ಹಿಂದಿಯಲ್ಲೆ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹಾಗೂ ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಹಿಂದಿಯಲ್ಲೆ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹಾಗೂ ಕಾಂಗ್ರೆಸ್ ನಾಯಕರು ಹೇಳಿದ್ದೇನು?
Advertisement
ಕಾಂಗ್ರೆಸ್ ನಾಯಕ, ಕೆಪಿಸಿಸಿ ಮಾಜಿ ಅಧ್ಯಕ್ಷ, ಸಮಾನತಾವಾದಿ ದಿನೇಶ್ ಗುಂಡೂರಾವ್ ರವರ ಹೇಳಿಕೆ:
ಬೇರೆ ಬೇರೆ ರಾಜ್ಯಗಳ ಜನರು ಸ್ಥಳೀಯ ಭಾಷೆ ಮಾತನಾಡದೆ ಸಂವಹನ ಭಾಷೆಯಾಗಿ ಹಿಂದಿ ಮಾತಾಡಬೇಕು ಎಂದು ಅಮಿತ್ ಶಾ ಉಪದೇಶ ನೀಡಿದ್ದಾರೆ. ಅಮಿತ್ ಶಾ ರವರಿಗೆ ಹಿಂದಿ ಮೇಲೆ ಅಷ್ಟೊಂದು ಕುರುಡು ಪ್ರೇಮವಿದ್ದರೆ ಅವರ ತವರು ರಾಜ್ಯ ಗುಜರಾತಿಗರಿಗೆ ಹಿಂದಿ ಕಲಿಯಲು ಬೋಧನೆ ಮಾಡಲಿ. ನಮಗಲ್ಲ. ಕನ್ನಡಿಗರಿಗೆ ಹಿಂದಿ ಮಾತಾನಾಡೋ ದರ್ದಿಲ್ಲ. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ.
ಸಂವಿಧಾನದಲ್ಲಿ ಹಿಂದಿಗೆ ವಿಶೇಷ ಮಾನ್ಯತೆಯೇನು ಇಲ್ಲ. ಸಂವಿಧಾನದ ಮಾನ್ಯತೆ ಪಡೆದಿರುವ ಭಾಷೆಗಳ ಪೈಕಿ ಹಿಂದಿಯೂ ಒಂದು ಎಂಬುದನ್ನು ಶಾ ನೆನಪಿನಲ್ಲಿಟ್ಟುಕೊಳ್ಳಲಿ. ಪ್ರಧಾನಿ ಮೋದಿ ಹಿಂದಿಯನ್ನು ಅಧಿಕೃತ ಭಾಷೆ ಎಂದು ನಿರ್ಧರಿಸಿದರೆ ನಾವೆಲ್ಲಾ ನಡು ಬಗ್ಗಿಸಿ ಹಿಂದಿ ಕಲಿತು ಮಾತಾಡಬೇಕೆ.? ಮೋದಿಯೇನು ಸಂವಿಧಾನಕ್ಕಿಂತ ದೊಡ್ಡವರೇ.?
ದೇಶದ ಪ್ರತಿಯೊಂದು ರಾಜ್ಯಕ್ಕೂ ಪ್ರಾದೇಶಿಕ ಅಸ್ಮಿತೆ ಎಷ್ಟು ಮುಖ್ಯವೋ..ಭಾಷಾ ಅಸ್ಮಿತೆಯೂ ಅಷ್ಟೇ ಮುಖ್ಯ. ಕನ್ನಡ ಕರ್ನಾಟಕದ ತಾಯಿ ಭಾಷೆ. ಕನ್ನಡಿಗರಿಗೆ ಕನ್ನಡ ಕೇವಲ ಸಂವಹನ ಮಾಧ್ಯಮವಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಉಸಿರು.ಕನ್ನಡಿಗರಷ್ಟೇ ಅಲ್ಲ,ದಕ್ಷಿಣದ ಯಾವ ರಾಜ್ಯಗಳೂ ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ. ಇದು ಶಾ ನೆನಪಿನಲ್ಲಿರಲಿ.
ಮೊನ್ನೆ ಗೋರಿಪಾಳ್ಯದಲ್ಲಿ ಚಂದ್ರು ಎಂಬ ಯುವಕನ ಕೊಲೆಯಾದಾಗ, ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಡೆದ ಕೊಲೆ ಎಂದು C.T.ರವಿ ರಂಪ ರಾಮಾಯಣ ಮಾಡಿದ್ದರು. ಈಗ ಅವರ ನಾಯಕ ಶಾ ಸ್ಥಳೀಯ ಭಾಷೆ ಮಾತನಾಡಬೇಡಿ ಎಂದು ಫರ್ಮಾನ್ ಹೊರಡಿಸಿದ್ದಾರೆ. ಈಗ ಎಲ್ಲಿ ಹೋಯಿತು ಸಿ.ಟಿ.ರವಿಯವರ ಭಾಷಾಭಿಮಾನ.? ಶಾ ಹೇಳಿಕೆ ವಿರೋಧಿಸುವ ಧೈರ್ಯ C.T.ರವಿಯವರಿಗಿದೆಯೇ.?
ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಿಂದಿಯನ್ನು ಒಂದು ಭಾಷೆಯಾಗಿ ನಾವು ಗೌರವಿಸುತ್ತೇವೆ. ಆದರೆ ಏಕದೇಶ,ಏಕಭಾಷೆ,ಏಕಸಂಸ್ಕೃತಿ ಹೆಸರಲ್ಲಿ ದಕ್ಷಿಣದ ರಾಜ್ಯಗಳ ಮೇಲಿನ ಹಿಂದಿ ಸವಾರಿ ಒಪ್ಪಲು ಸಾಧ್ಯವಿಲ್ಲ. ನಮಗೆ ನಮ್ಮದೇ ಆದ ಅಸ್ಮಿತೆಯಿದೆ, ನಮ್ಮದೇ ಆದ ಸ್ವಾಭಿಮಾನವಿದೆ. ಇದು BJP ನಾಯಕರಿಗೆ ತಿಳಿದಿರಲಿ.
ಕಾಂಗ್ರೆಸ್‌ನ ಮತ್ತೊಬ್ಬ ನಾಯಕ, ಮಾಜಿ ಸಚಿವ, ಜನಪರ ಚಿಂತಕ ಡಾ.ಎಚ್.ಸಿ ಮಹಾದೇವಪ್ಪ ರವರ ಹೇಳಿಕೆ: