Advertisement

'ಕೋವಿಡ್ ಲಸಿಕಾ ಅಭಿಯಾನ'ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.

Advertisement

ಕೇಂದ್ರ ಸರ್ಕಾರ ಘೋಷಿಸಿರುವ ಕೋವಿಡ್ ಲಸಿಕಾ ಅಭಿಯಾನ ಇದೀಗ ವಿವಾದಕ್ಕೊಳಗಾಗಿದೆ. ಲಸಿಕಾ ಅಭಿಯಾನದ ಹೆಸರಿನಲ್ಲಿ ಕೋವಿಡ್ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. 'ಈ ಲಸಿಕಾ ಅಭಿಯಾನವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಯಾಗಿದೆ' ಎಂದು ಪ್ರಗತಿಪರ ವೈದ್ಯರು ಮತ್ತು ವಿಜ್ಞಾನಿಗಳ ವೇದಿಕೆಯೊಂದು ಆರೋಪಿಸಿರುವ ಕುರಿತು ವರದಿಯಾಗಿದೆ. 'Progressive Medicos and Scientists Forum (PMSF)' ಸಂಸ್ಥೆ ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ‘ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಈ ನಡೆಯಿಂದ ಖಾಸಗಿ ಕಂಪನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವ ಮೂಲಕ ಕೋವಿಡ್ ಲಸಿಕೆಯ ದರವನ್ನು ತಮಗೆ ಬೇಕಾದಂತೆ ನಿಯಂತ್ರಿಸುತ್ತಾ, ಜನರನ್ನು ಸುಲಿಗೆ ಮಾಡುವ ಮೂಲಕ ಕಂಪನಿಗಳ ಆದಾಯವನ್ನು ಹೆಚ್ಚಿಸಿಕೊಳ್ಳತೊಡಗಿದೆ‘ ಎಂದು ಅಪಾದಿಸಿದೆ. ‘ಶೇಕಡಾ 50 ರಷ್ಟು ಡೋಸ್‌ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುವ ಮೂಲಕ ಕೇಂದ್ರದ ಮೋದಿ ಸರ್ಕಾರವು ಈ ಸರ್ಕಾರಿ ಲಸಿಕಾ ಅಭಿಯಾನವನ್ನೂ ಖಾಸಗಿ ಕಂಪನಿಗಳವರಿಗೆ ಆದಾಯದ ಮೂಲವನ್ನಾಗಿ ಮಾಡಿಕೊಟ್ಟಿದೆ‘ ಎಂದು ಈ ವೇದಿಕೆ ಟೀಕಿಸುವ ಮೂಲಕ ಈ ಲಸಿಕಾ ಅಭಿಯಾನದ ಹೆಸರಿನಲ್ಲಿ ಬಹುದೊಡ್ಡ ಹಗರಣ ನಡೆದಿರುವ ಸುಳಿವು ನೀಡಿದೆ. 'ಕೋರೊನಾ ಮಹಾಮಾರಿಯ ಭೀಕರವಾದ ಎರಡನೆಯ ಅಲೆಯ ಪರಿಣಾಮವಾಗಿ ಮತ್ತು ಈಗಾಗಲೇ ದೇಶದಾದ್ಯಂತ ಉದ್ಭವವಾಗಿರುವ ಲಸಿಕೆ ಡೋಸ್‌ಗಳ ಕೊರತೆಯಿಂದಾಗಿ ಕೊರೊನಾ ನಿಯಂತ್ರಣದ ವಿಚಾರದಲ್ಲಿ ಕಠಿಣ ಪರಿಸ್ಥಿತಿ ತಲೆದೋರಿದೆ. ದೇಶಕ್ಕೊದಗಿರುವ ಇಂತಹ ಶತಮಾನದ ಆಪತ್ತಿನ ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರವು ರಾಜ್ಯ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಉಚಿತವಾಗಿ ಯಾ ಅತೀ ಕಡಿಮೆ ಬೆಲೆಗೆ ಲಸಿಕೆ ಒದಗಿಸ ಬೇಕಾಗಿರುವ ಕೇಂದ್ರ ಸರ್ಕಾರವು ಈ ರೀತಿಯಲ್ಲಿ ಖಾಸಗಿ ಕಂಪೆನಿಗಳಿಗೆ ಸುಲಿಗೆಗೆ ಅವಕಾಶ ಮಾಡಿಕೊಟ್ಟಿರುವುದು ಖಂಡನೀಯ ಇದೀಗ ನ್ಯಾಯವಾದ ಬೆಲೆಯಲ್ಲಿ ಲಸಿಕೆ ಖರೀದಿಸಲು ರಾಜ್ಯ ಸರ್ಕಾರಗಳು ಈ ಕಾಳಸಂತೆಕೋರ ಖಾಸಗಿ ಕಂಪನಿಗಳೊಂದಿಗೆ ಚೌಕಾಸಿಗೆ ಇಳಿಯಬೇಕಾಗುತ್ತದೆ. ತಮಗೆ ಅಗತ್ಯವಿರುವಷ್ಟು ಲಸಿಕೆಗಳನ್ನು ಪಡೆಯಲು ಬಿಡ್‌ ಮಾಡಬೇಕಾಗುತ್ತದೆ. ಆರೋಗ್ಯ ತುರ್ತುಪರಿಸ್ಥಿತಿಯ ಈ ಸಂಧರ್ಭದಲ್ಲಿ ಸರ್ಕಾರದ ಈ ನಡೆ ಖಂಡನೀಯ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement