Homepageರಾಜ್ಯಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಿದ ನೆಹರೂ ಬಗ್ಗೆ ಕೇವಲವಾಗಿ ಮಾತನಾಡಬಾರದು: ಹೆಚ್.ಡಿ ದೇವೇಗೌಡ ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಿದ ನೆಹರೂ ಬಗ್ಗೆ ಕೇವಲವಾಗಿ ಮಾತನಾಡಬಾರದು: ಹೆಚ್.ಡಿ ದೇವೇಗೌಡ Advertisement ಪಂಚರಾಜ್ಯ ಚುನಾವಣಾ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್. ಅದನ್ನು ನಾನು ಯಾವುದೇ ಕಾರಣಕ್ಕೂ ಹೀಯಾಳಿಸಲು ಹೋಗಲಾರೆ. ಸ್ವಾತಂತ್ರ್ಯಾ ನಂತರದಲ್ಲಿ ಈ ದೇಶದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಗಟ್ಟಿಯಾದ ಅಡಿಪಾಯ ಹಾಕಿದ್ದು ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರುರವರು. ಆದರೆ ಸಂಸತ್ ನಲ್ಲಿ ನೆಹರು ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಇದು ಅಕ್ಷಮ್ಯ. ನಾವು ಏಕೆ ಇಂತಹ ಸ್ಥಿತಿಗೆ ಬಂದಿದ್ದೇವೆ? ಸೋನಿಯಾ ಗಾಂಧಿಯವರಿಗೆ ಪ್ರಧಾನ ಮಂತ್ರಿ ಆಗುವ ಅವಕಾಶ ಒದಗಿ ಬಂದಿತ್ತು. ಆದರವರು ಆ ಅವಕಾಶವನ್ನು ತಿರಸ್ಕರಿಸಿ ಮನಮೋಹನ್ ಸಿಂಗ್ ರವರಿಗೆ ಪ್ರಧಾನಿಯನ್ನಾಗಿ ಮಾಡಿದ್ದರು ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಹೇಳಿದ್ದಾರೆ.ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾನು ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದವನು. ಕಾಂಗ್ರೆಸ್ ಇಬ್ಭಾಗವಾದಾಗ ಬಂಡಾಯ ಕಾಂಗ್ರೆಸ್ ಗೆ ಹೋದೆ. ಆ ನಂತರದ ದಿನಗಳಲ್ಲಿ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ತಲೆ ಎತ್ತಿದವು" ಎಂದು ಹೇಳಿದ್ದಾರೆ. "ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಅದನ್ನು ಉಳಿಸಿಕೊಳ್ಳುವುದಷ್ಟೆ ನಮ್ಮ ಜವಾಬ್ದಾರಿ. ಆ ಕಾರಣಕ್ಕಾಗಿ ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಯಾವ ಕಾರ್ಯತಂತ್ರ ಹೆಣೆಯಬೇಕೆಂಬ ಕುರಿತು ಕಾರ್ಯಾಗಾರವನ್ನು ಕುಮಾರಸ್ವಾಮಿ ಮಾಡಿದ್ದಾರೆ. ನಮ್ಮ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಆಸಕ್ತಿ ಹೊಂದಿಲ್ಲ" ಎಂದು ಹೇಳಿದರು.ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರುವ ಕುರಿತಾಗಿ ಮಾತನಾಡಿದ ಅವರು, "ಹಲವು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಆದರೆ ಇದರ ಬಗ್ಗೆ ನನ್ನ ಬಳಿ ಬಂದು ಚರ್ಚಿಸಿಲ್ಲ" ಎಂದವರು ಹೇಳಿದರು."ಬಿಜೆಪಿಯು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಆದರೆ ಕಳೆದ ಏಳೂವರೆ ವರ್ಷಗಳಲ್ಲಿ ಮೋದಿ ಸರ್ಕಾರ ಏನೂ ಸಾಧನೆ ಮಾಡಲು ಆಗಲಿಲ್ಲ" ಎಂದಿದ್ದಾರೆ. Show Full Article Advertisement Next Read: ನೆಹರೂ- ಗಾಂಧಿ ಕುಟುಂಬದ ತ್ಯಾಗ ಬಲಿದಾನಗಳೆ, ಬಿಜೆಪಿ ಮತ್ತದರ ಪರಿವಾರದ ಅಸಹನೆಯ ಮೂಲ: ಡಾ. ಎಚ್.ಸಿ ಮಹಾದೇವಪ್ಪ » Advertisement Recent Posts ಮುಂದಿನ 10 ವರ್ಷ ಕಾಲ ಗ್ಯಾರಂಟಿ ಯೋಜನೆಗಳ ಮುಂದುವರಿಕೆ: ಡಿಕೆಶಿ ಸ್ಥಳೀಯ ಸಂಸ್ಥೆಗಳ ಕುಂದುಕೊರತೆಗಳ ಪರಿಹಾರ ನನ್ನ ಗುರಿ : ರಾಜು ಪೂಜಾರಿ MP ಸೀಟು ಕೊಡಿಸುವುದಾಗಿ 2 ಕೋಟಿ ರೂಪಾಯಿ ಪೀಕಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ-ಸೋದರಿ. (ಪ್ರಾತಿನಿಧಿಕ ಚಿತ್ರ) ಫೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ದ ಪ್ರಸಾದ್ ಕಾಂಚನ್ ದೂರು. ಸೈಟು ವಾಪಾಸು ನೀಡುವುದಾಗಿ ಸಿಎಂ ಪತ್ನಿಯಿಂದ ಮುಡಾಗೆ ಪತ್ರ! ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಬಿಜೆಪಿ ಪಿತೂರಿ- 1000ಕೋ. ರೂ ಸಂಗ್ರಹ: ಪೋಲೀಸ್ ದೂರು FIR ಆಗಿರುವ ಮೋದಿ ಸಂಪುಟದ 23 ಸಚಿವರು ರಾಜೀನಾಮೆ ನೀಡುವರೇ? ಇಡೀ ಪಕ್ಷ ಸಿದ್ದರಾಮಯ್ಯ ಬೆನ್ನಿಗಿದೆ: ಜಿ.ಸಿ ಚಂದ್ರಶೇಖರ್ ನಾಡಿನ ಶಾಂತಿ ಕದಡಿದ ಪ್ರಾಂಶುಪಾಲರಿಗೆ ಪ್ರಶಸ್ತಿ ನಿರಾಕರಣೆ ಸ್ವಾಗತಾರ್ಹ: ಕೊಡವೂರು ರಾಜ್ಯಪಾಲರ ಮೂಲಕ ಕೇಂದ್ರ ಪ್ರಾಯೋಜಿತ ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಲಿ! ಬಿಜೆಪಿಗರಿಂದ ಸಿದ್ಧರಾಮಯ್ಯರನ್ನು ಏನೂ ಮಾಡಲಾಗದು: ಗೀತಾ ವಾಗ್ಳೆ ರಾಜ್ಯಪಾಲರ ಕ್ರಮದ ವಿರುದ್ದ ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ! ಶಿರಾಡಿ ಗುಡ್ಡ ಕುಸಿತ; ಮುಖ್ಯಮಂತ್ರಿ ಭೇಟಿ- ಡಾ. ಕಕ್ಕಿಲ್ಲಾಯ ಬಹಿರಂಗ ಪತ್ರ. ಮರವಂತೆ ಜಾತ್ರೆ- ಬಡ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವಿರೇಕೆ?: ಡಾ. ಭಟ್ ನಿರ್ಮಲಾರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ