Homepageರಾಜ್ಯಧಾರವಾಡ: ಮುಸ್ಲಿಂ ಹಣ್ಣಿನ ಅಂಗಡಿಗಳ ಮೇಲಿನ ದಾಳಿ ಕಾಶ್ಮೀರಿ ಉಗ್ರರ ಕೃತ್ಯಕ್ಕೆ ಸರಿಸಮ: ಎಚ್‌ಡಿಕೆ ಧಾರವಾಡ: ಮುಸ್ಲಿಂ ಹಣ್ಣಿನ ಅಂಗಡಿಗಳ ಮೇಲಿನ ದಾಳಿ ಕಾಶ್ಮೀರಿ ಉಗ್ರರ ಕೃತ್ಯಕ್ಕೆ ಸರಿಸಮ: ಎಚ್‌ಡಿಕೆ Advertisement ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳನ್ನು ನಾಶಪಡಿಸಿ, ಅವರು ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ನಾಶ ಮಾಡಿರುವುದು ಹೇಯ ಮತ್ತು ಪರಮ ಕಿರಾತಕ ಕೃತ್ಯ. ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸುವ ಭಯಾತ್ಪಾದಕರಿಗೂ, ಶಾಂತಿ-ಸೌಹಾರ್ದತೆಗೆ ಕಿಚ್ಚಿಡುತ್ತಿರುವ ಈ ಕಿರಾತಕರಿಗೂ ವ್ಯತ್ಯಾಸವೇ ಇಲ್ಲ. ತಿನ್ನುವ ಅನ್ನಕ್ಕೆ ಮಣ್ಣುಹಾಕಿ ಬದುಕಿಗೆ ಬೆಂಕಿ ಇಡುವ ಇಂಥ ಪ್ರವೃತ್ತಿ ಅನಾಗರಿಕ-ಅಸಹ್ಯ. ಕರ್ನಾಟಕವನ್ನು ಈ ದುಷ್ಟರು, ಶಿಲಾಯುಗದತ್ತ ಹಿಮ್ಮೆಟ್ಟಿಸುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಕ್ಕಸರು ಕಲ್ಲಂಗಡಿಯನ್ನು ರಸ್ತೆಗೆಸೆದು ನಾಶ ಮಾಡಿದ ಪರಿಯನ್ನು ಗಮಿನಿಸಿದರೆ ಸಾಕು; ಇವರ ರಾಕ್ಷಸ ಪ್ರವೃತ್ತಿ ಉಗ್ರರಿಗಿಂತ ಕಮ್ಮಿಯೇನಲ್ಲ. ಅನ್ನವನ್ನೇ ಹಾಳುಗೆಡವಿದ ಈ ನೀಚರಿಗೆ ತಕ್ಕ ಪಾಠ ಕಲಿಸಲೇಬೇಕು. ಇವರ ವಿರುದ್ಧ ಸರಕಾರವು ಕೂಡಲೇ ಭಯೋತ್ಪಾದನೆ ವಿರುದ್ಧದ ಕಾಯ್ದೆ ಅಡಿ ಕೇಸು ದಾಖಲಿಸಬೇಕು. ಸರ್ವ ಜನಾಂಗದ ತೋಟಕ್ಕೆ ಸಮಾಧಿ ಕಟ್ಟುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆಯಾ? ಎಂಬ ಸಂಶಯ ನನ್ನದು. ʼಮೌನಂ ಸಮ್ಮತಿ ಲಕ್ಷಣಂʼ ಎನ್ನುವಂತೆ ಸಿಎಂ ಬಸವರಾಜ ಬೊಮ್ಮಾಯಿ, ಬಾಯಿಗೆ ಬೀಗ ಹಾಕಿಕೊಂಡು; ʼಸತ್ತ ಸರಕಾರಕ್ಕೆ ನಾನೇ ಸಾಹುಕಾರʼ ಎನ್ನುವಂತೆ ಬೆಂಕಿ ನಡುವೆ ಪಿಟೀಲು ಬಾರಿಸುತ್ತಿದ್ದ ನೀರೋ ದೊರೆಯನ್ನು ಮೀರಿಸುತ್ತಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.ಅನ್ನಕ್ಕೆ ಮಣ್ಣು ಹಾಕುವುದು ಯಾವ ಧರ್ಮ? ಬದುಕಿಗೆ ಬೆಂಕಿ ಇಡುವುದು ಯಾವ ಧರ್ಮ? ಮನುಷ್ಯತ್ವಕ್ಕೆ ಸಮಾಧಿ ಕಟ್ಟುವುದು ಯಾವ ಧರ್ಮ? ಮಾನವೀಯತೆಯ ಸಾಕಾರಮೂರ್ತಿ ಶ್ರೀರಾಮಚಂದ್ರನಿಂದ ಇವರು ಕಲಿತದ್ದು ಯಾವ ಧರ್ಮ? ಸೇವೆಯನ್ನೇ ಧರ್ಮವೆಂದು ನಂಬಿದ ಶ್ರೀ ಆಂಜನೇಯನಿಂದ ಇವರು ಕಲಿತ ಆದರ್ಶ ಧರ್ಮ ಇದೇನಾ? ನನ್ನ ಪ್ರಕಾರ ಇವರು ಹಿಂದೂಗಳೇ ಅಲ್ಲ, ಮನಷ್ಯರೂ ಅಲ್ಲ. ಧರ್ಮಾಂದತೆಯ ಮತ್ತಿನಲ್ಲಿ ತೇಲುತ್ತಿರುವ ಕ್ರೂರ ಮೃಗಗಳು ಎಂದವರು ಹೇಳಿದರು.ಅಂಗಡಿಗಳನ್ನು ನಾಶಪಡಿಸಿ, ಕಲ್ಲಂಗಡಿಯನ್ನು ಹಾಳುಗೆಡವಿದ ಎಲ್ಲ ಕಿರಾತಕರ ವಿರುದ್ಧ ಸರಕಾರ ಕೂಡಲೇ ಕ್ರಿಮಿನಲ್ ಕೇಸು ದಾಖಲಿಸಬೇಕು, ರಾಜ್ಯದಿಂದಲೇ ಗಡೀಪಾರು ಮಾಡಬೇಕು. ಇದು ನನ್ನ ಆಗ್ರಹ. ದುಷ್ಕರ್ಮಿಗಳು ನಡೆಸಿದ ಈ ಪೈಶಾಚಿಕ ಕೃತ್ಯದ ಬಗ್ಗೆ ಕಲ್ಲಂಗಡಿ ಕಳೆದುಕೊಂಡ ನಬಿಸಾಬಿ ಹಾಗೂ ಕೃತ್ಯವನ್ನು ವಿರೋಧಿಸಿ ದೇಗುಲದ ಮುಖ್ಯಸ್ಥರು ನೀಡಿರುವ ಹೇಳಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. Show Full Article Advertisement Next Read: ಡೀಸೆಲ್, ಪೆಟ್ರೋಲ್, ಎಲ್ಪಿಜಿ ಬೆಲೆ ಏರಿಕೆ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ರವರಿಂದ ವಿಶಿಷ್ಟ ಪ್ರತಿಭಟನೆ » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ