Homepageಉಡುಪಿಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರ ಬೀದಿಬದಿ ವ್ಯಾಪಾರ ನಿಷೇಧ: ಹಿಂದೂಧರ್ಮ ಪ್ರತಿಪಾದಿಸುವ 'ವಿಶ್ವಕುಟುಂಬ ಚಿಂತನೆ'ಗೆ ಮಾರಕ: ನಕ್ರೆ ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರ ಬೀದಿಬದಿ ವ್ಯಾಪಾರ ನಿಷೇಧ: ಹಿಂದೂಧರ್ಮ ಪ್ರತಿಪಾದಿಸುವ 'ವಿಶ್ವಕುಟುಂಬ ಚಿಂತನೆ'ಗೆ ಮಾರಕ: ನಕ್ರೆ Advertisement (ಸಾಂದರ್ಭಿಕ ಚಿತ್ರ)ಹಿಂದೂ ದೇವಸ್ಥಾನಗಳ ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರ ಬೀದಿಬದಿ ವ್ಯಾಪಾರವನ್ನು ಕೆಲವೊಂದು ಸಂಘಟನೆಗಳು ಬಲತ್ಕಾರವಾಗಿ ನಿಷೇಧಿಸುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಇದು ಹಿಂದೂಧರ್ಮ ಪ್ರತಿಪಾದನೆ ಮಾಡಿಕೊಂಡು ಬಂದಿರುವ 'ವಿಶ್ವಕುಟುಂಬ ಚಿಂತನೆ'ಗೆ ಮಾರಕವಾಗಿದ್ದು ಈ ಬಗ್ಗೆ ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಆಳುವ ಸರಕಾರದ ಮೌನ ರಾಜ್ಯದಲ್ಲಿ ತಾಂಡವವಾಡುತ್ತಿರುವ ಸಾಮಾಜಿಕ ರಾಜಕೀಯ ಅರಾಜಕತೆಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ಧತ್ತಿ ಇಲಾಖೆಯ 2002ರ ನಿಯಮಾವಳಿಗಳು ಹಿಂದೂ ದೇವಾಲಯಗಳ ಆಸ್ತಿಯನ್ನು ಅನ್ಯ ಮತೀಯರಿಗೆ ಗುತ್ತಿಗೆ ನೀಡುವುದನ್ನು ನಿಷೇದಿಸುತ್ತದೆಯೇ ಹೊರತು ದೇವಸ್ಥಾನಗಳ ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರು ಮಾಡುವ ಬೀದಿಬದಿ ವ್ಯಾಪಾರವನ್ನು ನಿಷೇದಿಸುವುದಿಲ್ಲ. ಬೀದಿಬದಿ ವ್ಯಾಪಾರ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ- 2014ರ ಕಾಯ್ದೆ ಹಾಗೂ ಕರ್ನಾಟಕ ಸರಕಾರ ಬೀದಿಬದಿ ವ್ಯಾಪಾರ ಅಧಿನಿಯಮ 2019- 2020 ರಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕಾನೂನಾತ್ಮಕ ಭದ್ರತೆಯಿದ್ದು, ಧರ್ಮದ ಹೆಸರಲ್ಲಿ ಅವರ ಹೊಟ್ಟೆಗೆ ಹೊಡೆಯುವುದು ಕಾನೂನು ಬಾಹಿರವಾಗಿದ್ದು ಇವರಿಗೆ ಭದ್ರತೆ ಒದಗಿಸುವಲ್ಲಿ ಸರಕಾರ ಎಡವಿದೆ ಎಂದು ಅವರು ಹೇಳಿದ್ದಾರೆ.ಪರಸ್ಪರ ದೋಷಾರೋಪ ಗಳನ್ನು ಇತ್ಯರ್ಥ ಪಡಿಸಿ ಸೌಹಾರ್ಧಯುತವಾಗಿ ಬಗೆಹರಿಸಬಹುದಾಗಿದ್ದ ಸಮಸ್ಯೆಯೊಂದು ದೇಶದ ಸಂವಿಧಾನದತ್ತ ಜಾತ್ಯತೀತತೆಯ ಸಿದ್ದಾಂತವನ್ನೆ ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದಿರುವ ವಿಷಾದನೀಯ. ಈ ಪ್ರಜಾತಂತ್ರ ವಿರೋಧಿ ಬೆಳವಣಿಗೆಗೆ ಕೇಂದ್ರ ರಾಜ್ಯ ಮತ್ತು ಸ್ಥಳೀಯಾಡಳಿತಗಳೆ ನೇರ ಹೊಣೆ ಎಂದು ತಿಳಿಸಿದ್ದಾರೆ. • ಬಿಪಿನ್ ಚಂದ್ರಪಾಲ್ ನಕ್ರೆ., ವಕ್ತಾರರು., ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ. Show Full Article Advertisement Next Read: ಸಂವಿಧಾನದ ಆಶಯಗಳನ್ನು ತಿಳಿಸದ ಮತ್ತು ತಿಳಿದುಕೊಳ್ಳದ ಮಾಧ್ಯಮಗಳು ಇದ್ದರೆಷ್ಟು ಹೋದರೆಷ್ಟು? :ಡಾ. ಎಚ್.ಸಿ ಮಹಾದೇವಪ್ಪ » Advertisement Recent Posts ಮುಂದಿನ 10 ವರ್ಷ ಕಾಲ ಗ್ಯಾರಂಟಿ ಯೋಜನೆಗಳ ಮುಂದುವರಿಕೆ: ಡಿಕೆಶಿ ಸ್ಥಳೀಯ ಸಂಸ್ಥೆಗಳ ಕುಂದುಕೊರತೆಗಳ ಪರಿಹಾರ ನನ್ನ ಗುರಿ : ರಾಜು ಪೂಜಾರಿ MP ಸೀಟು ಕೊಡಿಸುವುದಾಗಿ 2 ಕೋಟಿ ರೂಪಾಯಿ ಪೀಕಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ-ಸೋದರಿ. (ಪ್ರಾತಿನಿಧಿಕ ಚಿತ್ರ) ಫೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ದ ಪ್ರಸಾದ್ ಕಾಂಚನ್ ದೂರು. ಸೈಟು ವಾಪಾಸು ನೀಡುವುದಾಗಿ ಸಿಎಂ ಪತ್ನಿಯಿಂದ ಮುಡಾಗೆ ಪತ್ರ! ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಬಿಜೆಪಿ ಪಿತೂರಿ- 1000ಕೋ. ರೂ ಸಂಗ್ರಹ: ಪೋಲೀಸ್ ದೂರು FIR ಆಗಿರುವ ಮೋದಿ ಸಂಪುಟದ 23 ಸಚಿವರು ರಾಜೀನಾಮೆ ನೀಡುವರೇ? ಇಡೀ ಪಕ್ಷ ಸಿದ್ದರಾಮಯ್ಯ ಬೆನ್ನಿಗಿದೆ: ಜಿ.ಸಿ ಚಂದ್ರಶೇಖರ್ ನಾಡಿನ ಶಾಂತಿ ಕದಡಿದ ಪ್ರಾಂಶುಪಾಲರಿಗೆ ಪ್ರಶಸ್ತಿ ನಿರಾಕರಣೆ ಸ್ವಾಗತಾರ್ಹ: ಕೊಡವೂರು ರಾಜ್ಯಪಾಲರ ಮೂಲಕ ಕೇಂದ್ರ ಪ್ರಾಯೋಜಿತ ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಲಿ! ಬಿಜೆಪಿಗರಿಂದ ಸಿದ್ಧರಾಮಯ್ಯರನ್ನು ಏನೂ ಮಾಡಲಾಗದು: ಗೀತಾ ವಾಗ್ಳೆ ರಾಜ್ಯಪಾಲರ ಕ್ರಮದ ವಿರುದ್ದ ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ! ಶಿರಾಡಿ ಗುಡ್ಡ ಕುಸಿತ; ಮುಖ್ಯಮಂತ್ರಿ ಭೇಟಿ- ಡಾ. ಕಕ್ಕಿಲ್ಲಾಯ ಬಹಿರಂಗ ಪತ್ರ. ಮರವಂತೆ ಜಾತ್ರೆ- ಬಡ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವಿರೇಕೆ?: ಡಾ. ಭಟ್ ನಿರ್ಮಲಾರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ