ಮೋದಿ ಪಂಜಾಬ್ ಬೇಟಿ ಸಂದರ್ಭದ ಟ್ರಾಫಿಕ್ ಜಾಮ್ ಪ್ರಕರಣ- ಪಂಚರಾಜ್ಯ ಚುನಾವಣಾ ಗಿಮಿಕ್: ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪ
ಮೋದಿ ಪಂಜಾಬ್ ಬೇಟಿ ಸಂದರ್ಭದ ಟ್ರಾಫಿಕ್ ಜಾಮ್ ಪ್ರಕರಣ- ಪಂಚರಾಜ್ಯ ಚುನಾವಣಾ ಗಿಮಿಕ್: ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪ
Advertisement
ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಸಂದರ್ಭ ನಡೆದ ಸೆಕ್ಯುರಿಟಿ ಬ್ರೀಚ್ ಪ್ರಕರಣ ಮುಂಬರುವ ಪಂಚ ರಾಜ್ಯ ಚುನಾವಣೆಗಳನ್ನು ಎದುರಿಸಲು ಬಿಜೆಪಿ ನಡೆಸಿದ ಪೂರ್ವತಯಾರಿಯ ತಾಲೀಮೇ ಹೊರತು ಆ ರಾಜ್ಯ ಸರಕಾರದಿಂದುಂಟಾದ ಭದ್ರತಾ ಲೋಪವಲ್ಲ. ದೇಶದ ಪ್ರಧಾನಿಯ ಭದ್ರತೆಯಲ್ಲಿ ಕಾಂಗ್ರೆಸ್ ಯಾವತ್ತೂ ರಾಜಕೀಯ ಮಾಡದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ 40 ಸೈನಿಕರ ಸಾವಿಗೆ ಕಾರಣವಾದ ತನ್ನದೇ ಸರಕಾರದ ರಾಷ್ಟ್ರೀಯ ಭದ್ರತಾ ವೈಫಲ್ಯವನ್ನು ಮರೆಮಾಚಿ ದೇಶದ ಜನರ ಮುಂದೆ ಬೇರೆಯೇ ರೀತಿಯಲ್ಲಿ ಬಿಂಬಿಸಿದ್ದ ಬಿಜೆಪಿ ನಾಯಕರು ಇದೀಗ ಪಂಜಾಬ್ ಟ್ರಾಫಿಕ್ ಜಾಮ್ ಪ್ರಕರಣವನ್ನು ಕಾಂಗ್ರೆಸ್ ಪಕ್ಷದ ತಾಲಿಬಾನಿ ಸಂಸ್ಕೃತಿಯ ಪಿತೂರಿಯೆಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ದೇಶದ ಪ್ರಧಾನಿ ಪಕ್ಷಾತೀತ ನೆಲೆಯಲ್ಲಿ ಈ ದೇಶದ ಆಡಳಿತಾತ್ಮಕ ವ್ಯವಸ್ಥೆಗೆ ಸೇರಿದವರಾಗಿರುತ್ತಾರೆ. ಆದರೆ ಈ ಸಾಂವಿಧಾನಿಕ ಸತ್ಯ ಮಿಥ್ಯಾರೋಪವನ್ನೆ ತಮ್ಮ ರಾಜಕೀಯ ಶಕ್ತಿಯಾಗಿಸಿರುವ ಬಿಜೆಪಿ ನಾಯಕರಿಗೆ ಅರ್ಥ ಆಗಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದ್ದಾರೆ.
ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: