Advertisement

ಪಠ್ಯಪುಸ್ತಕದಲ್ಲಿ ಮಾಹಿತಿ ತಿರುಚುವಿಕೆ: ಬಿಜೆಪಿ ಸರ್ಕಾರದಿಂದ ಬುದ್ಧ, ಬಸವಣ್ಣ, ಕುವೆಂಪು, ಭಗತ್‌ಸಿಂಗ್ ಮೊದಲಾದ ಶ್ರೇಷ್ಠ ವ್ಯಕ್ತಿಗಳಿಗೆ ಅಪಚಾರ: ಕಾಂಗ್ರೆಸ್‌ನಿಂದ ಜೂನ್ 9ರಂದು ಧರಣಿ‌

Advertisement
"ಪಠ್ಯಪರಿಷ್ಕರಣೆಯ ಹೆಸರಿನಲ್ಲಿ ಬಿಜೆಪಿಯು ಬುದ್ಧ, ಬಸವಣ್ಣ, ಕುವೆಂಪು, ಭಗತ್‌ಸಿಂಗ್ ಮೊದಲಾದ ಶ್ರೇಷ್ಠ ವ್ಯಕ್ತಿಗಳಿಗೆ ಅಗೌರವ ತೋರಿದೆ. ಬಿಜೆಪಿ ಸರ್ಕಾರವು ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದೆ. ಇದನ್ನು ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್‌ನಿಂದ ಜೂನ್ 9ರಂದು ಬೆಳಿಗ್ಗೆ 10 ಗಂಟೆಗೆ ಧರಣಿ‌ ನಡೆಸಲಾಗುವುದು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

"ಪಠ್ಯ ಪುಸ್ತಕಗಳಲ್ಲಾಗಿರುವ ಯಡವಟ್ಟುಗಳನ್ನು ವಿರೋಧಿಸಿ ಕರ್ನಾಟಕ ಕಾಂಗ್ರೆಸ್‌ ಪ್ರತಿಭಟನೆ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು ರೋಹಿತ್‌ ಚಕ್ರತೀರ್ಥ ಅವರನ್ನು ಪಿಯು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಕೈಬಿಟ್ಟಿರುವುದು ಬಿಜೆಪಿಗೆ ನಡುಕ ಹುಟ್ಟಿಸಿರುವುದನ್ನು ತೋರುತ್ತದೆ. ಆದರೂ ಇದು ತಡವಾದ ನಿರ್ಧಾರವಲ್ಲವೇ?" ಎಂದವರು ಪ್ರಶ್ನಿಸಿದ್ದಾರೆ.

"ಶಾಲೆಗಳು ಈಗಾಗಲೇ ಶುರುವಾಗಿವೆ. ಪಠ್ಯಪುಸ್ತಕಗಳಲ್ಲಿ ತಪ್ಪುಗಳು ಹೇರಳವಾಗಿ ಸಿಗುತ್ತಿವೆ. ರಾಜ್ಯ ಸರ್ಕಾರದ ಈ ವಿಳಂಬ ಧೋರಣೆಯಿಂದ ಮಕ್ಕಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಚಕ್ರತೀರ್ಥರನ್ನು ಸಮಿತಿಯಿಂದ ಕೈಬಿಟ್ಟರಷ್ಟೇ ಸಾಲದು. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯು ಅಂತಿಮಗೊಳಿಸಿದ್ದ ಪಠ್ಯಪುಸ್ತಕಗಳನ್ನು ಮುಂದುವರಿಸಬೇಕು." ಎಂದವರು ಒತ್ತಾಯಿಸಿದರು.
Advertisement
Advertisement
Recent Posts
Advertisement