Advertisement

ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಒಂದರ ಮೇಲೊಂದರಂತೆ ಅಂಬೇಡ್ಕರರಿಗೆ ಅವಮಾನ ಮಾಡಿದೆ! ಆ ಅವಮಾನಗಳ ಪಟ್ಟಿ ಹೀಗಿದೆ.

Advertisement
•ಬರಹ: ದಿನೇಶ್ ಕುಮಾರ್ ದಿನೂ

ಕರ್ನಾಟಕದ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥ ಎಂಬ ವಿಕೃತನ ನೇತೃತ್ವದಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ. ಈ ಪಠ್ಯಪುಸ್ತಕವು ಒಂದರ ಮೇಲೊಂದರಂತೆ ಅಂಬೇಡ್ಕರರಿಗೆ ಅವಮಾನ ಮಾಡಿದೆ. ಆ ಅವಮಾನಗಳ ಪಟ್ಟಿ ಹೀಗಿದೆ.

6 ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ಚನ್ನಣ್ಣ ವಾಲೀಕಾರ ಅವರು ಬರೆದಿದ್ದ 'ನೀ ಹೋದ ಮರುದಿನ' ಎಂಬ ಅಂಬೇಡ್ಕರರ ಬಗೆಗಿನ ಕವಿತೆಯನ್ನು ತೆಗೆದು ಹಾಕಲಾಗಿದೆ.

7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಮಾಜ ಸುದಾರಕರ ಬಗ್ಗೆ ಹೇಳಿದೆ. ಅಲ್ಲಿ ಅಂಬೇಡ್ಕರರ ಬಗ್ಗೆಯೂ ಮಾಹಿತಿ ಇದೆ. ಈ ಹಿಂದಿನ ಪಠ್ಯಪುಸ್ತಕದಲ್ಲಿ *ಅಂಬೇಡ್ಕರ್ ತಂದೆ, ತಾಯಿಯವರ ಹೆಸರುಗಳಿದ್ದವು. ಅಂಬೇಡ್ಕರ್ ಹುಟ್ಟಿದ ಸ್ಥಳ ಮತ್ತು ದಿನಾಂಕವಿತ್ತು. ಅದನ್ನೂ ಸಹ ತೆಗೆದುಹಾಕಲಾಗಿದೆ.
ಮೇಲಿನ ಅದೇ ಭಾಗದಲ್ಲಿ ಅಂಬೇಡ್ಕರರ ಬೃಹತ್ ಹೋರಾಟಗಳಾಗಿದ್ದ ಮಹಾಡ್ ಸತ್ಯಾಗ್ರಹ ಹಾಗೂ ಕಾಲಾರಾಂ ದೇಗುಲ ಪ್ರವೇಶ ಹೋರಾಟಗಳನ್ನು ಪ್ರಸ್ತಾಪಿಸಲಾಗಿತ್ತು. ಅದನ್ನೂ ತೆಗೆದುಹಾಕಲಾಗಿದೆ.

9 ನೇ ತರಗತಿಯ ಸಮಾಜ ವಿಜ್ಞಾನದ‌ ನಮ್ಮ ಸಂವಿಧಾನ ಪಾಠದಲ್ಲಿ ಇವರು (ಅಂಬೇಡ್ಕರರು) ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು 'ಸಂವಿಧಾನ ಶಿಲ್ಪಿ' ಎಂದು ಕರೆಯಲಾಗಿದೆ ಎಂದಿತ್ತು. ಈ ವಾಕ್ಯವನ್ನೂ ಈಗ ತೆಗೆಯಲಾಗಿದೆ. ಅಷ್ಟೇ ಅಲ್ಲದೆ ಹೊಸದಾಗಿ ಬಿ.ಎನ್.ರಾವ್ ಸಂವಿಧಾನ ಕರಡು ಪ್ರತಿಯ ಚೌಕಟ್ಟು ಹಾಗೂ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದರೆಂದು ಸೇರಿಸಲಾಗಿದೆ.

10 ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಗಾಂಧಿ ಯುಗ ಮತ್ತು ರಾಷ್ಟ್ರೀಯ ಚಳವಳಿ ಪಾಠದಲ್ಲಿ ಈ ಹಿಂದೆ ಅಂಬೇಡ್ಕರ್‌ ಅವರು ಜಾತಿ ವ್ಯವಸ್ಥೆಯಿಂದ ಬೇಸತ್ತಿದ್ದು, ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿದ್ದ ಬೌದ್ಧಧರ್ಮವನ್ನು ಸ್ವೀಕರಿಸಿದ್ದರು ಎಂಬ ವಾಕ್ಯವಿತ್ತು. ಅದನ್ನೂ ತೆಗೆಯಲಾಗಿದೆ.

9 ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ 'ಮರಳಿ ಮನೆಗೆ' ಎಂಬ ಅರವಿಂದ ಮಾಲಗತ್ತಿಯವರು ಬುದ್ಧನ ಕುರಿತು ಬರೆದಿದ್ದ ಕವಿತೆ ಇತ್ತು. ಅದನ್ನೂ ತೆಗೆದು ಹಾಕಲಾಗಿದೆ.

ಇಷ್ಟೆಲ್ಲ ಅಂಬೇಡ್ಕರರ ಬಗ್ಗೆ ವಿಷಕಾರಿರುವ ಬಿಜೆಪಿ ಸರ್ಕಾರ ನೇತೃತ್ವದ ಶಾಲಾ ಪಠ್ಯಪುಸ್ತಕವನ್ನು ಶಾಲೆಗಳಿಗೆ ತಲುಪಿಸಲು ಸಜ್ಜಾಗಿದೆ.
ಅಂಬೇಡ್ಕರರ ವಿಚಾರವನ್ನೇ ತಿರುಚಿರುವ, ಸುಳ್ಳಾಡಿರುವ ಈ ಪಠ್ಯಪುಸ್ತಕಗಳು ಬೇಡವೇ ಬೇಡ. ಕುವೆಂಪು, ಬಸವಣ್ಣ, ಸಾವಿತ್ರಿಬಾಯಿ ಫುಲೆಯವರಿಗೆ ಅವಮಾನ ಮಾಡಿರುವ ಈ ಪಠ್ಯಪುಸ್ತಕಗಳು ಬೇಡವೇ ಬೇಡ. ಹಿಂದಿನ ವರ್ಷದ ಪಠ್ಯಪುಸ್ತಕಗಳನ್ನೇ ಶಾಲೆಗೆ ನೀಡಿ, ಈ ರೋಹಿತ್ ಚಕ್ರತೀರ್ಥ ಪರಿಷ್ಕರಿಸಿರುವ ಎಲ್ಲಾ ಪಠ್ಯಪುಸ್ತಕಗಳು ರದ್ಧಾಗಲೆಂದು ಆಗ್ರಹಿಸಬೇಕಿದೆ.

ಇದು ನ್ಯಾಯವೇ? ನಿಮಗಿದು ಸಮ್ಮತವೇ?

ನಮಗೊಂದು ಸಂವಿಧಾನ ಕೊಟ್ಟು, ಮಾತನಾಡುವ ಶಕ್ತಿ ತುಂಬಿದ ಆ ಮಹಾಜೀವಕ್ಕೆ ಇಷ್ಟೆಲ್ಲ ಅನ್ಯಾಯವಾದರೂ ನಾವು ಮಾತನಾಡದೇ ಇರಬೇಕೆ? ಒಮ್ಮೆ ಯೋಚಿಸಿ.
ಈ ಮೇಲಿನ ಚಿತ್ರ ಗಮನಿಸಿ: ಆರನೇ ತರಗತಿ ಪಠ್ಯದಲ್ಲಿ ಕನ್ನಡ ಬಾವುಟವಿದ್ದ, ಭುವನೇಶ್ವರಿಯ ಮೆರವಣಿಗೆಯ ಚಿತ್ರವನ್ನು ತೆಗೆದುಹಾಕಲಾಗಿದೆ. ಬದಲಾಗಿ ಕೇಸರಿ ಬಾವುಟಗಳು ಕಾಣುವ ಧಾರ್ಮಿಕ ಮೆರವಣಿಗೆ ಚಿತ್ರವನ್ನು ಹಾಕಲಾಗಿದೆ.
ಕನ್ನಡ ಬಾವುಟವನ್ನು ತನ್ನ ಒಳಚೆಡ್ಡಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥ ಕೊನೆಗೂ ಪಠ್ಯಪುಸ್ತಕಗಳಿಂದಲೂ ಕನ್ನಡ ಬಾವುಟವನ್ನು ಮಾಯ ಮಾಡಿದ್ದಾನೆ. ಕನ್ನಡವೆಂದರೆ ಇವನಿಗೆ ಅದೆಂಥ ದ್ವೇಷ ಇರಬಹುದು ಊಹಿಸಿ. ಸ್ನೇಹಿತರೆ, ಈಗಲೂ ನಾವು ಪ್ರತಿಭಟಿಸಿದ್ದರೆ ಮುಂದಿನ ಜನಾಂಗ ನಮ್ಮನ್ನು ಖಂಡಿತವಾಗಿಯೂ ಕ್ಷಮಿಸದು.
Advertisement
Advertisement
Recent Posts
Advertisement