Advertisement

"ಅನ್ನಭಾಗ್ಯ"ದ ನೈಜ ಫಲಾನುಭವಿಗಳು ಯಾರು ಮತ್ತದನ್ನು "ಬಿಟ್ಟಿಭಾಗ್ಯ" ಎಂದು ವಾಟ್ಸ್ಯಾಪ್ ನಲ್ಲಿ ಅಪಪ್ರಚಾರ ಮಾಡುವವರು ಯಾರು ಗೊತ್ತೇ?

Advertisement
ಲೇಖನ : ಅನಾಮಿಕ/ ಚಿತ್ರಕೃಪೆ: ಗೂಗಲ್‌

"ಮಕ್ಕಳಿಲ್ಲದ ವಿದವೆಯರು, ಅಸಹಾಯಕ ವೃದ್ಧರು, ಅಂಗವಿಕಲರು, ಮಾರಣಾಂತಿಕ ಕಾಯಿಲೆ ಪೀಡಿತರು ಒಂದೊತ್ತಿನ ಅನ್ನಕ್ಕಾಗಿ ಇನ್ನೊಬ್ಬರ ಮುಂದೆ ಕೈಚಾಚು ವಂತಾಗಬಾರದು, ಇನ್ನೊಬ್ಬರ ಹಂಗಿಗೆ ಬೀಳುವಂತಾಗಬಾರದು, ಆ ಕಾರಣಕ್ಕಾಗಿ ಶೋಷಣೆಗೊಳಗಾಗಬಾರದು" ಎಂಬ ಪ್ರಾಮಾಣಿಕ ಕಾಳಜಿಯಿಂದ ಸಿದ್ದರಾಮಯ್ಯ ಸರ್ಕಾರ 2013ರಲ್ಲಿ ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಜಾರಿಗೊಳಿಸಿದ್ದ "ಅನ್ನಭಾಗ್ಯ" ಯೋಜನೆಯನ್ನು
"ಬಿಟ್ಟಿ ಭಾಗ್ಯ" ಎಂದು ಮೂದಲಿಸಿ ಲೇಖನ ಬರೆದು ವಾಟ್ಸ್ಯಾಪ್ ಗ್ರೂಪಿಗೆ ಹಾಕುವವರು ಮಠ, ಮಂದಿರಗಳಲ್ಲಿ ಕುಳಿತು, ನಾಲ್ಕೂ ಹೊತ್ತು ಹೊಟ್ಟೆ ಬಿರಿಯುವಂತೆ ಬಿಟ್ಟಿಯಾಗಿಯೇ ತಿನ್ನುವ, ಸಮಾನತೆಯ ವಿರೋಧಿಗಳಾದ ಮನುವಾದಿಗಳು ಮತ್ತವರ ಸಂತಾನಿಗಳು.

ಆದರೆ.. ಒಂದು ರೂಪಾಯಿಯನ್ನೂ ದುಡಿಯದೆ, ಅದೇ ಅನ್ನಭಾಗ್ಯದ ಅಸಹಾಯಕ ಫಲಾನುಭವಿ ಕುಟುಂಬಕ್ಕೆ ಹೊರೆಯಾಗಿ ಬದುಕುತ್ತಿರುವ ಕೆಲವು ಯುವಕ, ಯುವತಿಯರು ಮನೆಯಲ್ಲಿ ಕೂತು, ಅದೇ ಅಕ್ಕಿಯಲ್ಲಿ ಮಾಡಿದ ಅನ್ನವನ್ನು ಹೊಟ್ಟೆಬಿರಿಯುವಂತೆ ಉಂಡು, ತೇಗುತ್ತಾ ತಾವೇನೋ ಟಾಟಾ, ಬಿರ್ಲಾ ಕುಟುಂಬದಲ್ಲಿ ಜನಿಸಿದವರು ಎಂಬಂತೆ ಫೋಸು ಕೊಡುತ್ತಾ ಅದೇ "ಅನ್ನಭಾಗ್ಯ- ಬಿಟ್ಟಿಭಾಗ್ಯ" ಲೇಖನವನ್ನು ಬೇರೆಬೇರೆ ವಾಟ್ಸ್ಯಾಪ್ ಗ್ರೂಪುಗಳಿಗೆ ಫಾರ್ವರ್ಡ್ ಮಾಡಿ ಸಂಭ್ರಮಿಸುತ್ತಾರೆ… ಇದು ವಿಪರ್ಯಾಸ!
Advertisement
Advertisement
Recent Posts
Advertisement