Advertisement

ಹರ್ ಘರ್ ತಿರಂಗ: ಧ್ವಜಸಂಹಿತೆ ಉಲ್ಲಂಘನೆಯಾಗದಿರಲಿ: ವೆರೋನಿಕಾ

Advertisement

"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಪ್ರತಿ ಮನೆಗಳಲ್ಲಿ ತಿರಂಗ ಧ್ವಜ ಹಾರಿಸುವ ವಿಷಯದಲ್ಲಿ ಸರಕಾರ ಹಾಗೂ ಅಧಿಕಾರಿಗಳು ಎಚ್ಚರ ವಹಿಸಬೇಕಾಗಿದೆ" ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ ಕರೆ ನೀಡಿದ್ದಾರೆ.

"ಕಳೆದ 75 ವರ್ಷಗಳಿಂದ ರಾಷ್ಟ್ರಧ್ವಜಕ್ಕೆ ವಿಶೇಷವಾದ ಗೌರವ ನೀಡಿಕೊಂಡು ಬಂದಿರುವ ನಮಗೆ ಇದು ಕೇವಲ ತಿರಂಗ ಧ್ವಜ ಮಾತ್ರವಲ್ಲ ಇದರ ಹಿಂದೆ ಅನೇಕ ಸೈನಿಕರ ಬಲಿದಾನ ಇದೆ. ಅನೇಕ ಮಹಾನ್ ಚೇತನಗಳ ತ್ಯಾಗ ಹಾಗೂ ಬಲಿದಾನಗಳಿವೆ.
ಈಗಾಗಲೇ ಹಿಂದು ಸಂಘಟನೆಯ ನಾಯಕರಾದ ಪ್ರಮೋದ್ ಮುತಾಲಿಕ್ ರವರು ರಾಷ್ಟ್ರ ಧ್ವಜದ ಅನೇಕ ಅವಾಂತರಗಳ ಬಗ್ಗೆ ವೀಡಿಯೋ ಮಾಡಿ ಹರಿಯಬಿಟ್ಟಿದ್ದಾರೆ. ಈ ಧ್ವಜ ವನ್ನು ಆರೋಹಣ ಹಾಗೂ ಅವರೋಹಣ ಮಾಡುವಾಗ ಅನೇಕ ನಿಯಮಗಳಿವೆ. ಇದರ ಬಗ್ಗೆ ಜನತೆಗೆ ಯಾವುದೇ ಮಾಹಿತಿ ನೀಡದೆ ಭಾವುಟ ಹಾರಿಸಿದಾಗ ಮನೆಗಳಲ್ಲಿ ಅನೇಕ ಅವಾಂತರ ಗಳು ನಡೆಯಬಹುದು. ಈ ಬಗ್ಗೆ ಸರಿಯಾದ ಮಾಹಿತಿಯನ್ನು ಜನತೆಗೆ ನೀಡಬೇಕು ಹಾಗೂ ದ್ವಜದ ನಿಯಮವನ್ನು ಪಾಲಿಸುವಂತೆ ಸರಕಾರ ಎಚ್ಚರಿಕೆ ವಹಿಸಬೇಕು" ಎಂದವರು ವಿನಂತಿ ಮಾಡಿದ್ದಾರೆ.

"ಮನೆ ಮನೆಗಳಲ್ಲಿ ತಿರಂಗ ಎಂದು ಮನೆ ಮನೆಗಳಿಗೆ ರಾಷ್ಟ್ರ ಧ್ವಜ ಹಂಚಲಾಗುತ್ತಿದೆ.. ಆದರೆ ಧ್ವಜ ಸಂಹಿತೆಯ ಮಾಹಿತಿ ಎಷ್ಟು ಮಂದಿಗೆ ತಿಳಿದಿದೆ? ರಾಷ್ಟ್ರ ಧ್ಜಜವನ್ನು ಕೋಲಲ್ಲಿ ಸಿಕ್ಕಿಸಿ ಹಾರಾಡಿಸಲು ಅದು ರಾಜಕೀಯ ಪಕ್ಷಗಳ ಧ್ವಜ ಅಲ್ಲ ರಾಷ್ಟ್ರ ಧ್ವಜ ಎನ್ನುವುದು ನೆನಪಿರಬೇಕು. ಅದನ್ನು ಕಂಬ ನೆಟ್ಟು ಹಗ್ಗದ ಮೂಲಕ ಹಾರಾಡಿಸ ಬೇಕು ಇದು ಮನೆಯಲ್ಲಿ ಎಷ್ಟು ಸಾಧ್ಯ....?
ಅದಕ್ಕಿಂತಲು ಮುಖ್ಯವಾಗಿ ..ಹರ್ ಘರ್ ತಿರಂಗ ಎನ್ನುವುದಕ್ಕಿಂತ ಬದಲಾಗಿ , ಹರ್ ದಿಲ್ ತಿರಂಗ ಅನ್ನೋದು ಮುಖ್ಯ ಮನ ಮನಗಳಲ್ಲಿ ತ್ರಿವರ್ಣ ಧ್ವಜ ಅರಳಿದರೆ ಮನೆ ಮನೆಯಲ್ಲಿ ಅರಳುತ್ತದೆ.. ಇಲ್ಲವಾದರೆ ಗಂಟೆ ಬಡಿಯಿರಿ, ದೀಪ ನಂದಿಸಿ ಎಂಬ ಹೇಳಿಕೆಯಷ್ಟೆ ಮಹತ್ವ ತ್ರಿವರ್ಣ ಧ್ವಜ ಹಾರಿಸಿ ಎಂಬ ಹೇಳಿಕೆಗೆ ಸಿಗುತ್ತದೆ" ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement