ಆದರೆ ರಾಜ್ಯ ಸರ್ಕಾರ ಇದೀಗ ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ಘೋಷಿಸಿದೆ. ಇದು ಅರ್ಥಹೀನ ಮತ್ತು ಅತಾರ್ಕಿಕ! ಏಕೆಂದರೆ, ಮರು ಪರೀಕ್ಷೆಯಿಂದ ಮೇಲೆ ವಿವರಿಸಿದ ಅಂತಹ ಪ್ರಾಮಾಣಿಕ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಉನ್ನತ ಮಟ್ಟದ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಮೇಲೆ ಕ್ರಮಕೈಗೊಳ್ಳಬೇಕಿದೆ. ತಪ್ಪಿತಸ್ಥರಲ್ಲದ ಅಭ್ಯರ್ಥಿಗಳ ನೇಮಕಾತಿಯನ್ನು ಮರು ಪರೀಕ್ಷೆಗೆ ಗುರಿಪಡಿಸದೆ ಅಂತಿಮಗೊಳಿಸಿ ಆದೇಶಿಸಬೇಕಿದೆ.
ಅದಕ್ಕೆ ಬದಲಾಗಿ ತಪ್ಪಿತಸ್ಥ ರಾಜಕಾರಣಿಗಳನ್ನು ಉಳಿಸಲು ನಿರಪರಾಧಿ ಅಭ್ಯರ್ಥಿಗಳನ್ನು ಬಲಿಕೊಡುವುದು ಅಕ್ಷಮ್ಯ. ಹಾಗೆ ತನಿಖೆ ನಡೆಸುವಂತೆ ಪ್ರಜ್ಞಾವಂತರು ಒತ್ತಾಯಿಸಬೇಕಾಗಿದೆ. ಅದಲ್ಲವಾದರೆ ಈ ತನಿಖಾ ನಾಟಕ ಹಳ್ಳಹಿಡಿಯುವ ಎಲ್ಲಾ ಸಾಧ್ಯತೆಗಳಿವೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ಕೂಡ ಸಕ್ರಮ ಎನ್ನಿಸಿಕೊಳ್ಳುವ ಅಪಾಯಗಳು ಇವೆ.