'ಪ್ರಿಯಾಂಕಾ ಗಾಂಧಿಯವರಿಗೆ ಭಯೋತ್ಪಾದಕರ ಸಂಪರ್ಕವಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ' ಎಂಬ ಮಾಧ್ಯಮದ ಪ್ರಶ್ನೆಗೆ ಕೆರಳಿದ ಪ್ರಿಯಾಂಕಾ ಗಾಂಧಿಯವರು 'ನನ್ನ ತಂದೆ ರಾಜೀವ್ ಗಾಂಧಿಯವರನ್ನು ಭಯೋತ್ಪಾದಕರು ಕೊಂದರು. ಅಜ್ಜಿ ಇಂದಿರಾ ಗಾಂಧಿಯವರನ್ನು ಭಯೋತ್ಪಾದಕರು ಕೊಂದರು. ಆ ಕಾರಣದಿಂದ ನಮಗೆ ಭಯೋತ್ಪಾದಕರ ಸಂಬಂಧ ಇದೆ. ಆ ಕಾರಣದಿಂದ ನನ್ನ ಇಡೀ ಕುಟುಂಬ ಸದಸ್ಯರು ಹುತಾತ್ಮರಾಗಿದ್ದಾರೆ' ಎಂದು ಹೇಳಿದ ಅವರು 'ಸ್ಮೃತಿ ಇರಾನಿಯವರು ಇನ್ನಾದರೂ ಇಂತಹ ಬಾಲಿಷ ಹೇಳಿಕೆ ನೀಡುವುದನ್ನು ನಿಲ್ಲಿಸಲಿ' ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.
ವಿವರಗಳಿಗಾಗಿ ವಿಡಿಯೋ ಕ್ಲಿಕ್ ಮಾಡಿ: