್ ನೆಪದಲ್ಲಿ ಶಾಲೆಗಳನ್ನು ಇನ್ನೆಂದಿಗೂ ಮುಚ್ಚಬಾರದು. ಲಸಿಕೆಗಳ ಬಗ್ಗೆ ಪರೀಕ್ಷೆಗಳಾಗದೆ, ಅವುಗಳ ಸುರಕ್ಷತೆ ದೃಢಗೊಳ್ಳದೆ, ಮಕ್ಕಳಲ್ಲಿ ಅವು ಅಗತ್ಯವೆಂದು ತಜ್ಞರು ಹೇಳದೆ ಇರುವವರೆಗೆ ಮಕ್ಕಳಿಗೆ ಲಸಿಕೆ ನೀಡುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಜನಪ್ರಿಯ ವೈಧ್ಯ ಹಾಗೂ ಜನಪರ ಚಿಂತಕ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
ಲಸಿಕೆ ಹಾಕಿಸಿಕೊಳ್ಳಲಾಗದವರನ್ನು ಬಹಿಷ್ಕರಿಸುವ, ಬದುಕಲಾಗದಂತೆ ಮಾಡುವ ಎಲ್ಲಾ ಅಸಾಂವಿಧಾನಿಕ, ಅಮಾನವೀಯ, ಅವೈಜ್ಞಾನಿಕ ಕ್ರಮಗಳನ್ನು ಈ ಕೂಡಲೇ ನಿಲ್ಲಿಸಬೇಕು, ಮತ್ತು ಲಸಿಕೆ ಕಡ್ಡಾಯವಲ್ಲ ಎಂಬ ಅಧಿಕೃತ ನಿಲುವಿಗೆ ಎಲ್ಲ ಮಾಧ್ಯಮಗಳಲ್ಲಿ ಪ್ರಚಾರ ನೀಡಬೇಕು.
ಕೋವಿಡ್ ನಿರ್ಬಂಧಗಳಿಂದ ಜೀವ, ಜೀವನ, ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ಈ ಕೂಡಲೇ ನೀಡಬೇಕು.
ಕೋವಿಡ್ ಆರಂಭದಿಂದಲೂ ಸರಕಾರಕ್ಕೆ ತಪ್ಪಾದ, ಅವೈಜ್ಞಾನಿಕವಾದ, ದುರುದ್ದೇಶದ ಸಲಹೆಗಳನ್ನು ನೀಡಿ ಅಮಾನವೀಯವಾದ ಕೋವಿಡ್ ನಿರ್ಬಂಧಗಳನ್ನೂ, ಶಾಲೆಗಳ ಮುಚ್ಚುಗಡೆಯನ್ನೂ ಹೇರಲು ಕಾರಣರಾದ ಎಲ್ಲಾ ತಥಾಕಥಿತ ತಜ್ಞರ ಬಗ್ಗೆ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು, ಅಂಥ ಎಲ್ಲಾ ಸಮಿತಿಗಳನ್ನು ಈ ಕೂಡಲೇ ರದ್ದು ಮಾಡಬೇಕು ಎಂದವರು ಒತ್ತಾಯಿಸಿದ್ದಾರೆ.
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.