Advertisement

ಕೊರೊನಾ ನೆಪವೊಡ್ಡಿ ಬೊಮ್ಮಾಯಿ ಸರ್ಕಾರ ಅರ್ಧಕ್ಕೆ ತಡೆದಿದ್ದ 'ಮೇಕೆದಾಟು ಪಾದಯಾತ್ರೆ' ಪೆಬ್ರವರಿ 27ರಿಂದ ಮತ್ತೆ ಆರಂಭ: ಕಾಂಗ್ರೆಸ್

Advertisement

ಫೆಬ್ರವರಿ 27ರಿಂದ ಮೇಕೆದಾಟು ಪಾದಯಾತ್ರೆ ಪುನರಾರಂಭ ವಾಗಲಿದೆ. ಕರ್ನಾಟಕದ ಒಳಿತಿಗಾಗಿ ಹಾಗೂ ಕುಡಿಯುವ ನೀರಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ನಮ್ಮ ನೀರಿನ ಹಕ್ಕಿಗಾಗಿ ಎಲ್ಲರೂ ಸೇರಿ ಜೊತೆಯಾಗಿ‌ ನಡೆಯೋಣ. ಮೇಕೆದಾಟು ಪಾದಯಾತ್ರೆಯು ಯಶಸ್ವಿಯಾಗಲು ಪಣತೊಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರು ಸರಣಿ ಟ್ವೀಟ್ ಮಾಡುವ ಮೂಲಕ ಹೇಳಿದ್ದಾರೆ.

ನಾಡಿನ ಒಳಿತಿಗಾಗಿ ಮೇಕೆದಾಟು ಪಾದಯಾತ್ರೆಯನ್ನು ನಡೆಸಿದ ವೇಳೆ ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಬಿಜೆಪಿ ನಾಯಕರು ನಡೆಸಿದ ಕಾರ್ಯಕ್ರಮಗಳ ಕುರಿತು ಸರ್ಕಾರ ಜಾಣ ಕುರುಡು ಪ್ರದರ್ಶಿಸಿತು. ಮಾನ್ಯ ಮುಖ್ಯಮಂತ್ರಿಗಳು ದ್ವಂದ್ವ ನಿಲುವು ಅನುಸರಿಸುತ್ತಿರುವುದು ಖಂಡನಾರ್ಹ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಉಡುಪಿಯಲ್ಲಿ ನಡೆದ ಘಟನೆ ಇದನ್ನು ಪುಷ್ಟೀಕರಿಸುತ್ತದೆ. ನಾಡಿನ ಹಿತಕ್ಕಾಗಿ ನಾವು ಕಟಿಬದ್ಧರಾಗಿದ್ದೇವೆ. ರಾಷ್ಟ್ರಧ್ವಜದ ಗೌರವವನ್ನು ಕಾಪಾಡಲು ಹಾಗೂ ಸಂವಿಧಾನದ ಆಶಯಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ನಾವು ಹೋರಾಡುತ್ತಿದ್ದೇವೆ ಎಂದವರು ಹೇಳಿದ್ದಾರೆ.

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಂತಹ ಮಾತನಾಡಿದ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ದೇಶದ್ರೋಹದ ನಡವಳಿಕೆ ತೋರಿದ ಅವರನ್ನು ಸ್ವಾಗತಿಸುವ ಬಿಜೆಪಿ ಕಾರ್ಯಕರ್ತರು ತಮ್ಮ ನಿಜಬಣ್ಣ ತೋರಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ‌ ದುಡಿಯುತ್ತಿದೆ. ಬಿಜೆಪಿ ಈ‌ ನಾಡಿಗಾಗಿ ಏನು ಮಾಡಿದೆ? ಎಂದವರು ಖಾರವಾಗಿ ಪ್ರಶ್ನಿಸಿದ್ದಾರೆ.

Advertisement
Advertisement
Recent Posts
Advertisement