Advertisement

ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ - ರೈತ, ಕಾರ್ಮಿಕ ಬದುಕು ಬರ್ಬರ!

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು ಹಾಗೂ ಜನಪರ ಹೋರಾಟಗಾರರು) ಇದೇ ಆಗಸ್ಟ್ 10 ರಂದು ಸಂಸತ್ತಿನಲ್ಲಿ ಮಂಡನೆಯಾಗಬಹುದು ಎಂದು ಭಾವಿಸಲಾಗಿದ್ದ ವಿದ್ಯುತ್ ತಿದ್ದುಪಡಿ ಮಸೂದೆ-2021, ಪ್ರಾಯಶಃ ಈ ಅಧಿವೇಶನದಲ್ಲಿ ಮಂಡನೆಯಾಗಲಾರದು. ಈ ಸೂಚನೆ ದೊರೆತಿದ್ದರಿಂದ ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ಇಲಾಖೆ ನೌಕರರು ಹಾಗೂ ರೈತರು ಜಂಟಿಯಾಗಿ ನಡೆಸಬೇಕೆಂದಿದ್ದ ದೇಶವ್ಯಾಪಿ ಹೋರಾಟವನ್ನು ಮುಂದೂಡಿದ್ದಾರೆ. ತಲೆಯ ಮೇಲಿನ ಕತ್ತಿ ಇನ್ನು ತೂಗುತ್ತಿದೆ ಆದರೆ ಮೋದಿ ಸರ್ಕಾರವು ತನ್ನ ಗುಪ್ತ ಅಜೆಂಡಾದ ಭಾಗವಾಗಿ ದೇಶವಿರೋಧಿ-ಜನದ್ರೋಹಿ ಕಾಯಿದೆಗಳನ್ನು ಜಾರಿಗೆ ತರುವಲ್ಲಿ ಕಳೆದ ಏಳು ವರ್ಷಗಳಿಂದ ಅನುಸರಿಸುತ್ತಿರುವ ಸಂವಿಧಾನ ವಿರೋಧಿ ತಂತ್ರ-ಕುತಂತ್ರಗಳನ್ನು ಗಮನಿಸಿದಾಗ ಪ್ರಜ್ನಾವಂತ ಜನರು ಹಿಂದೆಂದಿಗಿಂತಲೂ ಹೆಚ್ಚಿನ ಎಚ್ಚರದಲ್ಲಿರುವ ಅಗತ್ಯವಂತೂ ತುಂಬಾ ಇದೆ. ಈ ವಿದ್ಯುತ್ ಮಸೂದೆಯನ್ನೇ ಗಮನಿಸಿ: 2020ರ ಡಿಸೆಂಬರ್ 30 ರಂದು ರೈತ ನಾಯಕರ ಜೊತೆ ದೆಹಲಿಯಲ್ಲಿ ನಡೆದ ನಾಲ್ಕನೇ ಸುತ್ತಿನ ಸಭೆಯಲ್ಲಿ ಈ ಮಸೂದೆಯನ್ನು ಕೈಬಿಡುವುದಾಗಿ ಮೋದಿ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಆದರೂ ಸರ್ಕಾರ ಮಾನ್ಸೂನ್ ಅಧಿವೇಶನದ ವೇಳಾಪಟ್ಟಿಯಲ್ಲಿ ಸೇರಿಸಲು ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಜುಲೈ 25 ರಂದು ಕ್ಯಾಬಿನೆಟ್ ಪರಿಗಣನೆಗೆ ಮುಂದಿರಿಸಿತ್ತು. ಅಂದರೆ ರೈತರಿಗೆ ಕೊಟ್ಟ ಭರವಸೆಗೆ ದ್ರೋಹ ಬಗೆದು ಈ ಮಸೂದೆಯನ್ನು ಜಾರಿಗೆ ತರುವ ಪ್ರಯತ್ನಗಳು ಪ್ರಾರಂಭವಾಗಿವೆ. ಅದೇ ರೀತಿ, ಮೂರು ಕೃಷಿ ಸುಗ್ರೀವಾಜ್ನೆಗಳನ್ನು ಕೋವಿಡ್ ಸಂದರ್ಭದಲ್ಲಿ ಜಾರಿ ಮಾಡಿದ ಮೋದಿ ಸರ್ಕಾರ 2020ರ ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಎಲ್ಲಾ ಸಾಂವಿಧಾನಿಕ ರೀತಿ-ರಿವಾಜುಗಳನ್ನು ಗಾಳಿಗೆ ತೂರಿ, ಶಕ್ತಿಪ್ರದರ್ಶನದ ಮೂಲಕ ಮಸೂದೆಗಳನ್ನು ಪಾಸು ಮಾಡಿಸಿಕೊಂಡಿತು. ಹಾಗೆಯೇ ವಿರೋಧ ಪಕ್ಷಗಳು ಕೃಷಿ ನೀತಿಯ ವಿರುದ್ಧ ಹೊರಗೆ ಪ್ರತಿಭಟನೆ ಮಾಡುವ ಹೊತ್ತಿನಲ್ಲಿ ಕಾರ್ಮಿಕ ವಿರೋಧಿ ನೀತಿಗಳನ್ನು ಪಾಸು ಮಾಡಿತು. ಈ ಅಧಿವೇಶನದಲ್ಲಂತೂ ದೇಶದ ಸಾರ್ವಭೌಮತೆಯ ಜೊತೆಗೇ ರಾಜಿ ಮಾಡಿಕೊಂಡಿರುವ ಇಸ್ರೇಲಿನ ಪೆಗಾಸಸ್ ಗೂಢಚರ್ಯೆಯ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ಉತ್ತರವನ್ನು ಕೋರುತ್ತಾ ಪ್ರತಿಭಟಿಸುತ್ತಿರುವ ಹೊತ್ತಿನಲ್ಲಿ ಹತ್ತಾರು ಶಾಸನಗಳನ್ನು ಪಾಸು ಮಾಡಿಸಿಕೊಂಡಿದೆ. ಒಟ್ಟಿನಲ್ಲಿ ಈ ಸರ್ಕಾರಕ್ಕೆ ಜನರ ಬಗ್ಗೆಯಾಗಲೀ, ಸಾಂವಿಧಾನಿಕ ನಡಾವಳಿಗಳ ಬಗ್ಗೆಯಾಗಲೀ ಯಾವುದೇ ಕಾಳಜಿಯಿಲ್ಲದಿರುವುದರಿಂದ ವಿದ್ಯುತ್ ತಿದ್ದುಪಡಿ ಮಸೂದೆಯ ಜನದ್ರೊಹಿ ಪರಿಣಾಮಗಳ ಬಗ್ಗೆ ಜನರಲ್ಲಿ ನಿರಂತರ ಅರಿವು ಮೂಡಿಸುತ್ತಾ ಸದಾ ಸಮರಸನ್ನದ್ಧ ಸ್ಥಿತಿಯಲ್ಲಿರುವುದು ಅತ್ಯಗತ್ಯವಾಗಿದೆ. ತಲೆಯ ಮೇಲೆ ತೂಗುತ್ತಿರುವ ಕತ್ತಿ ಸೂಕ್ತ ಸಮಯಕ್ಕೆ ಕಾಯುತ್ತಿದೆಯಷ್ಟೆ. ಬೆಳಕಿನ ವಿರುದ್ಧ ನಡೆದುಬಂದಿರುವ ಕತ್ತಲ ಕುತಂತ್ರ ಈ ಹೊಸ ವಿದ್ಯುತ್ ತಿದ್ದುಪಡಿ ಮಸೂದೆಯು 2003ರಲ್ಲಿ ಜಾರಿಯಾದ ವಿದ್ಯುತ್ ಕಾಯಿದೆಗೆ ಕೆಲವು ಮೂಲಭೂತ ಬದಲಾವಣೆಗಳನ್ನು ತರುವ ಉದ್ದೇಶ ಹೊಂದಿದೆ. ಅದರಲ್ಲೂ ಈ ತಿದ್ದುಪಡಿಗಳು ವಿದ್ಯುತ್ ವಿತರಣಾ ಕ್ಷೇತ್ರದ ಸ್ವರೂಪವನ್ನೇ ಸಂಪೂರ್ಣವಾಗಿ ಜನವಿರೋಧಿಯಾಗಿ ಹಾಗೂ ಕಾರ್ಪೊರೇಟ್ ಶಕ್ತಿಗಳ ಪರವಾಗಿ ಬದಲಿಸಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ವಿದ್ಯುತ್ ಉತ್ಪಾದನೆ, ಸರಬರಾಜು ಮತ್ತು ವಿತರಣೆ ಮೂರೂ ಕ್ಷೇತ್ರಗಳೂ ಸರ್ಕಾರದ ಒಡೆತನದಲ್ಲಿರುತ್ತಿತ್ತು. ದೇಶದ ಸಂವಿಧಾನದಲ್ಲಿರುವ ಕಲ್ಯಾಣ ರಾಜ್ಯದ ಆಶಯಗಳಂತೆ ಸಕಲರಿಗೂ ಎಟುಕುವ ದರದ ವಿದ್ಯುತ್ ಹಾಗೂ ದೇಶದ ಕೈಗಾರಿಕೆ ಮತ್ತು ಕೃಷೀಯನ್ನು ಕಟ್ಟಲು ವಿದ್ಯುತ್ ಕ್ಷೇತ್ರ ಕೆಲಸ ಮಾಡಬೇಕೆಂಬುದು ಆಶಯವಾಗಿತ್ತು. ಹೀಗಾಗಿ ಇಲ್ಲಿ ಲಾಭಕ್ಕಿಂತ ಮುಖ್ಯವಾಗಿ ನಿರ್ವಹಣೆ ಬೇಕಾದಷ್ಟು ಶುಲ್ಕವನ್ನು ವಸೂಲಿ ಮಾಡಿ ಸಾಮಾಜಿಕ ಹಾಗೂ ಆರ್ಥಿಕ ಲಕ್ಷ್ಯಗಳನ್ನು ಈಡೇರಿಸುವುದು ವಿದ್ಯುತ್ ಕ್ಷೇತ್ರದ ಜವಾಬ್ದಾರಿಯಾಗಿತ್ತು. ಆದರೆ 1991ರಲ್ಲಿ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಹಾಗೂ ಆಗಿನ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಸರ್ವ ಸಮ್ಮತಿಯೊಂದಿಗೆ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸಂವಿಧಾನ ವಿರೋಧಿ ಕಾರ್ಪೊರೇಟ್ ಆರ್ಥಿಕ ತತ್ವಗಳು ಜಾರಿಗೆ ಬಂದವು. ಅದರಂತೆ ದೇಶದ ಅಭಿವೃದ್ಧಿಯೆಂದರೆ ಜನರ ಕಲ್ಯಾಣಕ್ಕಿಂತ ಮಾರುಕಟ್ಟೆ ಶಕ್ತಿಗಳ ಅಭಿವೃದ್ಧಿ ಎಂಬ ನೀತಿಗಳು ಮತ್ತು ಕಾರ್ಯಕ್ರಮಗಳು ಜಾರಿಯಾದವು. ಅದರ ಭಾಗವಾಗಿ ಎಲ್ಲಾ ಕ್ಷೇತ್ರಗಳಲ್ಲೂ, ವಿದ್ಯುತ್ ಕ್ಷೇತ್ರದಲ್ಲು ಖಾಸಗಿ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮತ್ತು ಖಾಸಗಿ ಕ್ಷೇತ್ರಕ್ಕೆ ಲಾಭ ಖಾತರಿ ಮಾಡಿಕೊಡುವ ನೀತಿಗಳು ಜಾರಿಗೆ ಬಂದವು. 1991ರ ನಂತರದಲ್ಲಿ ವಿದ್ಯುತ್ ಉತ್ಪಾದನಾ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಖಾಸಗೀಕರಣಗೊಂಡಿತು. ಮಹಾರಾಷ್ಟ್ರದಲ್ಲಿ ಎನ್ರಾನ್, ಕರ್ನಾಟಕದಲ್ಲಿ ಕೊಜೆಂಟ್ರಿಕ್ಸ್ ಕಂಪನಿಗಳು ದೇಶವನ್ನು ಸೂರೆ ಹೊಡೆಯಲು ಬಂದಿದ್ದ ಕಾಲವದು. ಕೊಜೆಂಟ್ರಿಕ್ಸ್ ನ ಅಧ್ಯಕ್ಷನಾಗಿದ್ದ ರಾನ್ ಸೋಮರ್ಸ್ ಮಹಾಶಯನಂತೂ ತಾನು ಭಾರತಕ್ಕೆ ಬಂದಿದ್ದೇ ಅತಿ ಸುರಕ್ಷಿತವಾಗಿ, ಅತಿ ಹೆಚ್ಚು ಲಾಭ ಮಾಡಲು ಎಂದು ಘೋಷಿಸಿದ್ದ (Highest Returns in Safest Heavens)! 2003ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಗಿನ ವಿರೋಧ ಪಕ್ಷವಾದ ಕಾಂಗ್ರೆಸ್ಸಿನ ಸರ್ವಸಮ್ಮತಿಯೊಂದಿಗೆ ವಿದ್ಯುತ್ ಪ್ರಸರಣೆ ಮತ್ತು ವಿತರಣಾ ಕ್ಷೇತ್ರಗಳನ್ನೂ ಕಾರ್ಪೊರೇಟೀಕರಿಸಿತು. ಸರ್ಕಾರದ ಒಡೆತನದಲ್ಲೇ ಇದ್ದರೂ ಅವುಗಳನ್ನು ಹಲವು ಸ್ವತಂತ್ರ ಕಂಪನಿಗಳನ್ನಾಗಿ ಒಡೆಯಲಾಯಿತು. ಮತ್ತು ಸ್ವತಂತ್ರವಾಗಿ ಮತ್ತು ಲಾಭದಾಯಕವಾಗಿ ಕಾರ್ಯನಿರ್ವಹಿಸಬೇಕೆಂದು ತಾಕೀತು ಮಾಡಲಾಯಿತು. ಹೀಗಾಗಿಯೇ 2003ರ ನಂತರದಲ್ಲಿ ಕರ್ನಾಟಕದಲ್ಲೂ ವಿದ್ಯುತ್ ವಿತರಣೆಯ ಜವಾಬ್ದಾರಿಯು ಕರ್ನಾಟಕ ವಿದ್ಯುತ್ ಮಂಡಲಿ (ಕೆ.ಇ.ಬಿ)ಯಿಂದ ಎಸ್ಕಾಂಗಳಿಗೆ ವರ್ಗಾಯಿಸಲಾಯಿತು (ಎಲೆಕ್ತ್ರಿಸಿಟಿ ಸಪ್ಲೈ ಕಂಪನಿ- ಎಸ್ಕಾಂ). ಅದರ ಭಾಗವಾಗಿಯೇ 2003 ರಿಂದ ಕರ್ನಾಟಕದಲ್ಲಿ ಬೆಸ್ಕಾಂ, ಹೆಸ್ಕಾಂ, ಚೆಸ್ಕಾಮ್..ಇತ್ಯಾದಿ ಆರು ಕಂಪನಿಗಳು ವಿದ್ಯುತ್ ಸರಬರಾಜನ್ನು ನಿರ್ವಹಿಸುತ್ತಿವೆ. ದೇಶಾದ್ಯಂತ ಇಂದು ಈ ಬಗೆಯ ಸರ್ಕಾರಿ ಒಡೆತನದ ಅಂದಾಜು ನೂರು ಎಸ್ಕಾಂ ಗಳಿವೆ. ಇವುಗಳು ವಿದ್ಯುತ್ ಉತ್ಪಾದನಾ ಕಂಪನಿಗಳಿಂದ ವಿದ್ಯುತ್ತನ್ನು ಖರೀದಿ ಮಾಡಿ ಗ್ರಾಹಕರಿಗೆ ಮಾರುತ್ತವೆ. ಅವರಿಂದ ಶುಲ್ಕವನ್ನು ಸಂಗ್ರಹಿಸಿ ವಿದ್ಯುತ್ ಉತ್ಪಾದಕ ಕಂಪನಿಗಳಿಗೆ ಬಾಕಿ ತೀರಿಸುತ್ತವೆ. ಅವು ಪ್ರತಿಯಾಗಿ ವಿದ್ಯುತ್ ಉತ್ಪಾದನೆಗಾಗಿ ಕೊಂಡಿದ್ದ ಕಲ್ಲಿದ್ದಲು ಇನ್ನಿತ್ಯಾದಿ ಕಂಪನಿಗಳಿಗೆ ಬಾಕಿ ತೀರಿಸುತ್ತವೆ. ಹೀಗೆ ಒಟ್ಟಾರೆ ವಿದ್ಯುತ್ ಉತ್ಪಾದನಾ- ವಿತರಣಾ ಚಕ್ರದಲ್ಲಿ ಸುಲಭ ಹಣಕಾಸು ಹರಿದಾಟಕ್ಕೆ ವಿತರಣಾ ಕಂಪನಿಗಳ ಹಾಗೂ ಸರ್ಕಾರದ ಪಾತ್ರ ತುಂಬಾ ಮುಖ್ಯವಾದದ್ದು. ಕ್ರಾಸ್ ಸಬ್ಸಿಡಿ ಎಂಬ ಪ್ರಜಾತಾಂತ್ರಿಕ ದರನೀತಿ ವಿದ್ಯುತ್ ವಿತರಣೆ ಮಾಡುವಾಗ ಸರ್ಕಾರಿ ಮಾಲೀಕತ್ವದ ಕಂಪನಿಗಳು ಈವರೆಗೆ ಬಡ ಗ್ರಾಹಕರಿಗೆ ಹಾಗೂ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಕಡಿಮೆ ಶುಲ್ಕವನ್ನು ವಿಧಿಸುತ್ತಿದ್ದರೆ, ಹೆಚ್ಚಿನ ವಿದ್ಯುತ್ ಬಳಸುವ ಹಾಗೂ ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆದಾರರಿಗೆ ಉತ್ಪಾದನ ವೆಚ್ಚಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿದ್ದವು. ಉದಾಹರಣೆಗೆ ಇಂದು ಒಂದು ಯುನಿಟ್ ವಿದ್ಯುತ್‌ನ ಸರಾಸರಿ ಬೆಲೆ 4 ರೂ. ಎಂದಿಟ್ಟುಕೊಂಡರೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ರೈತರ ಪಂಪು ಸೆಟ್ಟುಗಳಿಗೆ ಸಾಮಾನ್ಯವಾಗಿ ಯಾವ ರಾಜ್ಯಗಳಲ್ಲೂ ಈವರೆಗೆ ಶುಲ್ಕ ವಿಧಿಸುತ್ತಿರಲಿಲ್ಲ. ಇನ್ನು 100 ಯುನಿಟ್ ವರೆಗೆ ಬಳಕೆ ಮಾಡುವ ಬಡ ಗ್ರಾಹಕರಿಗೆ 4 ರೂ. ಗಿಂತ ಕಡಿಮೆ ಶುಲ್ಕ ವಿಧಿಸುತ್ತಿದ್ದರೆ 100 ಯುನಿಟ್‌ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್ಟಿಗೆ 6-10 ರೂ ಶುಲ್ಕ ವಿಧಿಸಲಾಗುತ್ತಿತ್ತು. ಅಂದರೆ ಉಳ್ಳವರಿಗೆ ಹೆಚ್ಚು ದರ ವಿಧಿಸಿ ಬಡವರಿಗೆ ಮತ್ತು ಕೃಷಿಕರಿಗೆ ಅಗ್ಗದ ದರದಲ್ಲಿ ಅಥವಾ ಉಚಿತವಾಗಿ ವಿದ್ಯುತ್ ಒದಗಿಸಲಾಗುತ್ತಿತ್ತು. ಇದನ್ನೇ ಆರ್ಥಿಕ ಪರಿಭಾಷೆಯಲ್ಲಿ ಕ್ರಾಸ್ ಸಬ್ಸಿಡಿ ಎನ್ನುತ್ತಾರೆ. ಕೆಲವೊಮ್ಮೆ ರೈತರ ಪಂಪ್‌ಸೆಟ್ಟುಗಳ ವಿದ್ಯುತ್ ಶುಲ್ಕವನ್ನು ರಾಜ್ಯ ಸರ್ಕಾರಗಳು ಸಬ್ಸಿಡಿ ಒದಗಿಸುವ ಮೂಲಕ ಭರಿಸುತ್ತಿದ್ದವು, ಈ ಸಬ್ಸಿಡಿ ಮತ್ತು ಕ್ರಾಸ್ ಸಬ್ಸಿಡಿಗಳು ಒಂದು ಕಲ್ಯಾಣ ರಾಜ್ಯದ ಕರ್ತವ್ಯ. ಆದರೆ ಮಾರುಕಟ್ಟೆ ಮತ್ತು ಲಾಭವೇ ಮುಖ್ಯವಾದ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರವು ಸರಕು ಮತ್ತು ಸೇವೆ ಒದಗಿಸುವುದು ಹಾಗೂ ಅದರಲ್ಲಿ ಸಬ್ಸಿಡಿ-ಕ್ರಾಸ್ ಸಬ್ಸಿಡಿ ಅನುಸರಿಸುವುದು ಅತಿದೊಡ್ಡ ಮಾರುಕಟ್ಟೆ ವಿರೋಧಿ ತತ್ವವಾಗಿದೆ. ಆದ್ದರಿಂದ ಅವು ಸರ್ಕಾರಗಳು ಸರಕು-ಸೇವಾ ಉದ್ಯಮಗಳಿಂದ ಹೊರನಡೆಯಬೇಕೆಂದೂ ಹಾಗೂ ಗ್ರಾಹಕರಿಗೆ ಬೆಲೆ ವಿಧಿಸುವ ಅಧಿಕಾರವನ್ನು ತಮಗೆ ಕೊಡಬೇಕೆಂದೂ ಆಗ್ರಹಿಸುತ್ತಾ ಬಂದಿವೆ. ಅದರ ಭಾಗವಾಗಿಯೇ ಸರ್ಕಾರಿ ಕ್ಷೇತ್ರಗಳೆಲ್ಲಾ ಇದ್ದಕ್ಕಿದ್ದಂತೆ ನಷ್ಟ ಎದುರಿಸುವ ಪವಾಡಗಳು ಶುರುವಾದವು. ಸರ್ಕಾರದ ನಷ್ಟಗಳು ಖಾಸಗಿಯ ಲಾಭವಾಗುವ ಪವಾಡ ನಮ್ಮನಾಳುವ ಎಲ್ಲಾ ಸರ್ಕಾರದ ತತ್ವಗಳೂ ಕಾರ್ಪೊರೇಟ್ ಪರವಾಗಿ ಬದಲಾಗಿರುವುದರಿಂದ ಇದ್ದಕ್ಕಿದಂತೆ ಕಳೆದ ಹತ್ತು ವರ್ಷಗಳಿಂದ ಲಾಭದಾಯಕ ಸರ್ಕಾರೀ ಕಂಪನಿಗಳೆಲ್ಲಾ ನಷ್ಟವನ್ನು ಅನುಭವಿಸಲು ಪ್ರಾರಂಭಿಸಿವೆ. ಅದನ್ನು ನೆಪವಾಗಿ ಬಳಸಿಕೊಂಡು ಸರ್ಕಾರಗಳು ಸರ್ಕಾರೀ ಒಡೆತನದಲ್ಲಿರುವ ಕಂಪನಿಗಳನ್ನು ಖಾಸಗೀಕರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರೀ ಸಂಪತ್ತಿನ ಖಾಸಗೀಕರಣದ ವೇಗ ದುಪ್ಪಟ್ಟು ಹೆಚ್ಚಾಗಿದೆ. ಮೋದಿ ಸರ್ಕಾರ ಇದೇ ಕುತಂತ್ರವನ್ನು ವಿದ್ಯುತ್ ಕ್ಷೇತ್ರಕ್ಕೂ ಅನ್ವಯಿಸುತ್ತಿದೆ. ಅದರ ಭಾಗವಾಗಿ ವಿದ್ಯುತ್ ವಿತರಣಾ ಕಂಪನಿಗಳು ತೀವ್ರವಾದ ನಷ್ಟವನ್ನು ಎದುರಿಸುತ್ತಿವೆ. ಅದನ್ನು ಭರಿಸಲು ಸಾಧ್ಯವಿಲ್ಲವಾದ್ದರಿಂದ ಖಾಸಗೀಕರಿಸಲಾಗುವುದು ಎಂದು ಘೋಷಿಸಿದೆ. ವಿದ್ಯುತ್ ವಿತರಣಾ ಕಂಪನಿಗಳ ನಷ್ಟಕ್ಕೆ ಕಾರಣಗಳು-ಜನಪರ ಪರಿಹಾರಗಳು ವಾಸ್ತವದಲ್ಲಿ ವಿದ್ಯುತ್ ವಿತರಣಾ ಕಂಪನಿಗಳು ನಷ್ಟದಲ್ಲಿರುವುದು ನಿಜ. ಒಂದು ಅಂದಾಜಿನ ಪ್ರಕಾರ ಅದರ ಪ್ರಮಾಣ 4 ಲಕ್ಷ ಕೋಟಿ ರೂಪಾಯಿ. ಅದಕ್ಕೆ ಪ್ರಧಾನ ಕಾರಣ ಸರ್ಕಾರವೇ. ಏಕೆಂದರೆ ಬೇರೆಬೇರೆ ರಾಜ್ಯ ಸರ್ಕಾರಗಳು ಬಾಕಿ ಉಳಿಸಿಕೊಂಡಿರುವ ಒಂದುವರೆ ಲಕ್ಷ ಕೋಟಿಗೂ ಹೆಚ್ಚಿನ ಸಬ್ಸಿಡಿ ಮೊತ್ತವನ್ನು ವಿತರಣಾ ಕಂಪನಿಗಳಿಗೆ ನೀಡಿಲ್ಲ. ಎರಡನೆಯದಾಗಿ ವಿತರಣಾ ಕಂಪನಿಗಳು ಎದುರಿಸುತ್ತಿರುವ ಪ್ರಸರಣಾ ಹಾಗೂ ವಾಣಿಜ್ಯ ನಷ್ಟ (ಎಟಿಸಿ-ಅಗ್ರಿಗೇಟ್ ಟೆಕ್ನ್ನಿಕಲ್ ಅಂಡ್ ಕಮರ್ಷಿಯಲ್ ಲಾಸ್). ಅಂದರೆ ನೂರು ಮೆಗಾವ್ಯಾಟಿನಷ್ಟು ವಿದ್ಯುತ್ತನ್ನು ಉತ್ಪಾದನೆಯಾದ ಸ್ಥಳದಿಂದ ಬಳಕೆದಾರರವರೆಗೆ ಲೈನ್‌ಗಳ ಮೂಲಕ ಸಾಗಿಸುವಾಗ ಅಂದಾಜು ಶೇ. 15 ರಷ್ಟು ವಿದ್ಯುತ್ತು ಸರಿಯಾದ ನಿರ್ವಹಣೆಯಿಲ್ಲದೆ ತಾಂತ್ರಿಕ ಕಾರಣಗಳಿಂದ ಪೋಲಾಗುತ್ತದೆ. ಇದನ್ನು ಸರಿಯಾದ ತಾಂತ್ರಿಕತೆಯನ್ನು ಬಳಸುವ ಮೂಲಕ ಮುಕ್ಕಾಲು ಭಾಗ ನಿಲ್ಲಿಸಬಹುದು. ಇನ್ನು ಕೆಲವು ಸಣ್ಣ ದೊಡ್ಡ ವಿದ್ಯುತ್ ಕಳವುಗಳು. ಈ ವಾಣಿಜ್ಯ ನಷ್ಟವನ್ನು ಸರಿಯಾದ ಮೀಟರಿಂಗ ಮತ್ತು ವಿಚಕ್ಷಣೆಯ ಮೂಲಕ ನಿಯಂತ್ರಿಸಬಹುದು. ಉದಾಹರಣೆಗೆ ದೆಹಲಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ. 58 ರಷ್ಟಿದ್ದ ಎಟಿಸಿ ನಷ್ಟವನ್ನು ಶೇ. 7 ಕ್ಕೆ ಇಳಿಸಿರುವುದರಿಂದ ಒಂದು ಅಂದಾಜಿನ ಪ್ರಕಾರ 1.2 ಲಕ್ಷ ಕೋಟಿ ಉಳಿತಾಯವಾಗಿದೆ. ಮೂರನೆಯದಾಗಿ ವಿದ್ಯುತ್ ಉತ್ಪಾದಕಾ ಕಂಪನಿಗಳು ಅದರಲ್ಲೂ ಖಾಸಗಿ ವಿದ್ಯುತ್ ಉತ್ಪಾದಕಾ ಕಂಪನಿಗಳು ಉತ್ಪಾದಕ ವೆಚ್ಚಕ್ಕಿಂತ ಹಲವು ಪಟ್ಟು ಅಧಿಕ ಬೆಲೆ ನಿಗದಿ ಮಾಡುತ್ತವೆ. ಮತ್ತು ಉತ್ಪಾದನೆಯಲ್ಲೂ ಉತ್ತಮ ತಾಂತ್ರಿಕತೆಯನ್ನು ಬಳಸದೆ ಉತ್ಪಾದಕ ವೆಚ್ಚ ಹೆಚ್ಚಾಗುವಂತೆ ಮಾಡುತ್ತಿವೆ.. ಅಂದರೆ ವಿತರಣಾ ಕಂಪನಿಗಳು ನಷ್ಟವನ್ನೆದುರಿಸುತ್ತಿರುವುದು ನಿಜ. ಆದರೆ ಅದನ್ನು ಜನರ ಮೇಲೆ ವರ್ಗಾಯಿಸದೆ ಹಾಗೂ ಅದನ್ನು ನೆಪವಾಗಿ ಬಳಸಿಕೊಳ್ಳದೆ ಸೂಕ್ತ ಆರ್ಥಿಕ ಹಾಗೂ ತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಿಯಂತ್ರಣಕ್ಕೆ ತರುವ ರಾಜಮಾರ್ಗ ಸರ್ಕಾರಕ್ಕಿದೆ. ವಿದ್ಯುತ್ ಮಸೂದೆ-2021- ಬಡವರ ಬೆಳಕು ಕಸಿವ ನೀಲನಕ್ಷೆ ಆದರೆ ಸರ್ಕಾರ ವಿತರಣಾ ಕಂಪನಿಗಳ ಈ ಪರಿಸ್ಥಿತಿಯನ್ನು ಬಳಸಿಕೊಂಡು ಇಡೀ ವಿತರಣಾ ಕ್ಷೇತ್ರವನ್ನೇ ಖಾಸಗೀಕರಿಸಲು ಹೊರಟಿದೆ ಮತ್ತು ಈಗಾಗಲೇ ತತ್ತರಿಸಿರುವ ಜನರಿಗೆ ಕೊಡುತ್ತಿದ್ದ ಸೌಕರ್ಯಗಳನ್ನು ಕಿತ್ತುಕೊಂಡು ಜನರನ್ನು ಮತ್ತಷ್ಟು ಹಿಂಡುವ ಮೂಲಕ ಕಾರ್ಪೊರೇಟ್ ಲಾಭವನ್ನು ಖಾತರಿಪಡಿಸಲು ಹೊರಟಿದೆ. ಈ ಸುಲಿಗೆಯ ನೀಲನಕ್ಷೆಯೇ ವಿದ್ಯುತ್ ತಿದ್ದುಪಡಿ ಮಸೂದೆ-2021 ಈ ಮಸೂದೆಯ ಉದ್ದೇಶವೇ ವಿದ್ಯುತ್ ವಿತರಣಾ ಕ್ಷೇತ್ರವನ್ನು ಖಾಸಗೀಕರಿಸುವುದು. ಆದರೆ ಲಾಭದ ಉದ್ದೆಶದಿಂದ ಉದ್ಯಮದಲ್ಲಿರುವ ಹಾಗೂ ಹೆಚ್ಚು ಲಾಭವಿರುವ ಕ್ಷೇತ್ರಗಳಲ್ಲಿ ಮಾತ್ರ ಹೂಡಿಕೆ ಮಾಡುವ ಕಾರ್ಪೊರೇಟ್ ಕಂಪನಿಗಳು ಈಗಾಗಲೇ ನಷ್ಟದಲ್ಲಿರುವ ವಿದ್ಯುತ್ ವಿತರಣಾ ಕ್ಷೇತ್ರಕ್ಕೇಕೆ ಬರುತ್ತಾರೆ? ಆದ್ದರಿಂದಲೇ ಈ ಮಸೂದೆಯು ವಿದ್ಯುತ್ ವಿತರಣೆಯನ್ನು ಲಾಭದಾಯಕ ಮಾಡುವ ಹಲವಾರು ಪ್ರಸ್ತಾಪಗಳನ್ನು ಹೊಂದಿದೆ. ಕ್ರಾಸ್ ಸಬ್ಸಿಡಿ ರದ್ದು-ಒಂದೇ ದೇಶ, ಒಂದೇ ಬೆಲೆ! ಅದರಲ್ಲಿ ಮೊಟ್ಟ ಮೊದಲನೆಯದು ಬಡವರಿಗೆ, ರೈತರಿಗೆ ಕೊಡುತ್ತಿದ್ದ ಸಬ್ಸಿಡಿ ದರದ ವಿದ್ಯುತ್ತನ್ನು ರದ್ದುಮಾಡಿ ಎಲ್ಲರಿಗೂ ಒಂದೇ ದರವನ್ನು ನಿಗದಿ ಮಾಡುವುದು. ಕಾರ್ಪೊರೇಟ್ ಕಂಪನಿಗಳ ಪ್ರಕಾರ ವಿತರಣಾ ಕಂಪನಿಗಳು ನಷ್ಟವನ್ನೆದುರಿಸಲು ಕಾರಣ ಗ್ರಾಹಕರು ವಿದ್ಯುತ್ ಉತ್ಪಾದನೆ ಹಗೂ ವಿತರಣೆಗೆ ಎಷ್ಟು ವೆಚ್ಚವಾಗುವುದ್ದೋ ಅಷ್ಟು ಬೆಲೆಯನ್ನು ಕಟ್ಟದಿರುವುದು. ಆದ್ದರಿಂದ ವಿದ್ಯುತ್ ಬೆಲೆಯಲ್ಲಿ ರಿಯಾಯತಿ ಇರದೆ ಬಡವ-ಶ್ರೀಮಂತರೆನ್ನದೆ ಎಲ್ಲಾ ಗ್ರಾಹಕರು ಎಷ್ಟು ವೆಚ್ಚವಾಗುವುದೋ ಅಷ್ಟು ಬೆಲೆಯನ್ನು ಕಟ್ಟಬೇಕು. ಈ ಮಾರುಕಟ್ಟೆ ತತ್ವವನ್ನು ಮೋದಿ ಸರ್ಕಾರ ಚಾಚೂ ತಪ್ಪದೆ ಒಪ್ಪಿಕೊಂಡಿದೆ. ಹೊಸ ಮಸೂದೆಯ 12 (ii) ಅಂಶ ಹೀಗೆ ಹೇಳುತ್ತದೆ: “ Provided also that such surcharge and cross subsidies shall be progressively reduced by the State Commission in the manner as may be provided in the Tariff Policy:” ಎಂಬ ಕಲಮನ್ನು ಅಡಕ ಮಾಡಲಾಗಿದೆ. ಹಾಗೂ ಹೊಸ ಖಾಸಗೀ ವಿತರಣಾ ಕಂಪನಿಗಳಿಗೆ ಸರ್ಕಾರ ಈವರೆಗೆ ನೀಡುತ್ತಾ ಬಂದ ಎಲ್ಲಾ ಬಗೆಯ ಕ್ರಾಸ್ ಸಬ್ಸಿಡಿಗಳನ್ನು ವೇಗವಾಗಿ ಕಡಿತಗೊಳಿಸಲಾಗುವುದು ಎಂಬ ಭರವಸೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ 2016ರಲ್ಲಿ ಜಾರಿ ಮಾಡಿದ್ದ ಹೊಸ ವಿದ್ಯುತ್ ಶುಲ್ಕ ನೀತಿಗೂ ತಿದ್ದುಪಡಿ ತರುವ ಭರವಸೆಯನ್ನು ಅಡಕಗೊಳಿಸಲಾಗಿದೆ. ಅದರೆ ಒಂದೊಮ್ಮೆ ಈ ಮಸೂದೆ ಕಾಯಿದೆಯಾದರೆ ಸರ್ಕಾರೀ ಒಡೆತನದಲ್ಲಿರುವ ವಿತರಣಾ ಕಂಪನಿಗಳ ಬದಲಿಗೆ ಖಾಸಗಿ ವಿತರಣಾ ಕಂಪನಿಗಳಿಂದ ಅವರು ನಿಗದಿಪಡಿಸಿದ ಶುಲ್ಕವನ್ನು ತೆತ್ತು ರೈತರು ಮತ್ತು ಬಡವರು ವಿದುತ್ತನ್ನು ಖರೀದಿ ಮಾಡಬೇಕಿರುತ್ತದೆ. ಸಬ್ಸೀಡಿ ಇಲ್ಲದಿರುವುದರಿಂದ ಹಾಗೂ ಎಲ್ಲರಿಗೂ ಒಂದೇ ದರವಾದ್ದರಿಂದ ಅದು ಈಗಿರುವುದಕ್ಕಿಂತ ಸಹಜವಾಗಿಯೇ ಎರಡು-ಮೂರುಪಟ್ಟು ಹೆಚ್ಚಿರುತ್ತದೆ. ನೇರ ನಗದು ವರ್ಗಾವಣೆಯೆಂಬ ಬಳಸು ಮೋಸ ಆದರೆ ಆ ಮಸೂದೆಯಲ್ಲಿ ರಾಜ್ಯ ಸರ್ಕಾರಗಳು ಬೇಕಿದ್ದರೆ ಆ ನಂತರ ಕೆಲವು ನಿರ್ದಿಷ್ಟ ವರ್ಗಗಳ ಗ್ರಾಹಕರುಗಳ ಅಕೌಂಟಿಗೆ ಸಬ್ಸಿಡಿ ಹಣವನ್ನು ತುಂಬಬಹುದು ಎಂಬ ಅವಕಾಶವನ್ನು ನೀಡಿದೆ. ಆದರೆ ಗ್ಯಾಸ್ ಮತ್ತು ಗೊಬ್ಬರದ ವಿಷಯಗಳಲ್ಲಿ ಅದರಲ್ಲೂ ವಿಶೆಷವಾಗಿ ಅಡುಗೆ ಅನಿಲದ ವಿಷಯದಲ್ಲಿ ಈ ನೇರೆ ನಗದು ವರ್ಗಾವಣೆ ಎಂಬುದು ಹೇಗೆ ಜನರನ್ನು ಮೋಸ ಮಾಡುವ ತಂತ್ರವಾಗಿದೆ ಎಂಬುದನ್ನು ಈ ದೇಶದ ಜನ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಪ್ರಾರಂಭದ ಒಂದೆರಡು ವರ್ಷ ಬಡವರ ಮತ್ತು ರೈತರ ಅಕೌಂಟಿನಲ್ಲಿ ವಿದ್ಯುತ್ ಸಬ್ಸಿಡಿ ಹಣ ಬಂದರೂ ನಂತರದಲ್ಲಿ ಖಾಸಗಿ ಕಂಪನಿಗಳು ನಿಗದಿಪಡಿಸಿದಷ್ಟು ಶುಲ್ಕವನ್ನು ತೆರಲೇಬೇಕಾದ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರೀ ಪೇಯ್ಡ್ ಮೀಟರ್ ಎಂಬ ರಾಷ್ಟ್ರೀಯ ಕುತಂತ್ರ ಎಲ್ಲಕ್ಕಿಂತ ಹೆಚ್ಚಾಗಿ ಖಾಸಗಿ ವಿತರಣ ಕಂಪನಿಗಳಿಗಿದ್ದ ದೊಡ್ಡ ತಕರಾರು ಗ್ರಾಹಕ ವರ್ಗಗಳು ಶುಲ್ಕವನ್ನು ಪಾವತಿ ಮಾಡುವುದು ವಿದ್ಯುತ್ತಿನ ಸಬರಾಜನ್ನು ಮಾಡಿದ ತಿಂಗಳ ನಂತರ. ಆದರೆ ಆ ವರ್ಗಗಳು ತಿಂಗಳ ನಂತರ ಶುಲ್ಕ ಪಾವತಿ ಮಾಡದಿದ್ದರೆ? ಅದರಿಂದ ತಮ್ಮ ಇಡೀ ವ್ಯವಹಾರ ಯೋಜನೆಯೇ ತಳಕೆಳಗಾಗುವುದರಿಂದ ಈ ಖಾಸಗೀ ಕಂಪನಿಗಳು ಪ್ರೀ ಪೇಯ್ಡ್ ಮೀಟರಿಂಗ್ ಯೋಜನೆಯನ್ನು ಮುಂದಿಟ್ಟಿವೆ. ಸರ್ಕಾರ ಇದನ್ನು ಕೂಡ ಚಾಚೂ ತಪ್ಪದೆ ಒಪ್ಪಿಕೊಂಡಿದೆ. ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರಿಂಗ್ ಯೋಜನೆಯೆಂದರೆ ಪ್ರೀ ಪೀಯ್ಡ್ ಮೊಬೈಲ್ ರೀ ಚಾರ್ಜ್ ಇದ್ದಂತೆ. ಬಳಸುವ ಮುನ್ನವೇ ದುಡ್ಡು ಕಟ್ಟಬೇಕು. ಎಷ್ಟು ದುಡ್ಡು ಕಟ್ಟಲಾಗಿದೆಯೋ ಅಷ್ಟರವರೆಗೆ ಸೇವೆ ಲಭ್ಯ. ಆ ನಂತರ ಮತ್ತೆ ದುಡ್ಡು ತುಂಬುವವರೆಗೆ ಇನ್ ಕಮಿಂಗ್ ಮತ್ತು ಔಟ್ ಗೋಯಿಂಗ್ ಕಟ್! ಹಾಗೆಯೇ ವಿದ್ಯುತ್ ಕ್ಷೇತ್ರದಲ್ಲೂ ಇನ್ನು ಮುಂದೆ ಗ್ರಾಹಕರು ವಿದ್ಯುತ್ತನ್ನು ಬಳಸುವ ಮುಂಚೆಯೇ ಅದರ ಶುಲ್ಕವನ್ನು ತಮ್ಮ ಬ್ಯಾಂಕ್ ಅಕೌಂಟಿನಲ್ಲಿ ತುಂಬಿರಬೇಕು. ಅಥವಾ ಗ್ರಾಹಕರ ಅಕೌಂಟಿನಲ್ಲಿ ಎಷ್ಟು ಹಣವಿದೆಯೋ ಅಷ್ಟರವರೆಗೆ ವಿದ್ಯುತ್ ಸರಬರಜಾಗುತ್ತದೆ. ಹಣ ಮುಗಿದೊಡನೆ ವಿದ್ಯುತ್ ನಿಲ್ಲುತ್ತದೆ. ಇದರಿಂದ ಖಾಸಗಿ ವಿತರಕರ ಲಾಭ ಖಾತರಿಯಾಗುತ್ತದೆ. ಆದರೆ ಬಡ-ರೈತಾಪಿಯ ಬದುಕು?? ಆದರೂ ಮೋದಿ ಸರ್ಕಾರ 2019 ರಿಂದಲೇ ಸದ್ದಿಲ್ಲದೆ ಪ್ರೀ ಪೀಯ್ದ್ ಮೀಟರಿಂಗ್ ಯೋಜನೆಗೆ ಸನ್ನಾಹ ಪ್ರಾರಂಭಿಸಿದೆ. ಹಾಗೆ ನೋಡಿದರೆ ವಿದ್ಯುತ್ ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಸಂಬಂಧಿಸಿದ ಸಮವರ್ತಿ ಪಟ್ಟಿಯಲ್ಲಿದೆ. ಆದರೆ ರಾಜ್ಯಗಳ ಸಮ್ಮತಿಯನ್ನೂ ಪಡೆಯದೆ ಹಾಗೂ ಯಾವುದೇ ಶಾಸನಗಳ ಬೆಂಬಲವೂ ಇಲ್ಲದಂತೆ ಮೋದಿ ಸರ್ಕಾರ 2019ರಿಂದಲೇ ಒಂದು ರಾಷ್ಟೀಯ ಸ್ಮಾರ್ಟ್ ಮೀಟರಿಂಗ್ ಕಾರ್ಯಕ್ರಮ ಪ್ರಾರಂಭಿಸಿದೆ. 2020ರ ಬಜೆಟ್ಟಿನಲ್ಲೂ ಸಹ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ದೇಶದ 22 ಕೋಟಿ ವಿದ್ಯುತ್ ಮೀಟರ್‌ಗಳನ್ನು ಹಂತಹಂತವಾಗಿ ಸ್ಮಾರ್ಟ್ ಮತ್ತು ಪ್ರೀ ಪೀಯ್ಡ್ ಮೀಟರ್ ಆಗಿ ಬದಲಾಯಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಕೇಂದ್ರದ ಶಕ್ತಿ ಸಚಿವಾಲಯದ ಪೋರ್ಟಲ್ ನಲ್ಲಿ ದೇಶದಲ್ಲಿ ಈ ಸ್ಮಾರ್ಟ್ ಮೀಟರಿಂಗ್ ಯಾವ ಗತಿಯಲ್ಲಿ ನಡೆಯುತ್ತಿದೆ ಎಂಬುದರ ಮೇಲೆ ನಿಗಾ ಇಡೂತ್ತಾ ತ್ವರಿತಗೊಳಿಸಲು " *ನ್ಯಾಷನಲ್ ಸ್ಮಾರ್ಟ್ ಗ್ರಿಡ್ ಮಿಷನ್"* ಎಂಬ ಉಪ ಇಲಾಖೆಯನ್ನೇ ತೆರೆಯಲಾಗಿದೆ. ಅದರ ಡ್ಯಾಷ್ ಬೋರ್ಡ್ ಹೇಳುವಂತೆ 1.11 ಕೋಟಿ ಸ್ಮಾರ್ಟ್ ಮೀಟರ್ಗಳ ಸ್ಯಾಂಕ್ಷನ್ ಆಗಿದ್ದು 22 ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಅದರಲ್ಲಿ ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಅಳವಡಿಸಲಾಗಿರುವ 22 ಸಾವಿರ ಸ್ಮಾರ್ಟ್ ಮೀಟರ್ಗಳು ಸೇರಿಕೊಂಡಿವೆ. ಇದಲ್ಲದೆ ಉತ್ತರದ ಹಲವಾರು ರಾಜ್ಯಗಳಲ್ಲಿ ಈಗಾಗಲೇ 2.5 ಲಕ್ಷ ಪ್ರೀ ಪೇಯ್ಡ್ ಮೀಟರ್ಗಳನ್ನು ಹಾಕಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಈ ವೆಬ್ಸೈಟಿನಲ್ಲಿ ನೋಡಬಹುದು: https://www.nsgm.gov.in/en/state-wise-map ಹೀಗಾಗಿ ಈ ಮಸೂದೆ ಈ ಅಧಿವೇಶನದಲ್ಲಿ ಪಾಸಾಗದಿದ್ದರೂ ಪ್ರೀ ಪೀಯ್ದ್ ಮೀಟರಿಂಗ್ ಅರ್ಥಾತ್ ಜನರನ್ನು ಕತ್ತಲಿಂದ ಕಗ್ಗತ್ತಲಿಗೆ ದೂಡುವ ಕಾರ್ಯಕ್ರಮ ಮುಂದುವರೆಯುವ ಎಲ್ಲಾ ಸಾಧ್ಯತೆಗಳಿದೆ. ಉಳ್ಳವರಿಗೆ ಬೆಳಕೆಂದರೆ ಇಲ್ಲದವರಿಗೆ ಕತ್ತಲೇ ಹಾಗೆ ನೋಡಿದರೆ ಖಾಸಗಿ ವಿತರಕರು ಈಗಾಗಲೇ ಮಾರ್ಕೆಟ್‌ನಲ್ಲಿದ್ದಾರೆ. ದೇಶದ ಶೇ. 10 ರಷ್ಟು ವಿತರಣೆ ಖಾಸಗಿ ಸುಫರ್ದಿಯಲ್ಲಿದೆ. ಆದರೆ ಅದು ಮುಂಬೈ, ದೆಹಲಿ, ರಾಜಸ್ಥಾನ್ ಗಳ ಲಾಭ ಖಾತರಿ ನಗರಗಳಲ್ಲಿ ಮಾತ್ರ. ಅವರಿಗೆ ಒರಿಸ್ಸಾ ಹಾಗೂ ಬಿಹಾರಗಳ ನಗರಗಳ ವಿತರಣೆಯ ಅವಕಾಶಗಳಿದ್ದರೂ ಅದನ್ನು ಆಯ್ದುಕೊಳ್ಳಲಿಲ್ಲ. ಕಾರಣ ಅದು ಲಾಭದಾಯಕವಲ್ಲ. ಹೀಗಾಗಿ ನಾಳೆ ಸರ್ಕಾರೀ ವಿತರಣಾ ಕಂಪನಿಗಳನ್ನು ಸರ್ಕಾರಗಳೇ ಕೊಂದು ಹಾಕಿ ಕೇವಲ ಖಾಸಗಿಗಳೇ ಉಳಿದರೆ ಗ್ರಾಮೀಣ ಪ್ರದೇಶಗಳಿಗೆ ಮತ್ತು ಬಡಮಧ್ಯಮ ವಸತಿ ಪ್ರದೇಶಗಳಿಗೆ ಹಾಗೂ ಅವರ ಉದ್ದಿಮೆಗಳಿಗೆ ವಿದ್ಯುತ್ ಸಿಗುವ ಖಾತರಿಯೇನು? ಜೊತೆಗೆ ಸುಮಾರು 25 ಲಕ್ಷದಷ್ಟು ಉದ್ಯೋಗಿಗಳಿರುವ ವಿದ್ಯುತ್ ವಿತರಣಾ ಕ್ಷೇತ್ರ ಖಾಸಗಿಯಾದರೆ ಅರ್ಧಕ್ಕರ್ಧ ಉದ್ಯೋಗಿಗಳು ಬೀದಿಪಾಲಾಗಲಿದ್ದಾರೆ. ಆದ್ದರಿಂದ ಶತಾಯ ಗತಾಯ ಈ ದೇಶದ ಎಲ್ಲಾ ಜನರು ವಿದ್ಯುತ್ ಕ್ಷೇತ್ರದ ಈ ದೇಶದ್ರೋಹೀ ಜನದ್ರೋಹೀ ಖಾಸಗೀಕರಣವಾಗದಂತೆ ಸದಾ ಎಚ್ಚರದಿಂದಿರಬೇಕಿದೆ. ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement