Advertisement

ಭಜರಂಗದಳದ ಮುಖಂಡನಿಂದ ದಲಿತನ ಹತ್ಯೆ ಪ್ರಕರಣ| ಬಿಜೆಪಿ ಸರ್ಕಾರ ಹತ್ಯೆಕೋರನ ರಕ್ಷಣೆಗೆ ನಿಂತಿರುವುದು ಆತ್ಮವಂಚನೆಯ ನಡವಳಿಕೆ: ಸಿದ್ದರಾಮಯ್ಯ ಆಕ್ರೋಶ

Advertisement

'ಧರ್ಮಸ್ಥಳದಲ್ಲಿ ನಡೆದಿರುವ ದಲಿತ ಯುವಕ‌ ದಿನೇಶ್ ಅವರ ಹತ್ಯೆ ಅತ್ಯಂತ ಖಂಡನೀಯ. ಕೊಲೆ ಆರೋಪಿ ಬಜರಂಗ ದಳದ ನಾಯಕ‌ನಾಗಿರುವ ಕಾರಣಕ್ಕೆ ಮೃತನ ಕುಟುಂಬ ಆತಂಕಕ್ಕೀಡಾಗಿದೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ‌‌ ಮಣಿಯದೆ ಕೊಲೆ ಆರೋಪಿಯ‌ನ್ನು ತಕ್ಷಣ ಬಂಧಿಸಬೇಕು ಮತ್ತು ಮೃತ ಯುವಕನ ಕುಟುಂಬಕ್ಕೆ ರಕ್ಷಣೆ ನೀಡಬೇಕು' ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಆಗ್ರಹಿಸಿದ್ದಾರೆ. 'ಹಿಂದುಗಳ ರಕ್ಷಣೆಯ ಮಂತ್ರ ಜಪಿಸುತ್ತಿರುವ ಬಿಜೆಪಿ ಪಕ್ಷ ಧರ್ಮಸ್ಥಳದ ದಲಿತ ಯುವಕನ ಹತ್ಯೆಕೋರನ ರಕ್ಷಣೆಗೆ ನಿಂತಿರುವುದು ಆತ್ಮವಂಚನೆಯ ನಡವಳಿಕೆ. ಮುಖ್ಯಮಂತ್ರಿಗಳು ಸಾವಿನ ರಾಜಕೀಯ ಮಾಡಲು ಹೋಗದೆ ಮೃತಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು' ಎಂದವರು ಹೇಳಿದ್ದಾರೆ. (ಭಜರಂಗ ದಳದ ಮುಖಂಡ ಎನ್ನಲಾದ ಕೃಷ್ಣ ಎಂಬಾತನು ಕ್ಷುಲ್ಲಕ ಕಾರಣಕ್ಕೆ, ಹಾಡು ಹಗಲೆ ಕೊಲೆ ಮಾಡಿರುವ ವೀಡಿಯೋ ವೈರಲ್ ಆಗಿದೆ. ಈ ಕುರಿತು ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೈರಲ್ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. - ಸಂ)

Advertisement
Advertisement
Recent Posts
Advertisement