"ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದರ ಗೋಮುಖ ವ್ಯಾಘ್ರತನ ಇಡೀ ರಾಜ್ಯಕ್ಕೆ ಗೊತ್ತು. ಅವರ ಅಧಿಕಾರಾವಧಿಯಲ್ಲಿ ಏನೂ ಮಾಡದೆ ಈಗ ರಾಜ್ಯ ಸರ್ಕಾರದ ವಿರುದ್ದ ಟೀಕೆ ಮಾಡುತ್ತಿದ್ದಾರೆ" ಎಂಬ ಕೇಂದ್ರ ಸಚಿವೆ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರೆಂದ್ಲಾಜೆ ಯವರ ಹೇಳಿಕೆಯ ಕುರಿತು ಅವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಈ ಮಾತನ್ನು ಹೇಳಿದ್ದಾರೆ.
"ಶೋಭಾ ಕರಂದ್ಲಾಜೆ ಅವರೇ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದ ಮೂಲಸೌಕರ್ಯಗಳ ಅಭಿವೃದ್ಧಿಯು ಭಾರತದಲ್ಲೇ ಅತ್ಯುತ್ತಮ ಗುಣಮಟ್ಟದ್ದು ಎಂದು ವಿಶ್ವ ಬ್ಯಾಂಕ್ ನಿಂದ ಪ್ರಶಂಸೆ ದೊರೆತಿದೆ. ಹಾಗಾದರೆ ಅಭಿವೃದ್ಧಿ ವಿಷಯದಲ್ಲಿ ವಿಶ್ವಬ್ಯಾಂಕ್ ಗಿಂತಲೂ ಹೆಚ್ಚು ಜ್ಞಾನ ನಿಮಗಿದೆಯೇ? ನಿಮಗೆ ಮತ್ತು ನಿಮ್ಮ ಪಕ್ಷದ ಬಹುತೇಕರಿಗೆ ಅಭಿವೃದ್ಧಿ ಎಂದರೆ ಏನು? ಅದು ಹೇಗಿರುತ್ತದೆ ಎಂಬ ಸಂಗತಿ ತಿಳಿದಿಲ್ಲ" ಎಂದವರು ಹೇಳಿದರು.
"ಚುನಾವಣೆ ಸಮಯ ಹತ್ತಿರ ಬಂದಿದೆ, ಶವ ರಾಜಕೀಯ ಮಾಡಲು ಎಲ್ಲಾದರೂ ಹೆಣ ಸಿಗುವುದೋ ನೋಡಿ ಇಲ್ಲವೇ ಯಾರಾದರೂ ಹಿಜಾಬ್ ಧರಿಸಿದ್ದಾರಾ ಎಂದು ಗಮನಿಸಿ. ನಿಮ್ಮ ಯೋಗ್ಯತೆಗೆ ಅದೇ ಅಭಿವೃದ್ಧಿ" ಎಂದವರು ಹೇಳಿದರು.