Advertisement

ಭಾರತ ವಿರೋಧಿ ಮಾಹಿತಿ ಮತ್ತು ಚಿತ್ರಗಳನ್ನು ಪ್ರಕಟಿಸುವ ವೆಬ್‌ಸೈಟ್‌ಗಳ ವಿರುದ್ಧ ಕಠಿಣ ಕ್ರಮ: ಕೇಂದ್ರ ಸರ್ಕಾರ | ಭಾರತ ವಿರೋಧಿ ಎಂದರೆ ಮೋದಿ‌ ವಿರೋಧಿ ಎಂದರ್ಥವೇ?

Advertisement

ಭಾರತ ವಿರೋಧಿ ಮಾಹಿತಿ ಮತ್ತು ಚಿತ್ರಗಳನ್ನು ಪ್ರಕಟಿಸುವ ವೆಬ್‌ಸೈಟ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ ಎಂದು ಏರ್ ನ್ಯೂಸ್ ಬೆಂಗಳೂರು ವರದಿ ಮಾಡಿದೆ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ಭಾರತ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಭಾರತೀಯ ಸೇನೆ ವಿಶ್ವದ ಪ್ರಮುಖ ನಾಲ್ಕು ರಾಷ್ಟ್ರಗಳ ಸೇನೆಯಲ್ಲಿ ಒಂದು. ಭಾರತ ಐಟಿ, ಬಿಟಿಯಲ್ಲಿ ಹತ್ತು ವರ್ಷಗಳ ಹಿಂದೆಯೇ ವಿಶ್ವದ ಗಮನ ಸೆಳೆದಿತ್ತು. ಅಮೆರಿಕದಂತಹ ವಿಶ್ವದ ದೊಡ್ಡಣ್ಣನೇ ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತದ ಯುವಕರ ಆ ಸಾಧನೆಯನ್ನು ಹಾಡಿ ಹೊಗಳಿತ್ತು. ಸ್ಬಾತಂತ್ರ್ಯಾ ನಂತರ ಈ ದೇಶವನ್ನು ಆಳಿದ ನೆಹರೂ, ಶಾಸ್ತ್ರಿ, ಇಂದಿರಾ, ರಾಜೀವ್, ಪಿವಿಎನ್, ವಿ.ಪಿ ಸಿಂಗ್, ಗುಜ್ರಾಲ್, ದೇವೇಗೌಡ, ವಾಜಪೇಯಿ, ಮನಮೋಹನ್ ಸಿಂಗ್ ಮುಂತಾದವರ ಮುತ್ಸದ್ದಿತನದ ಆಡಳಿತದಿಂದಾಗಿ 2012ರ ವೇಳೆಗೆ ವಿಶ್ವದ ಮೂರನೆಯ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿತ್ತು. ಭಾರತದ ಏಳಿಗೆಯನ್ನು ಸಹಿಸದೆ ಕಾಲ್ಕೆದರಿ ಜಗಳಕ್ಕೆ ಬರುತ್ತಿದ್ದ ಅಕ್ಕಪಕ್ಕದ ರಾಷ್ಟ್ರಗಳ ಜೊತೆ ನಿರಂತರವಾಗಿ ಸೌಹಾರ್ಧ ಸಂಬಂಧವನ್ನು ಹೊಂದುವ ಮೂಲಕ ವಿಶ್ವಕ್ಕೆ ಮಾದರಿಯಾಗಿತ್ತು ಭಾರತ. ಆ ಕಾರಣಕ್ಕಾಗಿ ವಿಶ್ವದ ಹಲವು ಮುಂದುವರಿದ ರಾಷ್ಟ್ರಗಳು ಭಾರತವನ್ನು ಮಾದರಿಯಾಗಿ ತಗೆದುಕೊಂಡಿದ್ದವು. ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ಹಾಗೆಯೇ... ಭಾರತದ ವಿರುದ್ದವಾಗಿ ಬಾಹ್ಯ ಮತ್ತು ಆಂತರಿಕ ಪಿತೂರಿ ನಿರಂತರವಾಗಿ ನಡೆಯುತ್ತಿರುವುದು ಬಹಿರಂಗ ಸತ್ಯ. ಹಾಗೆಯೇ ಭಾರತದ ಅಸ್ತಿತ್ವಕ್ಕೆ ದಕ್ಕೆ ತರುವ ಯಾವುದೇ ಆಕ್ಷೇಪಾರ್ಹ ವರದಿಗಳನ್ನು ಭಾರತದ ವಿರೋಧಿ ಶಕ್ತಿಗಳು ಗೂಗಲ್‌ನಲ್ಲಿ ಪ್ರಕಟಿಸಿದ್ದರೆ ಅದನ್ನು ತಗೆದು ಹಾಕಲು ಮತ್ತು ಹಾಗೆ ಪ್ರಕಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾನೂನು ಈಗಾಗಲೇ ಜಾರಿಯಲ್ಲಿದೆ. ಅದು ಆಳುವ ಸರ್ಕಾರದ ಜವಾಬ್ದಾರಿ ಕೂಡ ಆಗಿದೆ. ಇಷ್ಟೆಲ್ಲದರ ಹೊರತಾಗಿಯೂ ಈ 'ಭಾರತ ವಿರೋಧಿ' ಎಂಬ ಕೇಂದ್ರದ ಮೋದಿ ಸರ್ಕಾರದ ಸಚಿವ ಅನುರಾಗ್ ಠಾಕೂರ್ ಈ ಹೇಳಿಕೆಯ ಅರ್ಥವೇನು ಎಂಬ ಪ್ರಶ್ನೆ ಉದ್ಬವವಾಗಿದೆ. ಆ ಕುರಿತು ಯಾವುದೇ ವಿವರಣೆಗಳು, ಮಾಹಿತಿಗಳು ಪ್ರಕಟಗೊಂಡಿಲ್ಲವಾದ ಕಾರಣಕ್ಕಾಗಿ ಈ ಕೆಳಗಿನ ಪ್ರಶ್ನೆಗಳನ್ನು ನಾವು ಕೇಳಲೇಬೇಕಾಗಿದೆ. ಏಕೆಂದರೆ ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಅವರ ವಿರುದ್ದ ಮಾಡುವ ಪ್ರತಿ ಟೀಕೆಯನ್ನು, ಪ್ರತಿಭಟನೆಯನ್ನು ದೇಶದ್ರೋಹ ಎಂಬಂತೆ ಬಿಂಬಿಸಲು ಆರಂಬಿಸಿದೆ. ಆ ಕುರಿತು ಬಿಜೆಪಿ ಐಟಿ ಸೆಲ್ ನವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವ ಮೂಲಕ, ಅವರ ಪಕ್ಷದ ಲೀಗಲ್ ಸೆಲ್‌ ಮೂಲಕ ಕೇಸು ದಾಖಲಿಸುವ ಮೂಲಕ, ಅಂತಹವರ ಮೇಲೆ ಮಾರಣಾಂತಿಕ ದಾಳಿ ನಡೆಸುವ ಮೂಲಕ ಅಂತಹ ವಿರೋಧಗಳನ್ನು ಹತ್ತಿಕ್ಕುವ ಯತ್ನ ನಡೆಯುತ್ತಲೇ ಬಂದಿದೆ. ಆ ಕಾರಣಕ್ಕಾಗಿಯೇ ಕೇಂದ್ರ ಸಚಿವರ ಈ 'ಭಾರತ ವಿರೋಧಿ' ಎಂಬ ಹೇಳಿಕೆಯ ಕುರಿತು ಸಂದೇಹ ವ್ಯಕ್ತವಾಗಿದೆ. ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ ಅದೇ ನಿಟ್ಟಿನಲ್ಲಿ ಯೋಚಿಸಿ ಪ್ರಶ್ನಿಸುವುದಾದರೆ ಅವರುಗಳ 'ಭಾರತ ವಿರೋಧಿ ವರದಿ' ಏನಾಗಿರಬಹುದು? ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದದ ವರದಿಗಳೇ? ಪ್ರತಿಭಟನಾ ನಿರತ ರೈತರ ಮೇಲೆ ಮೋದಿ ಸಂಪುಟದ ಸಚಿವರ ಪುತ್ರನ ಜೀಪು ಹತ್ತಿಸಿ ನಡೆಸಿದ ನರಮೇಧ ದ ವರದಿಯೇ? ಉತ್ತರಪ್ರದೇಶದ ಅಥ್ರಾಸ್‌ನಲ್ಲಿ ದುಷ್ಕರ್ಮಿಗಳು ಅತ್ಯಾಚಾರ ನಡೆಸಿ ಕೊಲೆಗೈದ ಯುವತಿಯ ಶವದ ಮುಖವನ್ನು ಆಕೆಯ ಹೆತ್ತವರಿಗೆ ನೋಡಲು ಬಿಡದೆ ನಡುರಾತ್ರಿ ವೇಳೆಗೆ ಯೋಗಿ ಆದಿತ್ಯನಾಥನ ಸರ್ಕಾರದ ಅದಿಕಾರಿಗಳು ಸುಟ್ಟುಹಾಕಿದ ಕುರಿತಾದ ವರದಿಯೇ? ಬಿಜೆಪಿ ಶಾಸಕನಿಂದಲೇ ನಡೆದ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಆಕೆಯ ಹೆತ್ತವರನ್ನು, ಆಕೆಯ ಪರ ನಿಂತ ಸಂಬಂಧಿಕರನ್ನು ಹಾಡು ಹಗಲೇ ಅಪಘಾತ ನಡೆಸಿ ಮಾಡಿದ ಹತ್ಯೆಯ ಕುರಿತ ವರದಿಯೇ? ದಾದ್ರಿಯಲ್ಲಿ ಸೈನಿಕನೊಬ್ಬನ ತಂದೆ ಅರ್ಧ ಕೆಜಿಯಷ್ಟು ಗೋಮಾಂಸ ಹೊಂದಿದ್ದ ಆರೋಪದ ಮೇಲೆ ಆ ವೃದ್ದನನ್ನು ಹೊಡೆದು ಕೊಂದ ಕುರಿತಾದ ವರದಿಯೇ? ದೇಶದಲ್ಲಿ ಪ್ರಭಲ ಪೋಲೀಸ್ ಇಲಾಖೆ ಇದ್ದಾಗಲೂ ಆಡಳಿತ ಪಕ್ಷದ ಕಾರ್ಯಕರ್ತರು ಅಕ್ರಮ ದನ ಸಾಗಾಟದ ಹೆಸರಲ್ಲಿ ಹಲ್ಲೆ ನಡೆಸಿ ಕೊಲೆ ನಡೆಸುತ್ತಿರುವ ಕುರಿತಾದ ವರದಿಯೇ? ಚರ್ಮ ಸುಲಿವ ಕುಲಕಸುಬು ಮಾಡಿಕೊಂಡಿದ್ದ ಚಮ್ಮಾರನ ಮೇಲೆ ನಡೆದ ದಾಳಿಯ ವರದಿಯೇ? ಗೋದ್ರಾ ಹತ್ಯಾಕಾಂಡದ ವಿರುದ್ಧ ಹೋರಾಟ ನಡೆಸಿದ್ದಕ್ಕೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್‌ ಮತ್ತವರ ಕುಟುಂಬಕ್ಕಾದ ಹೀನಸ್ಥಿತಿಯ ಕುರಿತು ಭಿತ್ತರಗೊಳ್ಳುತ್ತಿರುವ ಸಾಲುಸಾಲು ವರದಿಗಳೇ? ನ್ಯಾಯದ ಪರ ಜೀವನವಿಡೀ ಹೋರಾಡುತ್ತಲೇ ಬಂದ 70- 80- 90 ವರ್ಷ ಮುದಿ ಪ್ರಾಯದ ಹಿರಿಯ ಚಿಂತಕರು, ನಿವೃತ್ತ ಉಪನ್ಯಾಸಕರು, ಕವಿಗಳು, ಸಾಹಿತಿಗಳು ಪರಿಸವಾದಿಗಳಾದ ಆನಂದ್ ತೇಲ್ತುಂಬ್ಡೆ , ವರವರರಾವ್ ವೆರ್ನನ್ ಗೊನ್ಸಾಲ್ವಿಸ್, ಅರುಣ್ ಫಿರೇರಾ, ಗೌತಮ್ ನವ್ಲಾಖ, ಸುಧಾ ಭಾರದ್ವಾಜ್ ರವರುಗಳು ಪ್ರಧಾನಿ ಮೋದಿಯವರ ಹತ್ಯೆಯ ಪಿತೂರಿಯ ಸುಳ್ಳು ಆರೋಪದ ಮೇಲೆ ಜೈಲು ಸೇರಿರುವ ಕುರಿತಾದ ವರದಿಯೇ? ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ ನಂಬರ್ ಒನ್ ಆಗಿರುವ ಕುರಿತಾದ ವರದಿಯೇ? ನಿರಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ದೇಶದ ರಾಜಧಾನಿಯಲ್ಲಿ ನಡೆದ ರೈತವಿರೋಧಿ ಕೃಷಿ ಮಸೂದೆಯ ವಿರುದ್ಧದ ಪ್ರತಿಭಟನೆಗಳ ಫೋಟೊ, ವಿಡಿಯೋ ಹಾಗೂ ವರದಿಗಳೇ? ಅಂಬೇಡ್ಕರ್ ಸಂವಿಧಾನದ ಆಶಯಗಳನ್ನೆ ಬುಡಮೇಲುಗೊಳಿಸುವ ಸಿಎಎ, ಎನ್‌ಆರ್‌ಸಿ ಕಾಯ್ದೆಗಳ ದುಷ್ಪರಿಣಾಮಗಳ ಕುರಿತಾದ ವರದಿಯೇ? ಇಡೀ ದೇಶದಲ್ಲಿ ಕೇವಲ 567 ಕೊರೊನಾ ಪಾಸಿಟಿವ್ ಇದ್ದ ಸಮಯದಲ್ಲಿ ಅವರುಗಳನ್ನು ಕಠಿಣ ಕೊರೆಂಟೈನ್‌ಗೆ ಒಳಪಡಿಸಿ ಆ ವಿದೇಶಿ ವೈರಸ್ ಒಳ ಬಾರದಂತೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚುವ ಬದಲಿಗೆ ಇಡೀ ದೇಶದ 137ಕೋಟಿ ಜನರನ್ನು ಲಾಕ್‌ಡೌನ್ ಗೆ ಒಳಪಡಿಸಿ, ತಮ್ಮ ಊರಿನಿಂದ ಸಾವಿರಾರು ಕಿ.ಮೀ ದೂರದೂರಿಗೆ ಹೊಟ್ಟೆಪಾಡಿನ ಉದ್ಯೋಗಕ್ಕಾಗಿ ಹೋಗಿದ್ದ ವಲಸೆ ಕಾರ್ಮಿಕರು ಹೊಟ್ಟೆಗಿಲ್ಲದೆ ಸಾಯುವಂತೆ ಮಾಡಿದ ಅವೈಜ್ಞಾನಿಕ ಲಾಕ್‌ಡೌನ್ ಕುರಿತಾದ ವರದಿಯೇ? ಪೂರ್ವತಯಾರಿ ಇಲ್ಲದೆ ಘೋಷಿಸಲ್ಪಟ್ಟ ನೋಟುಬ್ಯಾನ್ ನಿಂದ ದೇಶದೊಳಗಿನ ಅಷ್ಟೂ ಕಪ್ಪುಹಣವನ್ನು ಬಿಳಿಯಾಗಿಸಲು ಅನುಕೂಲ ಮಾಡಿಕೊಟ್ಟ ಕೇಂದ್ರ ಸರ್ಕಾರದ ವೈಫಲ್ಯದ ಕುರಿತು ಮಾಹಿತಿಯನ್ನೊಳಗೊಂಡ ವರದಿಯೇ? ಮೋದಿ ಸರ್ಕಾರದ ತುಘಲಕ್ ಶೈಲಿಯ ಆಡಳಿತದ ಪರಿಣಾಮವಾಗಿ ದೇಶದ ಜಿಡಿಪಿ ಮೈನಸ್ 23.9% ಗೆ ಕುಸಿದಿರುವುದರ ಕುರಿತಾದ ವರದಿಯೇ? ಮೋದಿ ಆಡಳಿತದಲ್ಲಿ ದ್ವಿಗುಣಗೊಂಡಿರುವ ವಿದೇಶಿ ಸಾಲದ ಕುರಿತಾದ ಮಾಹಿತಿಗಳೇ? ಅಥವಾ ಅದೆಲ್ಲದರ ಪರಿಣಾಮವಾಗಿ ದೇಶದ ನಿರುದ್ಯೋಗ ಪ್ರಮಾಣವು ಕಳೆದ 45ವರ್ಷಗಳಷ್ಟು ಹಿಂದಿನ ಮಟ್ಟಕ್ಕೆ ಏರಿಕೆ ಕಂಡದ್ದರ ಕುರಿತಾದ ವರದಿಗಳೇ? ಇತ್ಯಾದಿ, ಇತ್ಯಾದಿ, ಇತ್ಯಾದಿ.. ಇವು ಯಾವುವೂ ಅಲ್ಲವಾದರೆ ಮತ್ತೇನಿರಬಹುದು. ನಿಮಗ್ಯಾರಿಗಾದರೂ ಗೊತ್ತಾ? ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement