ಮೇ 15: ಕನ್ನಡ ಮೀಡಿಯಾ ಡಾಟ್ ಕಾಮ್ ವರ್ಷಾಚರಣೆ: "ಬೇರೆಯೇ ಮಾತು" ಪುಸ್ತಕ ಬಿಡುಗಡೆ
ಮೇ 15: ಕನ್ನಡ ಮೀಡಿಯಾ ಡಾಟ್ ಕಾಮ್ ವರ್ಷಾಚರಣೆ: "ಬೇರೆಯೇ ಮಾತು" ಪುಸ್ತಕ ಬಿಡುಗಡೆ
Advertisement
15 ಮೇ 2022 ಆದಿತ್ಯವಾರ, ಮದ್ಯಾಹ್ನ ಗಂಟೆ 3.30ಕ್ಕೆ, ಉಡುಪಿ ಜಿಲ್ಲೆಯ ಕುಂದಾಪುರದ ಕಲಾಮಂದಿರದಲ್ಲಿ "ಕನ್ನಡ ಮೀಡಿಯಾ ಡಾಟ್ ಕಾಂ" ಸುದ್ದಿ ಜಾಲತಾಣ ಇದರ ವರ್ಷಾಚರಣೆಯ ಅಂಗವಾಗಿ ಕನ್ನಡದ ಹೆಮ್ಮೆಯ ಪತ್ರಕರ್ತ, ಓದುಗರ ಒಡೆತನದ ಪತ್ರಿಕೆ ಮುಂಗಾರು ವಿನ ಸಂಪಾದಕ, ವಡ್ಡರ್ಸೆ ರಘುರಾಮ ಶೆಟ್ಟಿ ಇವರ ಸಂಪಾದಕೀಯ ಬರಹಗಳ ಸಂಕಲನ "ಬೇರೆಯೇ ಮಾತು" ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ವಿಧಾನಪರಿಷತ್ ಮಾಜಿ ಸಭಾಪತಿ ಹಾಗೂ ಕಾಂಗ್ರೆಸ್ ನಾಯಕರಾದ ಕೆ.ಪ್ರತಾಪ್ ಚಂದ್ರ ಶೆಟ್ಟಿ ಯವರು ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ (ಸಿದ್ದರಾಮಯ್ಯ ಅವಧಿ) ಹಿರಿಯ ಪತ್ರಕರ್ತ, ಜನಪರ ಚಿಂತಕ ಹಾಗೂ "ಬೇರೆಯೇ ಮಾತು" ಪುಸ್ತಕದ ಸಂಪಾದಕ ದಿನೇಶ್ ಅಮಿನ್ ಮಟ್ಟು ಪುಸ್ತಕ ಪರಿಚಯವನ್ನು ನೆರವೇರಿಸಲಿದ್ದಾರೆ. ಜನಪರ ಬರಹಗಾರರು, ಸಾಮಾಜಿಕ ಚಿಂತಕರು ಹಾಗೂ ಜೆಎನ್‌ಯು ನವದೆಹಲಿ ಇದರ ನಿವೃತ್ತ ಪ್ರಧ್ಯಾಪಕರಾದ ಪುರುಷೋತ್ತಮ ಬಿಳಿಮಲೆ ಪುಸ್ತಕ ಬಿಡುಗಡೆ ನೆರವೇರಿಸಲಿದ್ದಾರೆ. ವಕೀಲರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಸುದೀರ್ ಕುಮಾರ್ ಮುರೊಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಪ್ರಯುಕ್ತ ಕನ್ನಡ ಮೀಡಿಯಾ ಡಾಟ್ ಕಾಮ್ ಓದುಗರು ಮತ್ತು ಸಮಾನ ಮನಸ್ಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಸಂಪಾದಕ ಚಂದ್ರಶೇಖರ ಶೆಟ್ಟಿಯವರು ವಿನಂತಿಸಿದ್ದಾರೆ.