ಮೋದಿ ಆಡಳಿತದಲ್ಲಿ ಜಾರಿಗೊಂಡ ನೋಟುಬ್ಯಾನ್, ಲಾಕ್‌ಡೌನ್ ಗಳಿಂದುಂಟಾದ ಸಾಲದ ಹೊರೆ, ಉದ್ಯೋಗನಷ್ಟದ ಪರಿಣಾಮ ಪರಲೋಕ ಸೇರಿದವರೆಷ್ಟು ಗೊತ್ತೇ?
ಮೋದಿ ಆಡಳಿತದಲ್ಲಿ ಜಾರಿಗೊಂಡ ನೋಟುಬ್ಯಾನ್, ಲಾಕ್‌ಡೌನ್ ಗಳಿಂದುಂಟಾದ ಸಾಲದ ಹೊರೆ, ಉದ್ಯೋಗನಷ್ಟದ ಪರಿಣಾಮ ಪರಲೋಕ ಸೇರಿದವರೆಷ್ಟು ಗೊತ್ತೇ?
Advertisement
|ಜಸ್ಟ್ ಆಸ್ಕಿಂಗ್| .... ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)
ವೀರಾಧಿವೀರ ಕೇಸರೀ ಹುಲಿಗಳೇ, 'ಮೋದಿ ಸರ್ಕಾರದ ಈ ವರದಿಯನ್ನೊಮ್ಮೆ ಓದುವಿರಾ..? ನಿಮ್ಮ ನಿರುದ್ಯೋಗೀ ಅಣ್ಣನ ಕೊರಳಿಗೆ ಉರುಳುಹಾಕಿದ ಹಿಂದೂ ಬಂಧು ಯಾರೆಂದು ಕೇಳುವಿರಾ?'
- ಎರಡು ದಿನಗಳ ಹಿಂದೆ ಸಂಸತ್ತಿನಲ್ಲಿ ಮೋದಿ ಸರ್ಕಾರದ ಜೂನಿಯರ್ ಗೃಹಮಂತ್ರಿ ನಿತ್ಯಾನಂದ ರಾಯ್ ಸಂಸತ್ತಿಗೆ ಕೊಟ್ಟಿರುವ ಉತ್ತರದ ಪ್ರಕಾರ :
ಕೋವಿಡ್ ಕಾಲಘಟ್ಟದಲ್ಲಿ ಈ ದೇಶದಲ್ಲಿ 25,000 ಕ್ಕೂ ಹೆಚ್ಚು ನಿರುದ್ಯೋಗಿಗಳು, ಸಣ್ಣ ಉದ್ಯಮಿಗಳು , ಬೀದಿ ವ್ಯಾಪಾರಿಗಳು ಮೋದಿ ಸರ್ಕಾರದ ಲಾಕ್ಡೌನ್ ಮಾಸ್ಟರ್ ಸ್ಟ್ರೋಕ್ ತಾಳಾಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಶೇ. 95 ರಷ್ಟು ಜನರಾದರೂ ಹಿಂದೂ ಬಂಧುಗಳೇ ಆಗಿದ್ದಾರೆ.
-ಇಂದಿನ The Telegraph ವರದಿಯ ಪ್ರಕಾರ 2018-20 ರ ನಡುವೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಅತಿ ಹೆಚ್ಚು ಜನ ನಿರುದ್ಯೋಗಿಗಳು ..
Just Asking
ಅಂದರೆ ಮಾಜಿ ಹಾಗೂ ಹಾಲೀ ಕೇಸರೀಧಾರಿಗಳು
ಅದರ ಪ್ರಕಾರ 2018 ರಲ್ಲಿ 2741 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ..
2020 ರ ಲಾಕ್ ಡೌನ್ ಸುವರ್ಣ ಯುಗ ದಲ್ಲಿ ಅವಧಿಯಲ್ಲಿ 3548 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
5213 ಸಣ್ಣಪುಟ್ಟ ಉದ್ಯಮಿ ಬಂಧುಗಳೂ ಲಾಕ್ ಡೌನ್ "ಸುಖ" ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ವಿವರಗಳಿಗಾಗಿ: ಕೆಳಗಿನ ಲಿಂಕ್ ಕ್ಲಿಕ್ ಮಾಡಿ
►►https://epaper.telegraphindia.com/imageview/386411/165044374/71.html
ಮೋದಿ ಸರ್ಕಾರದ ಮತ್ತೊಂದು ವರದಿಯ ಪ್ರಕಾರ :
ಹಿಂದೂ ಹೃದಯ ಸಾಮ್ರಾಟ ಮೋದಿ ಪ್ರಧಾನಿಯಾದ ನಂತರ 2016- 2020 ರ ಅವಧಿಯಲ್ಲಿ...
45,406 ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ಅವರಲ್ಲಿ 29,000 ದಷ್ಟು ದೇಶ ಬಂಧುಗಳು ಸಣ್ಣಪುಟ್ಟ ಉದ್ಯೋಗ ಮಾಡುತ್ತಿದ್ದವರು.
... 16,565 ಬಂಧುಗಳು ನಿರುದ್ಯೋಗಿಗಳು .
ಕಾರಣ ದೇಶಬಂಧು, ಹಿಂದೂ ಹೃದಯ ಸಾಮ್ರಾಟ ಮೋದಿಯವರು ದೇಶದ ಮೇಲೆ ಮಾಡಿದ ಮೂರು ಮಹಾನ್ "Master Stroke" ಗಳು ":
1. 2016 ರ ನೋಟು ನಿಷೇಧ
2. 2017ರ GST ಮತ್ತು
3. 2020ರ ಲಾಕ್ದೌನ್
ವಿವರಗಳಿಗಾಗಿ: ಕೆಳಗಿನ ಲಿಂಕ್ ಕ್ಲಿಕ್ ಮಾಡಿ
►►https://timesofindia.indiatimes.com/city/bengaluru/2020-stats-30-suicides/day-due-to-poverty-unemployment/articleshow/87749894.cms
ಅವರಲ್ಲಿ ಬಹುಪಾಲು ಯುವಕ-ಯುವತಿಯರು ನಿಮ್ಮಂತೆ ಕೇಸರೀ ಶಾಲು ಹೊದ್ದುಕೊಂಡು, ಮೋದಿ ಸರ್ಕಾರ ಹಿಂದುಗಳ ಸುವರ್ಣ ಯುಗವನ್ನು ಸಾಕಾರ ಮಾಡುತ್ತದೆಂದೂ, ಬ್ಯಾಂಕ್ ಅಕೌಂಟಿಗೆ 15 ಲಕ್ಷ ಹಾಕದಿದ್ದರೂ ಉದ್ಯೋಗ ದಯಪಾಲಿಸುತ್ತಾರೆಂದೂ ಕನಸು ಕಂಡವರೇ ಆಗಿದ್ದರು ..
ಅಷ್ಟು ಮಾತ್ರವಲ್ಲ Centre For Monitoring Indian Economy (CMIE) ಎಂಬ ಸ್ವತಂತ್ರ ಸಂಸ್ಥೆಯ ಅಧಿಕ್ರತ ಅಧ್ಯಯನದ ಪ್ರಕಾರ ಮೋದಿ ಸರ್ಕಾರದ ಅಮೃತಮಯೀ ಆರ್ಥಿಕ ನೀತಿಗಳಿಂದಾಗಿ ಕಳೆದ ಎರಡು ವರ್ಷದಲ್ಲಿ 4.6 ಕೋಟಿ ದೇಶಬಂಧುಗಳು ಹೊಸದಾಗಿ ಬಡತನದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ.
ಅವರಲ್ಲಿ ನಿಮ್ಮ ಕುಟುಂಬಗಳು ಇರಬಹುದೇ?
ಯಾವಾಗಲಾದರೂ ಕೇಸರಿ ಶಾಲು ತೆಗೆದಿಟ್ಟಾಗ... ಮನೆಯವರಿಗೆ ಮೂರು ಹೊತ್ತು ಊಟ ಹೊಂಚಲು ಮೊದಲಿಗಿಂತ ಹೆಚ್ಚು ಪರದಾಡುತ್ತಿರುವ ನಿಮ್ಮ ಅಪ್ಪ-ಅಮ್ಮಂದಿರನ್ನೋ, ಅಣ್ಣ-ಅಕ್ಕಂದಿರನ್ನೋ ಕೇಳಿ ನೋಡಿ...
ವಿವರಗಳಿಗಾಗಿ: ಕೆಳಗಿನ ಲಿಂಕ್ ಕ್ಲಿಕ್ ಮಾಡಿ
►►https://www.cmie.com/kommon/bin/sr.php?kall=warticle&dt=2021-05-06%2011:53:48&msec=653
ಆದರೆ ಅದೇ ಸಮಯದಲ್ಲಿ ಈ ದೇಶದ ನೂರು ಕೋಟಿ ಶ್ರೀಮಂತ ಮೋದಿಯ ಆಪ್ತ ಹಿಂದೂ ಬಂಧುಗಳು ಮಾತ್ರ 32 ಲಕ್ಷ ಕೋಟಿ ಗೂ ಹೆಚ್ಚು ಲಾಭವನ್ನು ಗಳಿಸಿದ್ದಾರೆ.
ವಿವರಗಳಿಗಾಗಿ: ಕೆಳಗಿನ ಲಿಂಕ್ ಕ್ಲಿಕ್ ಮಾಡಿ
►►https://www.business-standard.com/article/current-affairs/india-s-billionaire-count-at-142-in-2021-84-households-see-income-decline-122011700601_1.html
ಮತ್ತೊಂದು ಕಡೆ ಈ ಬಜೆಟ್ಟಿನಲ್ಲಿ ಅಲ್ಪಸ್ವಲ್ಪ ಉದ್ಯೋಗ ನೀಡುತ್ತಿದ್ದ MNREGA, ದಂಥ ಯೋಜನೆಗಳಿಗೆ , ಪಡಿತರ ಯೋಜನೆಗೆ ಹೋದ ವರ್ಷಕ್ಕಿಂತ ಶೇ. 30-40 ರಷ್ಟು ಬಜೆಟ್ ಕಡಿತವನ್ನು ದೇಶಬಂಧು ಮೋದಿ ಮಾಡಿದ್ದಾರೆ.
ಅದೇ ಸಮಯದಲ್ಲಿ ದೇಶಬಂಧು ಆದಾನಿ ಮತ್ತು ಅಂಬಾನಿ ಬಂಧುಗಳ ಆಸ್ತಪಾಸ್ತಿಗಳನ್ನು ಮತ್ತಷ್ಟು ಹೆಚ್ಚಿಸುವ ರಸ್ತೆ-ಬಂದರು ಯೋಜನೆಗೆ 1.5 ಲಕ್ಷ ಕೋಟಿಗೂ ಹೆಚ್ಚು ಬಜೆಟ್ ಕೊಡಲಾಗಿದೆ.
ಸಾಲದಲ್ಲಿದ್ದ Air India ವನ್ನು ಟಾಟಾ ಬಂಧು ಕೊಳ್ಳಲು ಹಿಂದುಮುಂದೆ ನೋಡಿದಾಗ ಅದರ ಮೇಲಿದ್ದ 65,000 ಕೋಟಿ ಸಾಲವನ್ನು ಈ ದೇಶದ ಸಾಮಾನ್ಯ ಬಂಧುಗಳ ಮೇಲೆ ವರ್ಗಾಯಿಸಿ ದೇಶಬಂಧು ಟಾಟಾಗೆ Air India ಮಾರಲಾಗಿದೆ.
ಅದನ್ನು ಕೊಳ್ಳಲು ಬೇಕಿದ್ದ ಹಣವನ್ನು ದೇಶದ ಬ್ಯಾಂಕುಗಳಲ್ಲಿ ದೇಶದ ಬಡಬಂಧುಗಳು ಇಟ್ಟಿರುವ ಡಿಪಾಸಿಟ್ ಹಣದಿಂದಲೇ ಕೇವಲ ಶೇ. 4 ರ ಬಡ್ಡಿದರದಲ್ಲಿ ಒದಗಿಸಲು ಹಿಂದೂಬಾಂಡ್ ಮೋದಿ ನಿರ್ಧರಿಸಿದ್ದಾರೆ.
ವಿವರಗಳಿಗಾಗಿ: ಕೆಳಗಿನ ಲಿಂಕ್ ಕ್ಲಿಕ್ ಮಾಡಿ
►►https://sabrangindia.in/article/air-india-sale-making-one-lakh-crore-scam
ಆದ್ದರಿಂದ... ವೀರ ಕೇಸರಿಗಳೇ... ಹಿಜಾಬು ಕೀಳಹೊರಟಿರುವ ವೀರ ಶೂರ ಪುರುಷರೇ..
ಈಗಲಾದರೂ ಸ್ವಲ್ಪ ಬಿಡುವು ಮಾಡಿಕೊಳ್ಳುವಿರಾ?
ನಿಮ್ಮನ್ನು ಹಿಜಾಬಿನ ಯುದ್ಧಕ್ಕೆ ದೂಡಿ...
ನಿಮ್ಮ ಜಾಬನ್ನು , ಭವಿಷ್ಯವನ್ನು ಕಿತ್ತುಕೊಳ್ಳುತ್ತಿರುವ ಸಂಚೋಕೋರ ಯಾರೆಂದು ಈಗಲಾದರೂ ಅರ್ಥ ಮಾಡಿಕೊಳ್ಳುವಿರಾ?
Just Asking
ನಿಮ್ಮನ್ನು ಯುದ್ಧಕ್ಕೆ ದೂಡಿದ ನಿಮ್ಮ ಸೇನಾಧಿಪತಿಯೇ ನಿಮ್ಮ ಅಸಲೀ ಶತ್ರು ಎಂದು ಗ್ರಹಿಸಬಲ್ಲಿರಾ?
ಕೃಪೆ: ವಾರ್ತಾಭಾರತಿ
ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: