Advertisement

ಪಿಎಸ್‌ಐ ನೇಮಕಾತಿಯನ್ನು ರದ್ದು ಪಡಿಸಿ   ಮರು ಪರೀಕ್ಷೆಗೆ ಆದೇಶಿಸಿರುವುದರ ಹಿಂದೆ ಆರೋಪಿಗಳ ರಕ್ಷಣೆಯ ಪಿತೂರಿ ಅಡಗಿದೆ: ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪ

Advertisement
ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅರೆಸ್ಟ್ ಆದ ಬೆನ್ನಲ್ಲೇ ಕಾನೂನಾತ್ಮಕ ವಿಚಾರಣೆ ಮುಗಿಯುವ ಮೊದಲೇ ಗೃಹ ಇಲಾಖೆ 2020-21 ರ ನೇಮಕಾತಿಯನ್ನು ರದ್ದು ಪಡಿಸಿ ಮರು ಪರೀಕ್ಷೆಗೆ ಆದೇಶ ನೀಡಿರುವುದರ ಹಿಂದೆ ಆಪಾದಿತರನ್ನು ರಕ್ಷಿಸುವ ವ್ಯವಸ್ಥಿತ ಪಿತೂರಿ ಅಡಗಿದೆ ಎಂದು ಉಡುಪಿ ಜಿಲ್ಲಾ ಕಾಂಗೆಸ್ ಪತ್ರಿಕಾ ಪ್ರಕಟಣೆಯಲ್ಲಿ ಸಂಶಯ ವ್ಯಕ್ತ ಪಡಿಸಿದೆ.

ಪಿಎಸ್ಐ ನೇಮಕಾತಿ ಪರೀಕ್ಷೆಯ ಎಲ್ಲ ಕೇಂದ್ರಗಳಲ್ಲಿಯೂ ಅಕ್ರಮ ನಡೆದಿರುವ ಸಂಶಯವಿರುವುದರಿಂದ ಎಲ್ಲ 545 ಮಂದಿಯ ನೇಮಕಾತಿ ರದ್ದು ಪಡಿಸಲಾಗಿದ್ದು ಪರೀಕ್ಷೆಗೆ ಕುಳಿತಿದ್ದ 54,289 ಅಭ್ಯರ್ಥಿಗಳಲ್ಲಿ ಅಕ್ರಮದಲ್ಲಿ ಭಾಗಿಯಾದವರನ್ನು ಹೊರತು ಪಡಿಸಿ ಉಳಿದವರಿಗೆ ಮರುಪರೀಕ್ಷೆಯ ಅವಕಾಶ ಕಲ್ಪಿಸಲಾಗಿದೆ ಎಂಬ ಗೃಹ ಸಚಿವರ ಹೇಳಿಕೆ ಜನರಲ್ಲಿ ಮತ್ತಷ್ಟು ಸಂಶಯವನ್ನು ಹುಟ್ಟು ಹಾಕಿದೆ. ಸಮಗ್ರ ತನಿಖೆ ಮುಂದಷ್ಟೇ ನಡೆಯ ಬೇಕು. ಈ ತನಿಖೆಯಲ್ಲಿ ಅಕ್ರಮದ ದಾರಿಯಲ್ಲಿ ನೇಮಕಾತಿಗೊಂಡವರನ್ನು ಗುರುತಿಸಿ ಅವರನ್ನು ಶಿಕ್ಷೆಗೊಳ ಪಡಿಸುವುದು ಸರಕಾರದ ಕರ್ತವ್ಯ. ಆದರೆ ಈ ನಿಟ್ಟಿನಲ್ಲಿ ಆಳುವ ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ಅಕ್ರಮದಲ್ಲಿ ಹುದ್ದೆ ಗಿಟ್ಟಿಸಿಕೊಂಡವರು ಯಾರು ಎಂದು‌ ತಿಳಿದ ಬಳಿಕ ಅವಿರತ ಪರಿಶ್ರಮದ ಮೂಲಕ ಸರಿದಾರಿಯಲ್ಲಿ ಪಾಸಾದವರ ನೇಮಕಾತಿಯನ್ನು ರದ್ದು ಪಡಿಸುವ ಔಚಿತ್ಯವಾದರೂ ಏನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈಗಾಗಲೇ ದಿವ್ಯಾ ಹಾಗರಗಿ ಸಹವರ್ತಿಗಳೆನ್ನಲಾದ 12 ಪ್ರಮುಖ ಆಪಾದಿತರನ್ನೂ ಬಂದಿಸಲಾಗಿದ್ದು ಪೊಲೀಸರಿಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಅನುಕೂಲವಾಗುವಂತೆ ರಾಜ್ಯದ ಗೃಹಸಚಿವರನ್ನು ರಾಜೀನಾಮೆ ಕೊಡಿಸಿ ಬದಲೀ ವ್ಯವಸ್ಥೆ ಮಾಡ ಬೇಕು. ಅಲ್ಲದೆ ಪ್ರಕರಣವನ್ನು ಸಿಬಿಐ ಅಥವಾ ಹಾಲಿ ಯಾ ನಿವೃತ್ತ ಹೈಕೋಟ್೯ ನ್ಯಾಯಾದೀಶರ ಮೂಲಕ ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಜಿಲ್ಲಾ ಕಾಂಗ್ರಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
Advertisement
Recent Posts
Advertisement