Homepageರಾಜ್ಯಹಿಂದೆ ಗ್ಯಾಸ್ ಉಪಯೋಗಿಸುತ್ತಿದ್ದ ಜನರು ಮೋದಿಯವರ ಅಚ್ಚೇದಿನದ ಪರಿಣಾಮವಾಗಿ ಸೌದೆ ಒಲೆಯತ್ತ ಮೊರೆ ಹೋಗುತ್ತಿದ್ದಾರೆ: ದಿನೇಶ್ ಗುಂಡೂರಾವ್ ಹಿಂದೆ ಗ್ಯಾಸ್ ಉಪಯೋಗಿಸುತ್ತಿದ್ದ ಜನರು ಮೋದಿಯವರ ಅಚ್ಚೇದಿನದ ಪರಿಣಾಮವಾಗಿ ಸೌದೆ ಒಲೆಯತ್ತ ಮೊರೆ ಹೋಗುತ್ತಿದ್ದಾರೆ: ದಿನೇಶ್ ಗುಂಡೂರಾವ್ Advertisement "ಮೋದಿಯವರ ಅಚ್ಚೇದಿನದ ಪರಿಣಾಮ ಗೃಹಬಳಕೆಯ ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿ ಹೋಗಿದೆ. ಕೇಂದ್ರದ ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಂಪರ್ಕ ಪಡೆದಿದ್ದ ಬಡಪಾಯಿ ಬಡವರು ಗ್ಯಾಸ್ ಬೆಲೆಯೇರಿಕೆಯ ಶಾಕ್‌ಗೆ ತತ್ತರಿಸಿ ಹೋಗಿದ್ದಾರೆ. ಸೌದೆ ಬಿಟ್ಟು ಸಿಲಿಂಡರ್ ಮೊರೆ ಹೋಗಿದ್ದ ಬಡವರಿಗೆ ದರ ಏರಿಕೆಯಿಂದ ಹಳೆ ಗಂಡನ ಪಾದವೇ ಗತಿ ಎಂಬಂತೆ ಸೌದೆಯೇ ಆಸರೆಯಾಗಿದೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಹೊಗೆ ರಹಿತ ಅಡುಗೆ ಮನೆ ಉಜ್ವಲಾ ಯೋಜನೆಯ ಮೂಲ ಉದ್ದೇಶ. ಆದರೆ ಕೇಂದ್ರ ಸಿಲಿಂಡರ್ ಬೆಲೆಯನ್ನು ಯದ್ವಾತದ್ವಾ ಏರಿಸಿದರೆ ಬಡವರಿಗೆ ಕೊಳ್ಳುವ ಶಕ್ತಿಯೆಲ್ಲಿದೆ? ಬಡವರು ಈ ದರದಲ್ಲಿ ಸಿಲಿಂಡರ್ ಖರೀದಿಸಿ ಅನ್ನ ಬೇಯಿಸಲು ಸಾಧ್ಯವೆ? ಬಡವರು ಅನ್ಯಮಾರ್ಗವಿಲ್ಲದೆ ಅಡುಗೆಗೆ ಸೌದೆಯನ್ನೇ ಬಳಸಬೇಕು. ಹಾಗಾದರೆ ಉಜ್ವಲಾ ಯೋಜನೆಯ ಸಾರ್ಥಕತೆಯೇನು" ಎಂದವರು ಪ್ರಶ್ನಿಸಿದ್ದಾರೆ. "ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಗ್ಯಾಸ್‌ಗೆ ಸಬ್ಸಿಡಿ ದೊರೆಯುತಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಳಿತವಾದರೂ ಅದರ ಬಿಸಿ ಗ್ರಾಹಕರಿಗೆ ತಟ್ಟದಂತೆ ಸಿಂಗ್ ಸರ್ಕಾರ ನೋಡಿಕೊಂಡಿತ್ತು. ಆದರೆ ಮೋದಿ ಸರ್ಕಾರ ಗ್ಯಾಸ್ ಮೇಲಿನ ಸಬ್ಸಿಡಿಯನ್ನು ಸುಳಿವೇ ಕೊಡದೆ ರದ್ದು ಮಾಡಿದೆ. ಬಡವರು ಬದುಕಬಾರದು ಎನ್ನುವುದು ಮೋದಿ ಸರ್ಕಾರದ ಉದ್ದೇಶವೇ" ಎಂದವರು ಕೇಳಿದ್ದಾರೆ. "ಮೋದಿಯವರ ಆಡಳಿತದಲ್ಲಿ ದುಡ್ಡಿದ್ದವರು ಮಾತ್ರ ದುನಿಯಾ ನಡೆಸಲು ಸಾಧ್ಯ. ಬಡವರ ಪಾಲಿಗೆ ಮೋದಿ ಸರ್ಕಾರ ಶಾಪಗ್ರಸ್ತ ಸರ್ಕಾರವಾಗಿದೆ. ಬೆಲೆಯೇರಿಕೆ ಕೇವಲ ಗ್ಯಾಸ್‌ಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಂದು ವಸ್ತುವಿನ ಬೆಲೆಯೂ ಕೈಗೆಟುಕದಂತಾಗಿದೆ. ಬೆಲೆಯೇರಿಕೆಯಿಂದ ಆಮ್ ಆದ್ಮಿಯ ಪಾಡು ಆತನಿಗಷ್ಟೇ ಗೊತ್ತು" ಎಂದವರು ಖೇದ ವ್ಯಕ್ತಪಡಿಸಿದರು. ಚಿತ್ರಗಳು: ಸಾಂದರ್ಭಿಕವಾಗಿ ಬಳಸಲಾಗಿದೆ. Show Full Article Advertisement Next Read: ಮಾನ್ಯ ನಳಿನ್ ಕಟೀಲ್ರವರೆ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ನಿಮ್ಮ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ?: ದಿನೇಶ್ ಗುಂಡೂರಾವ್ » Advertisement Recent Posts ಮುಂದಿನ 10 ವರ್ಷ ಕಾಲ ಗ್ಯಾರಂಟಿ ಯೋಜನೆಗಳ ಮುಂದುವರಿಕೆ: ಡಿಕೆಶಿ ಸ್ಥಳೀಯ ಸಂಸ್ಥೆಗಳ ಕುಂದುಕೊರತೆಗಳ ಪರಿಹಾರ ನನ್ನ ಗುರಿ : ರಾಜು ಪೂಜಾರಿ MP ಸೀಟು ಕೊಡಿಸುವುದಾಗಿ 2 ಕೋಟಿ ರೂಪಾಯಿ ಪೀಕಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ-ಸೋದರಿ. (ಪ್ರಾತಿನಿಧಿಕ ಚಿತ್ರ) ಫೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ದ ಪ್ರಸಾದ್ ಕಾಂಚನ್ ದೂರು. ಸೈಟು ವಾಪಾಸು ನೀಡುವುದಾಗಿ ಸಿಎಂ ಪತ್ನಿಯಿಂದ ಮುಡಾಗೆ ಪತ್ರ! ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಬಿಜೆಪಿ ಪಿತೂರಿ- 1000ಕೋ. ರೂ ಸಂಗ್ರಹ: ಪೋಲೀಸ್ ದೂರು FIR ಆಗಿರುವ ಮೋದಿ ಸಂಪುಟದ 23 ಸಚಿವರು ರಾಜೀನಾಮೆ ನೀಡುವರೇ? ಇಡೀ ಪಕ್ಷ ಸಿದ್ದರಾಮಯ್ಯ ಬೆನ್ನಿಗಿದೆ: ಜಿ.ಸಿ ಚಂದ್ರಶೇಖರ್ ನಾಡಿನ ಶಾಂತಿ ಕದಡಿದ ಪ್ರಾಂಶುಪಾಲರಿಗೆ ಪ್ರಶಸ್ತಿ ನಿರಾಕರಣೆ ಸ್ವಾಗತಾರ್ಹ: ಕೊಡವೂರು ರಾಜ್ಯಪಾಲರ ಮೂಲಕ ಕೇಂದ್ರ ಪ್ರಾಯೋಜಿತ ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಲಿ! ಬಿಜೆಪಿಗರಿಂದ ಸಿದ್ಧರಾಮಯ್ಯರನ್ನು ಏನೂ ಮಾಡಲಾಗದು: ಗೀತಾ ವಾಗ್ಳೆ ರಾಜ್ಯಪಾಲರ ಕ್ರಮದ ವಿರುದ್ದ ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ! ಶಿರಾಡಿ ಗುಡ್ಡ ಕುಸಿತ; ಮುಖ್ಯಮಂತ್ರಿ ಭೇಟಿ- ಡಾ. ಕಕ್ಕಿಲ್ಲಾಯ ಬಹಿರಂಗ ಪತ್ರ. ಮರವಂತೆ ಜಾತ್ರೆ- ಬಡ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವಿರೇಕೆ?: ಡಾ. ಭಟ್ ನಿರ್ಮಲಾರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ