Advertisement

ತನ್ನದೇ ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೊಳಗಾಗಿ ಅಡಗಿ ಕುಳಿತಿದ್ದ ಸುನೀಲ್ ಕುಮಾರ್ ಗೆ "ಕಾಂಗ್ರೆಸ್ ಪಕ್ಷದ ವೀರ ಪರಂಪರೆ" ಅರ್ಥವಾಗದು: ಉಡುಪಿ ಜಿಲ್ಲಾ ಕಾಂಗ್ರೆಸ್

Advertisement

"ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದ ಪ್ರಜಾತಂತ್ರ ವಿರೋಧಿ ಮನಸ್ಥಿತಿಯ ಬಿಜೆಪಿಗೆ ಸ್ವಾತಂತ್ರ ದಿನದ ಅಮೃತೋತ್ಸವ ಆಚರಿಸುವ ನೈತಿಕತೆ ಇಲ್ಲ. ನಾಗಪುರದ ತಮ್ಮ ಕಛೇರಿಯ ಮೇಲೆ ರಾಷ್ಟ್ರ ಧ್ವಜ ಹಾರಿಸಿದವರ ವಿರುದ್ಧ ಪ್ರಕರಣ ದಾಖಲಿಸಿದವರಿಂದ ಅಮೃತೋತ್ಸವದ ಹೆಸರಲ್ಲಿ ಮನೆಮನೆ ಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಹೇಳುವ ಹಕ್ಕೂ ಇಲ್ಲ" ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

"ಕಾಂಗ್ರೆಸ್ ಆಡಳಿತಾವದಿಯಲ್ಲಿ ನಡೆದ ಯುದ್ಧಗಳಲ್ಲಿ ಚೀನಾದೊಂದಿಗೆ ನಡೆದ ಅಕಸ್ಮಿಕ ಯುದ್ಧದಲ್ಲಿ ಸೋಲಾಗಿತ್ತೇ ಹೊರತು ಮತ್ತೆಲ್ಲ ಯುದ್ಧಗಳಲ್ಲಿ ಭಾರತ ಜಯಶಾಲಿಯಾಗಿತ್ತು. ಶತ್ರು ರಾಷ್ಟ್ರ ಪಾಕಿಸ್ಥಾನವನ್ನು ಒಡೆದು ಬಾಂಗ್ಲಾ ದೇಶದಂತಹ ಹೊಸ ರಾಷ್ಟ್ರ ವೊಂದರ ಉದಯಕ್ಕೆ ಕಾರಣವಾಗಿ ವಿಶ್ವ ದಾಖಲೆಯನ್ನು ಮಾಡಿದ ಕಾಂಗ್ರೆಸ್ ಪಕ್ಷದ ವೀರ ಪರಂಪರೆ ಬಹುಶಃ ಇತ್ತೀಚೆಗೆ ತನ್ನ ಕಾರ್ಯಕರ್ತರಿಂದಲೇ ಛೀಮಾರಿಗೊಳಗಾಗಿ ಪೊಲೀಸ್ ರಕ್ಷಣೆಯ ಮೊರೆಹೋಗಿ ಪಾರಾದ ಸಚಿವ ಸುನೀಲ್ ಕುಮಾರ್ ರಂತವರಿಗೆ ಅರ್ಥ ಆಗಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ಹೇಳಿದೆ.

"ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವಧಿಯಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಸಂಹಿತೆ ಮತ್ತು ಸಂವಿಧಾನದತ್ತ ಕಾನೂನು ನಿಯಮಾವಳಿಗಳಿಗೆ ವಿರುದ್ಧವಾಗಿ ಧ್ವಜಾರೋಹಣ ಗೈಯುವ ಮೂಲಕ ಕಿಡಿಗೇಡಿಗಳಿಂದ ರಾಷ್ಟ್ರ ಧ್ವಜಕ್ಕೆ ಆಗುವ ಅವಮಾನ ತಪ್ಪಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಮನುವಾದದ ಗುಂಗಿನಲ್ಲಿರುವ ಬಿಜೆಪಿಯವರಿಗೆ ಈ ಸತ್ಯ ಅಪರಾದವಾಗಿ ಕಾಣುವುದರಲ್ಲಿ ವಿಶೇಷವಿಲ್ಲ. ಕೊಟ್ಟ ಕುದುರೆಯನ್ನು ಏರಲಾಗದೆ ‌ ಶೂರನೂ ಆಗದೆ ವೀರನೂ ಆಗದೆ ರಾಜ್ಯವನ್ನೆ ಕತ್ತಲೆಯಲ್ಲಿ ಇರಿಸಿರುವ ಇಂಧನ ಸಚಿವ ಸುನೀಲ್ ಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಯವರನ್ನು ಠೀಕಿಸುವ ಮೊದಲು ತಾನು ತನ್ನ ಕರ್ತವ್ಯ ನಿಭಾಯಿಸುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು" ಎಂದು ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ‌.

Advertisement
Advertisement
Recent Posts
Advertisement