Homepageರಾಜ್ಯಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಮತ್ತೊಂದು ದೇಶದ ಬಳಿ ಕ್ಷಮೆ ಯಾಚಿಸುವಂತಾಗಿದೆ: ಡಾ. ಎಚ್.ಸಿ ಮಹಾದೇವಪ್ಪ ಕಿಡಿ ಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಮತ್ತೊಂದು ದೇಶದ ಬಳಿ ಕ್ಷಮೆ ಯಾಚಿಸುವಂತಾಗಿದೆ: ಡಾ. ಎಚ್.ಸಿ ಮಹಾದೇವಪ್ಪ ಕಿಡಿ Advertisement "ಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಏಕೆ ಮತ್ತೊಂದು ದೇಶದ ಬಳಿ ಕ್ಷಮೆಯಾಚಿಸಬೇಕು? ಈ ಹಿಂದೆಯೂ ಕೂಡಾ ರಾಜತಾಂತ್ರಿಕ ರೀತಿ ನೀತಿಗಳನ್ನು ಅರಿಯದೇ ಪ್ರಧಾನಿ ಮೋದಿಯವರು ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರವನ್ನು ಬಹಿರಂಗವಾಗಿ ನಡೆಸಿದ್ದರು. ಯಾರಾದರೂ ಹಾಗೆ ಮಾಡುತ್ತಾರೆಯೇ" ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಕಿಡಿ ಕಾರಿದ್ದಾರೆ."ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ವಿವಾದಿತೆ ಹೇಳಿಕೆ ನೀಡಿ ವಿಶ್ವದ ಹಲವು ರಾಷ್ಟ್ರಗಳಿಂದ ವಿರೋಧಿಸಲ್ಪಟ್ಟಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದ ಹುದ್ದೆಯಿಂದ ಉಚ್ಛಾಟನೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ #ShameOnYouModi ಎಂದು ವೈದಿಕಶಾಹಿಗಳು ಘೋಷಣೆ ಕೂಗಿದ್ದು ಟ್ವಿಟರ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಟ್ರೆಂಡಿಂಗ್ ಮಾಡಿದ್ದು ನರೇಂದ್ರ ಮೋದಿಯೂ ಕೂಡಾ ತಮ್ಮ ವಿಕೃತಿಗೆ ಹೊರತಲ್ಲ ಎಂಬ ಸಂದೇಶವನ್ನು ಅವರು ಸಾರಿದರು" ಎಂದವರು ವಿಶ್ಲೇಶಿಸಿದ್ದಾರೆ."ಈ ರೀತಿಯ ನಡವಳಿಕೆಗಳು ಪ್ರಧಾನಿ ಮೋದಿ ಓರ್ವ ಪ್ರಧಾನಿಗಿಂತಲೂ ಯಾರದ್ದೋ ಸೂತ್ರದ ಗೊಂಬೆ ಎಂಬುದನ್ನು ಸಾಬೀತುಪಡಿಸಿವೆ. ಸಾಲದು ಎಂಬಂತೆ ಬಿಜೆಪಿಗರು ತಮ್ಮ ವಿಕೃತಿ ಮತ್ತು ದ್ವೇಷದ ಭಾವನೆಯನ್ನು ಅನಾವರಣಗೊಳಿಸಿ ಜಗತ್ತಿನ ಮಟ್ಟದಲ್ಲಿ ಭಾರತದ ಘನತೆ ಮತ್ತು ಗೌರವವನ್ನು ಕಳೆಯುವಂತಹ ಕೆಲಸ ಮಾಡಿದ್ದಾರೆ" ಎಂದವರು ಖೇದ ವ್ಯಕ್ತಪಡಿಸಿದ್ದಾರೆ. Show Full Article Advertisement Next Read: "ಅನ್ನಭಾಗ್ಯ"ದ ನೈಜ ಫಲಾನುಭವಿಗಳು ಯಾರು ಮತ್ತದನ್ನು "ಬಿಟ್ಟಿಭಾಗ್ಯ" ಎಂದು ವಾಟ್ಸ್ಯಾಪ್ ನಲ್ಲಿ ಅಪಪ್ರಚಾರ ಮಾಡುವವರು ಯಾರು ಗೊತ್ತೇ? » Advertisement Recent Posts ಮುಂದಿನ 10 ವರ್ಷ ಕಾಲ ಗ್ಯಾರಂಟಿ ಯೋಜನೆಗಳ ಮುಂದುವರಿಕೆ: ಡಿಕೆಶಿ ಸ್ಥಳೀಯ ಸಂಸ್ಥೆಗಳ ಕುಂದುಕೊರತೆಗಳ ಪರಿಹಾರ ನನ್ನ ಗುರಿ : ರಾಜು ಪೂಜಾರಿ MP ಸೀಟು ಕೊಡಿಸುವುದಾಗಿ 2 ಕೋಟಿ ರೂಪಾಯಿ ಪೀಕಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೋದರ-ಸೋದರಿ. (ಪ್ರಾತಿನಿಧಿಕ ಚಿತ್ರ) ಫೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ದ ಪ್ರಸಾದ್ ಕಾಂಚನ್ ದೂರು. ಸೈಟು ವಾಪಾಸು ನೀಡುವುದಾಗಿ ಸಿಎಂ ಪತ್ನಿಯಿಂದ ಮುಡಾಗೆ ಪತ್ರ! ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಬಿಜೆಪಿ ಪಿತೂರಿ- 1000ಕೋ. ರೂ ಸಂಗ್ರಹ: ಪೋಲೀಸ್ ದೂರು FIR ಆಗಿರುವ ಮೋದಿ ಸಂಪುಟದ 23 ಸಚಿವರು ರಾಜೀನಾಮೆ ನೀಡುವರೇ? ಇಡೀ ಪಕ್ಷ ಸಿದ್ದರಾಮಯ್ಯ ಬೆನ್ನಿಗಿದೆ: ಜಿ.ಸಿ ಚಂದ್ರಶೇಖರ್ ನಾಡಿನ ಶಾಂತಿ ಕದಡಿದ ಪ್ರಾಂಶುಪಾಲರಿಗೆ ಪ್ರಶಸ್ತಿ ನಿರಾಕರಣೆ ಸ್ವಾಗತಾರ್ಹ: ಕೊಡವೂರು ರಾಜ್ಯಪಾಲರ ಮೂಲಕ ಕೇಂದ್ರ ಪ್ರಾಯೋಜಿತ ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಲಿ! ಬಿಜೆಪಿಗರಿಂದ ಸಿದ್ಧರಾಮಯ್ಯರನ್ನು ಏನೂ ಮಾಡಲಾಗದು: ಗೀತಾ ವಾಗ್ಳೆ ರಾಜ್ಯಪಾಲರ ಕ್ರಮದ ವಿರುದ್ದ ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ! ಶಿರಾಡಿ ಗುಡ್ಡ ಕುಸಿತ; ಮುಖ್ಯಮಂತ್ರಿ ಭೇಟಿ- ಡಾ. ಕಕ್ಕಿಲ್ಲಾಯ ಬಹಿರಂಗ ಪತ್ರ. ಮರವಂತೆ ಜಾತ್ರೆ- ಬಡ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವಿರೇಕೆ?: ಡಾ. ಭಟ್ ನಿರ್ಮಲಾರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ