ವಿದೇಶಗಳಿಗೆ ಗೇರುಬೀಜ ರಫ್ತುವಿನಲ್ಲಿ ಜನಪ್ರಿಯತೆ ಗಳಿಸಿರುವ ಹಾಗೂ ಕಳೆದ ಹತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕುಂದಾಪುರ ತಾಲೂಕಿನ ವಂಡಾರಿನ 'ಶ್ರೀ ಕೃಷ್ಣಪ್ರಸಾದ್ ಕ್ಯಾಶ್ಯೂಸ್' ಸಂಸ್ಥೆಯ ದ್ವಿತೀಯ ಘಟಕವು ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ, ಸಂಪೂರ್ಣ ಯಂತ್ರಚಾಲಿತವಾದ ಮತ್ತು ಸುಸಜ್ಜಿತವಾದ 'ಶ್ರೀ ಕೃಷ್ಣಕೃಪಾ ಕ್ಯಾಶ್ಯೂಸ್ ಪ್ರೈವೇಟ್ ಲಿಮಿಟೆಡ್ ಜಪ್ತಿ' ಇಂದು ಉದ್ಘಾಟನೆಗೊಂಡಿತು.
ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ನೂತನ ಘಟಕವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಉಡುಪಿ ಇದರ ಎಜಿಎಮ್ ವಾಸಪ್ಪ ಶೆಟ್ಟಿ, ಕುಂದಾಪುರದ ಯೂನಿಯನ್ ಬ್ಯಾಂಕ್ ಚೀಫ್ ಮ್ಯಾನೇಜರ್ ರವೀಂದ್ರ, ಶಂಕರನಾರಾಯಣದ ಗೇರುಬೀಜ ಕಾರ್ಖಾನೆಯ ಮಾಲಕ ಶಶಿಧರ ಶೆಟ್ಟಿ, ಜನ್ನಾಡಿ ಫೇವರಿಟ್ ಕ್ಯಾಶ್ಯೂಸ್ ನ ಶಂಕರ ಹೆಗ್ಡೆ, ರವಿರಾವ್ ಲೆಕ್ಕಪರಿಶೋಧಕರು ಹೆಬ್ರಿ, ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಮಂದಾರ್ತಿಯ ಲಕ್ಷ್ಮೀ ಸಮೂಯ ಸಂಸ್ಥೆಗಳ ಮಾಲಕರಾದ ಮಹೇಶ್ ಶೆಟ್ಟಿ, ಮಂಗಳೂರು ಎಜೆ ಮೆಡಿಕಲ್ ಕಾಲೇಜ್‌ನ ಚೀಫ್ ಎಡ್ಮಿನ್ಸ್ಟ್ರೇಟಿವ್ ಆಫೀಸರ್ ದಯಾನಂದ ಶೆಟ್ಟಿ, ಜಯಶೀಲ ಶೆಟ್ಟಿ ಉಧ್ಯಮಿ ಘಟಪ್ರಭಾ, ರಂಜಿತ್ ಶೆಟ್ಟಿ ಶೆಟ್ಟಿ ಐಸ್‌ಪ್ಲಾಂಟ್ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಸ್ಥೆಯ ಮಾಲಕರುಗಳಾದ ಶ್ರುತಿ ಜಯಪ್ರಕಾಶ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಸೋನಾಲಿ ಸಂಪತ್ ಶೆಟ್ಟಿ, ಸಂಪತ್ ಶೆಟ್ಟಿ ಮತ್ತವರ ಕುಟುಂಬದ ಹಿರಿಯರಾದ ಶಿರೂರು ಹೆಮ್ಮಳಿಕೆ ಮನೆ ಶೇಖರ ಶೆಟ್ಟಿ,ಕೆ. ಚಂದ್ರಕಾಂತ ಶೆಟ್ಟಿ ಕುಂದಾಪುರ ಮುಂತಾದವರು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.