Homepageರಾಜ್ಯಯಾರ್ಯಾರದ್ದೋ ಹಳೆಚಡ್ಡಿಗಳನ್ನು ಹೊತ್ತು ಮೆರವಣಿಗೆ ಮಾಡಿದ ಶಾಸಕ ನಾರಾಯಣ ಸ್ವಾಮಿಯವರೆ ಆರೆಸ್ಸೆಸ್‌ನ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯರು ನೆನಪಿರಲಿ: ಸಿದ್ದರಾಮಯ್ಯ ಯಾರ‌್ಯಾರದ್ದೋ ಹಳೆಚಡ್ಡಿಗಳನ್ನು ಹೊತ್ತು ಮೆರವಣಿಗೆ ಮಾಡಿದ ಶಾಸಕ ನಾರಾಯಣ ಸ್ವಾಮಿಯವರೆ ಆರೆಸ್ಸೆಸ್‌ನ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯರು ನೆನಪಿರಲಿ: ಸಿದ್ದರಾಮಯ್ಯ Advertisement "ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳು ಯಾಕೆ ಇಲ್ಲ" ಎನ್ನುವ ನನ್ನ ಪ್ರಶ್ನೆಗೆ ಆರೆಸ್ಸೆಸ್ ನವರು ಬಿಜೆಪಿ ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ. ಈ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ. ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.ಅವರು ಇಂದು #AryanRSS ಹ್ಯಾಶ್‌ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡುವ ಮೂಲಕ ಆರೆಸ್ಸೆಸ್ ನ ಅಸ್ಪೃಶ್ಯತಾ ಆಚರಣೆಯ ಕುರಿತು ವಿವರಿಸಿದ್ದಾರೆ.ಆರ್.ಎಸ್.ಎಸ್ ಗೆ ಬೆಂಬಲ ನೀಡಲು ಹಳೆ ಚಡ್ಡಿ ಹೊತ್ತು ಕೊಂಡು ಮೆರವಣಿಗೆ ಮಾಡಿದ ನಾರಾಯಣಸ್ವಾಮಿಯವರೇ, ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟಕ್ಕೆ ಸೀಮಿತ. ಆ ಸಂಘದ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯ ನೆನಪಿರಲಿ.ಯಾರ್ಯಾರದೋ ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು ಮನಸ್ಸಿಗೆ ನೋವಾಯಿತು.ನಿಮ್ಮನ್ನು "ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷತೆ" ಯಂತಹ ಸ್ಥಾನದಲ್ಲಿ ಕಾಣುವ ಆಸೆ ನನಗೆ ಎಂದವರು ಹೇಳಿದ್ದಾರೆ.ನಿಮ್ಮ ಪ್ರತಿಭಟನೆಯ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ ಮನಸ್ಥಿತಿಗೆ ನನ್ನ ಧಿಕ್ಕಾರ. ಸ್ವಾಭಿಮಾನವನ್ನು ಉಸಿರಾಗಿಸಿಕೊಂಡು ಬದುಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ನಿಮಗೆ ನಾನು ನೀಡುವ ಸಲಹೆ ಎಂದವರು ಕರೆ ನೀಡಿದ್ದಾರೆ. Show Full Article Advertisement Next Read: ಧ್ವೇಷ ಭಾಷಣ: ನೂಪೂರ್ ಶರ್ಮಾ, ನವೀನ್ ಜಿಂದಾಲ್ ಉಚ್ಚಾಟನೆ ಸಾಕೆ? ತೇಜಸ್ವಿ ಸೂರ್ಯ, ಅನಂತ್ ಹೆಗಡೆ, ಮೋದಿ- ಶಾ, ಸಾವರ್ಕರ್, ಹೆಡಗೇವಾರ್ ಗಳನ್ನು ಉಚ್ಚಾಟಿಸ ಬೇಡವೇ? » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ