Homepageಸುದ್ದಿ ವಿಶ್ಲೇಷಣೆಸಿಖ್ ಹತ್ಯಾಕಾಂಡದ ಫೈಲ್ ಯಾವಾಗ? ಎಂದು ಪ್ರಶ್ನಿಸುವವರು ಓದಲೇಬೇಕಾದ ವಿವರಗಳು ಸಿಖ್ ಹತ್ಯಾಕಾಂಡದ ಫೈಲ್ ಯಾವಾಗ? ಎಂದು ಪ್ರಶ್ನಿಸುವವರು ಓದಲೇಬೇಕಾದ ವಿವರಗಳು Advertisement 70-80ರ ದಶಕದಲ್ಲಿ "ಖಾಲಿಸ್ಥಾನ್ ಪ್ರತ್ಯೇಕತಾವಾದಿ ಭಯೋತ್ಪಾದಕರು" ಈ ದೇಶಾದ್ಯಂತ ನಡೆಸಿದ ಭಯೋತ್ಪಾದನೆ, ಆ ಭಯೋತ್ಪಾದನೆಯ ಪರಿಣಾಮವಾಗಿ ದೇಶಾದ್ಯಂತ ಪ್ರತಿದಿನವೂ ಅಮಾಯಕ ಜನತೆ ಹತ್ಯೆಯಾಗುತ್ತಿದ್ದುದು, ಆ ಭಯೋತ್ಪಾದಕರು ಪಂಜಾಬ್‌ನ ಅಮೃತಸರ ಗೋಲ್ಡನ್ ಟೆಂಪಲ್‌ನಲ್ಲಿ ಅಡಗಿ ಕುಳಿತದ್ದು, ಅಂದಿನ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂದಿಯವರು ತಗೆದುಕೊಂಡ ಖಡಕ್ ನಿರ್ಧಾರದ ಪರಿಣಾಮವಾಗಿ ಭಾರತೀಯ ಸೇನೆ ನಡೆಸಿದ ಬ್ಲೂಸ್ಟಾರ್ ಕಾರ್ಯಾಚರಣೆಯ ನಂತರ ಈ ದೇಶದಲ್ಲಿ ಸಿಖ್ ಭಯೋತ್ಪಾದನೆ ಕೊನೆಗೊಂಡದ್ದು, ಆ ಕಾರ್ಯಾಚರಣೆಯಿಂದ ಸಂಪೂರ್ಣವಾಗಿ ಬಲ ಕಳೆದುಕೊಂಡ ಭಯೋತ್ಪಾದಕರು ಆ ನಂತರ ಇಂದಿರಾ ಗಾಂದಿಯವರನ್ನು ಸಂಚುಮಾಡಿ ಆಕೆಯ ಅಂಗರಕ್ಷಕರ ಮೂಲಕವೇ ಕೊಂದದ್ದು… ಅದರ ಪರಿಣಾಮವಾಗಿ ದಶಮಾನಗಳ ಕಾಲದ ಸಿಖ್ ಭಯೋತ್ಪಾದನೆ ಮತ್ತು ಆ ನಂತರದ ದೇಶದ ಪ್ರಧಾನಿಯ ಹತ್ಯೆಯಿಂದ ರೋಸಿಹೋಗಿದ್ದ ದೇಶದ ಜನತೆ ಸಿಖ್‌ರನ್ನು ಕಂಡಕಂಡಲೆಲ್ಲಾ ಕೊಂದು ಹಾಕಿದ್ದು ಇದೀಗ ಇತಿಹಾಸ. ನೆನಪಿಡಿ ಯಾವುದೇ ತಿರುಚುವಿಕೆಯಿಂದ ಇತಿಹಾಸ ಬದಲಾಯಿಸಲು ಸಾಧ್ಯವಿಲ್ಲ.ಹಾಗೆಯೇ, ಸಿಖ್ ಹತ್ಯಾಕಾಂಡ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ.. ಸಿಖ್ ಹತ್ಯಾಕಾಂಡವು ದೇಶದ ಪ್ರಧಾನಿಯೊಬ್ಬರ ಹತ್ಯೆಯಾದಾಗ ದೇಶದ ಜನರ ತತ್‌ಕ್ಷಣದ ಪ್ರತಿಕ್ರಿಯೆ ಆಗಿತ್ತು ಅಷ್ಟೇ. ಅದು ಪೂರ್ವನಿರ್ಧರಿತ ಷಢ್ಯಂತ್ರ ಅಲ್ಲ. ಅಥವಾ ಯಾವುದೇ ಸಂಘಟಿತ ಶಕ್ತಿ ಅದರ ಹಿಂದಿರಲಿಲ್ಲ. ದೇಶದ ಕಾನೂನು, ಪೋಲಿಸ್ ಇಲಾಖೆ, ಮಿಲಿಟರಿ ಎಲ್ಲವೂ ವಿಫಲವಾದ ಸಂಧರ್ಭದಲ್ಲಿ ನಡೆದದ್ದೆ ಇಂದಿರಾ ಹತ್ಯೆ ಮತ್ತು ಆ ಹತ್ಯಾಕಾಂಡ. (ಬಿಜೆಪಿಗರ ಬಾಷೆಯಲ್ಲಿ ಹೇಳುವುದಾದರೆ ಅದು ಕ್ರಿಯೆಗೆ ಪ್ರತಿಕ್ರಿಯೆ ಆಗಿತ್ತು. ಈ ಉದಾಹರಣೆ ಬಳಸಿದ್ದಕ್ಕೆ ಕ್ಷಮೆ ಇರಲಿ) ಆದರೆ ಆ ಘಟನೆಯ ನಂತರ ಸಿಖ್ ಭಯೋತ್ಪಾದನೆ ಕೊನೆಗೊಂಡದ್ದು, ಖಲಿಸ್ಥಾನ್ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಧ್ವನಿ ಅಡಗಿದ್ದು ಯಾವುದೂ ಸುಳ್ಳಲ್ಲ. ನನ್ನ ಪ್ರಕಾರ 'ಪ್ರಕೃತಿ ತನ್ನ ಸಮತೋಲನವನ್ನು ಸದಾ ಕಾಪಾಡಿಕೊಳ್ಳುತ್ತದೆ' ಎಂಬ ಮಾತಿಗೆ ಆ ಘಟನೆ ಒಂದೊಳ್ಳೆಯ ಉದಾಹರಣೆಯೂ ಆಗಿದೆ. ಹಾಗೆಯೇ ನಾನು ಮೊದಲೇ ಹೇಳಿದಂತೆ ಆ 'ಸಿಖ್ ಹತ್ಯಾಕಾಂಡ' ಘಟನೆ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ. Show Full Article Advertisement Next Read: 'ಕಾಶ್ಮೀರ್ ಫೈಲ್ಸ್' ಸಿನೇಮಾ ಕುರಿತು ಮೊಸಳೆಗಣ್ಣೀರು ಸುರಿಸುತ್ತಿರುವ ಬಿಜೆಪಿ ಅಧಿಕಾರದಲ್ಲಿದ್ದೂ, ಅಂದೇ ಏಕೆ ಕಾಶ್ಮೀರ ಪಂಡಿತರ ರಕ್ಷಣೆಗೆ ಮುಂದಾಗಿರಲಿಲ್ಲ? » Advertisement Recent Posts ಮುಂದಿನ 10 ವರ್ಷ ಕಾಲ ಗ್ಯಾರಂಟಿ ಯೋಜನೆಗಳ ಮುಂದುವರಿಕೆ: ಡಿಕೆಶಿ ಸ್ಥಳೀಯ ಸಂಸ್ಥೆಗಳ ಕುಂದುಕೊರತೆಗಳ ಪರಿಹಾರ ನನ್ನ ಗುರಿ : ರಾಜು ಪೂಜಾರಿ MP ಸೀಟು ಕೊಡಿಸುವುದಾಗಿ 2 ಕೋಟಿ ರೂಪಾಯಿ ಪೀಕಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ-ಸೋದರಿ. (ಪ್ರಾತಿನಿಧಿಕ ಚಿತ್ರ) ಫೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ದ ಪ್ರಸಾದ್ ಕಾಂಚನ್ ದೂರು. ಸೈಟು ವಾಪಾಸು ನೀಡುವುದಾಗಿ ಸಿಎಂ ಪತ್ನಿಯಿಂದ ಮುಡಾಗೆ ಪತ್ರ! ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಬಿಜೆಪಿ ಪಿತೂರಿ- 1000ಕೋ. ರೂ ಸಂಗ್ರಹ: ಪೋಲೀಸ್ ದೂರು FIR ಆಗಿರುವ ಮೋದಿ ಸಂಪುಟದ 23 ಸಚಿವರು ರಾಜೀನಾಮೆ ನೀಡುವರೇ? ಇಡೀ ಪಕ್ಷ ಸಿದ್ದರಾಮಯ್ಯ ಬೆನ್ನಿಗಿದೆ: ಜಿ.ಸಿ ಚಂದ್ರಶೇಖರ್ ನಾಡಿನ ಶಾಂತಿ ಕದಡಿದ ಪ್ರಾಂಶುಪಾಲರಿಗೆ ಪ್ರಶಸ್ತಿ ನಿರಾಕರಣೆ ಸ್ವಾಗತಾರ್ಹ: ಕೊಡವೂರು ರಾಜ್ಯಪಾಲರ ಮೂಲಕ ಕೇಂದ್ರ ಪ್ರಾಯೋಜಿತ ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಲಿ! ಬಿಜೆಪಿಗರಿಂದ ಸಿದ್ಧರಾಮಯ್ಯರನ್ನು ಏನೂ ಮಾಡಲಾಗದು: ಗೀತಾ ವಾಗ್ಳೆ ರಾಜ್ಯಪಾಲರ ಕ್ರಮದ ವಿರುದ್ದ ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ! ಶಿರಾಡಿ ಗುಡ್ಡ ಕುಸಿತ; ಮುಖ್ಯಮಂತ್ರಿ ಭೇಟಿ- ಡಾ. ಕಕ್ಕಿಲ್ಲಾಯ ಬಹಿರಂಗ ಪತ್ರ. ಮರವಂತೆ ಜಾತ್ರೆ- ಬಡ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವಿರೇಕೆ?: ಡಾ. ಭಟ್ ನಿರ್ಮಲಾರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ