2008 -09 ರ ವೇಳೆಗೆ ಆರ್ಥಿಕ ಹಿಂಜರಿತದ ಪರಿಣಾಮವಾಗಿ ವಿಶ್ವದ ಅತ್ಯಂತ ಮುಂದುವರಿದ ದೇಶಗಳ ಬ್ಯಾಂಕುಗಳೇ ದಿವಾಳಿಯೆದ್ದು ಮುಚ್ಚುಗಡೆ ಆದಾಗಲೂ ಭಾರತದ ಜನಜೀವನದ ಮೇಲೆ ಆ ಆರ್ಥಿಕ ಹಿಂಜರಿತದ ಕೆಟ್ಟ ಪರಿಣಾಮ ಆಗದಿರಲು ಭಾರತದ ಅಂದಿನ ಪ್ರಧಾನಿಯಾಗಿದ್ದ ವಿಶ್ವವಿಖ್ಯಾತ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ರವರ ಆರ್ಥಿಕ ನೀತಿಯೇ ಕಾರಣವಾಗಿತ್ತು ಎನ್ನುವುದು ಅಮೇರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಓಬಾಮಾ ರವರು ಆ ನಂತರದ ದಿನಗಳಲ್ಲಿ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಹೇಳಿರುವುದು ಇತಿಹಾಸದಲ್ಲಿ ದಾಖಲಾಗಿ ಉಳಿದ ಒಂದು ಸತ್ಯವಾಗಿದೆ.
ಆದರೆ ಇದೀಗ, ನರೇಂದ್ರ ಮೋದಿಯವರ ಸರ್ಕಾರ ಯಾವುದೇ ಪೂರ್ವತಯಾರಿ ಇಲ್ಲದೆ ಮಾಡಿದ ನೋಟು ಬ್ಯಾನ್ ಮತ್ತು ಯಾವುದೇ ಮುನ್ಸೂಚನೆ ನೀಡದೆ ಮಾಡಿದ ಲಾಕ್‌ಡೌನ್ ನಿಂದಾಗಿ ದೇಶದ ಆರ್ಥಿಕತೆಯು ಅತ್ಯಂತ ಹೀನಾಯ ಸ್ಥಿತಿ ತಲುಪಿದೆ. ಈ ಸಂಧರ್ಭದಲ್ಲಿ ಈ ದೇಶವನ್ನು ಐ.ಟಿ, ಇ.ಡಿ, ಸಿಬಿಐಗಳ ಮೂಲಕ ಆಳಲಾಗುತ್ತಿದೆ ಎಂದು ಜನಸಾಮಾನ್ಯರು ಹಾದಿ ಬೀದಿಯಲ್ಲಿ ಹೇಳುತ್ತಿರುವುದನ್ನು ನಾವು ನೀವೆಲ್ಲರೂ ಕೇಳಿರುತ್ತೇವೆ.
ಈ ನಡುವೆ ಬಿಜೆಪಿಯು, ಚುನಾವಣಾ ಫಲಿತಾಂಶದ ಮೂಲಕ ದೊರೆತ ಜನಾದೇಶವನ್ನು ದಿಕ್ಕರಿಸಿ ದೇಶದಾದ್ಯಂತ "ಅಪರೇಷನ್ ಕಮಲ" ಮೂಲಕ ಸರ್ಕಾರ ರಚಿಸುತ್ತಿದೆ. ಅಪರೇಷನ್ ಕಮಲಕ್ಕೆ ಆರ್ಥಿಕ ಸಹಾಯ ಒದಗಿಸಿದ ಉದ್ಯಮಿ ಮಿತ್ರರುಗಳಿಗೆ ಲಕ್ಷಾಂತರ ಕೋಟಿ ಮೌಲ್ಯದ ದೇಶದ ಸಾರ್ವಜನಿಕ ಆಸ್ತಿಗಳನ್ನು ಮೂರು ಕಾಸಿಗೆ ಮಾರಾಟ ಮಾಡುತ್ತಿದೆ. ಇವರ ನಡೆಗೆ ವಿರುದ್ಧವಾಗಿ ಮಾತನಾಡಿದ ಜನಪರ ಚಿಂತಕರ ವಿರುದ್ಧ ಸುಳ್ಳು ಆರೋಪಗಳ "ಫೈಲು" ಸಿದ್ದಗೊಳ್ಳುತ್ತದೆ. ಆ ಫೈಲನ್ನು ಟೇಬಲ್ ಮೇಲಿಟ್ಟುಕೊಂಡು ಅದೇ ಐ.ಟಿ, ಅದೇ ಇಡಿ, ಅದೇ ಸಿಬಿಐ ಇದೀಗ ಯುಎಪಿಎ ಕಾಯ್ದೆಗಳ ಮೂಲಕ ವಿರೋಧಿಗಳ ಮೇಲೆ ಹಿಡಿತ ಸಾಧಿಸಲಾಗುತ್ತಿದೆ. ನಿಜಕ್ಕೂ ಹೇಳಬೇಕೆಂದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆಯೇ ಆಗಿದೆ.
ಅದರ ದುಷ್ಪರಿಣಾಮದಿಂದಾಗಿ ತಮ್ಮ ಸಂಪತ್ತನ್ನು ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ನಡುವೆ ಹಲವು ವಿರೋಧ ಪಕ್ಷಗಳ ನಾಯಕರುಗಳು, ಸಿನೇಮಾ ನಟರುಗಳು, ಉಧ್ಯಮಿಗಳು ಮೋದಿ ಭಜನೆಯಲ್ಲಿ ಮತ್ತು ಗಾಂಧಿ, ನೆಹರೂವಿನಿಂದ ಹಿಡಿದು ಮನಮೋಹನ್ ಸಿಂಗ್ ತನಕದ ಈ ದೇಶದ ಅಭ್ಯುದಯಕ್ಕಾಗಿ ದುಡಿದ ನಾಯಕರುಗಳ ಅವಹೇಳನದಲ್ಲಿ ತೊಡಗಿದ್ದಾರೆ. ಅದಕ್ಕೆ ಇತ್ತೀಚೆಗಿನ ತಾಜಾ ಉದಾಹರಣೆ ಎಂದರೆ ಇನ್ಫೋಸಿಸ್ ನ ನಾರಾಯಣ ಮೂರ್ತಿಯವರ ಮನಮೋಹನ್ ಸಿಂಗ್‌ರವರ ಆರ್ಥಿಕ ನೀತಿಯ ಕುರಿತಾದ ಅವಹೇಳನಕಾರಿ ಹೇಳಿಕೆ ಆಗಿದೆ.
ನಿಜ, ಮನಮೋಹನ್ ಸಿಂಗ್ ಮೌನವಾಗಿ ಕೆಲಸ ಮಾಡುತ್ತಿದ್ದರು. ಆದರೆ ಆ ಮೌನದಲ್ಲೂ ವಿಶೇಷತೆ ಇತ್ತು! ಆ ಕುರಿತು ಖ್ಯಾತ ಲೇಖಕರು, ಸಾಮಾಜಿಕ ಕಾಳಜಿಯ ಅಂಕಣಕಾರರು ಹಾಗೂ ಜನಪರ ಚಿಂತಕರು ಆದ ಡಾ| ಜೆ.ಎಸ್ ಪಾಟೀಲ ರ ಒಂದು ಹಳೆಯ ಬರಹ "ಕನ್ನಡ ಮೀಡಿಯಾ ಡಾಟ್ ಕಾಂ" ನ ಓದುಗರ ಮರುಓದಿಗಾಗಿ.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು 2004 ರಲ್ಲಿ ಆಡಳಿತ ಚುಕ್ಕಾಣಿ ಹಿಡಿದಾಗ ಸೆನ್ಸೆಕ್ಸ್ 8000 ರಷ್ಟಿತ್ತು. ಅವರು 2014 ರಲ್ಲಿ ಪದ ತ್ಯಜಿಸುವಾಗ ಅದು 24000 ಕ್ಕೆ ಮುಟ್ಟಿತ್ತು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಅಧಿಕಾರ ಆರಂಭಿಸಿದಾಗ ದೇಶದ ಕೆಲವು ಆಯ್ದ ಜನರ ಕೈಯಲ್ಲಿ ಮಾತ್ರ Nokia 3100 ಮೊಬೈಲ್ ಫೋನ್ ಇರುತ್ತಿತ್ತು. ಆದರೆ ಅವರು ಅಧಿಕಾರದಿಂದ ಇಳಿಯುವಾಗ ದೇಶದ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ರಾರಾಜಿಸುತ್ತಿದ್ದವು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು ಮತ್ತು ಅವರು ಸ್ವತಃ ಮೌನಿಯಾಗಿದ್ದರು. ಆದರೆ ಅವರು ಜಾರಿಗೆ ತಂದ ಜಗತ್ತಿನಲ್ಲೇ ಬಹು ದೊಡ್ಡ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳ ಹಳ್ಳಿಗಳು ಮಾತನಾಡಲಾರಂಭಿಸಿದವು ಮತ್ತು ಹಳ್ಳಿಗರು ಸುಖದಿಂದ ಬದುಕು ಕಟ್ಟಿಕೊಂಡಿದ್ದರು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಸ್ವತಃ ಕಡಿಮೆ ಮಾತನಾಡುತ್ತಿದ್ದರು ಆದರೆ ಜನರ ಮಾತಿಗೆ ಮೌಲ್ಯ ಬರಲು "ಮಾಹಿತಿ ಹಕ್ಕು ಕಾಯ್ದೆ" ಜಾರಿಗೆ ತಂದಿದ್ದರು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಮೌನವಾಗಿ ಕಾಯಕ ಮಾಡುತ್ತ ಭಾರತವನ್ನು ತಿಂಗಳ ಮತ್ತು ಮಂಗಳನ ವರೆಗೆ ತಲುಪಿಸುವ ಶಕ್ತಿಶಾಲಿ ದೇಶವಾಗಿ ರೂಪಿಸಿದರು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಅಧುನಿಕ ಭಾರತ ನಿರ್ಮಾಣಕ್ಕಾಗಿ ಐಐಟಿˌ ಏಮ್ಸ್ ˌ ಅಧುನಿಕ ವಿಮಾನ ನಿಲ್ದಾಣಗಳುˌ ಮೆಟ್ರೊˌ ಮುಂತಾದ ಅಭಿವ್ರದ್ಧಿ ಕಾರ್ಯಗಳು ಮಾಡಿದ್ದರು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಸ್ವತಃ ಕಡಿಮೆ ಮಾತನಾಡುತ್ತಿದ್ದರು ಆದರೆ ಅವರ ವಿಕಾಸದ ಕೆಲಸಗಳು ಹೆಚ್ಚು ಮಾತನಾಡುತ್ತವೆ.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಮೌನವಾಗಿ ಕೆಲಸ ಮಾಡುತ್ತಲೆ ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಸಿದ್ದರು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಹಲವು ವರ್ಷಗಳ ಮುಂಚೆಯೇ ದೇಶದ ವಿಕಾಸಕ್ಕೆ ಎಫ್ಡಿಐ, ಭೂಮಿ ಅಧಿಗ್ರಹಣ, ಜಿಎಸ್ಟಿ, ಇವುಗಳ ಅವಶ್ಯಕತೆ ಇದೆ ಎಂದು ಹೇಳಿದ್ದರು. ಆದರೆ ದೇಶದ ಅಭಿವ್ರದ್ಧಿಯನ್ನು ತಡೆಯಲು ಅಂದು ಬಿಜೆಪಿಯೇ ಈ ಕಾನೂನುಗಳನ್ನು ವಿರೋಧಿಸಿತ್ತು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಇಡೀ ಜಗತ್ತು ಆರ್ಥಿಕ ಕುಸಿತಕ್ಕೆ ತುತ್ತಾಗಿದ್ದಾಗ ತಮ್ಮ ಕೌಶಲ್ಯ, ಹಾಗು ಬುದ್ಧಿವಂತಿಕೆಯಿಂದ ಭಾರತದ ಆರ್ಥಿಕತೆ ಕುಸಿಯದಂತೆ ತಡೆದಿದ್ದರು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು
ಅವರು ಭಾರತವನ್ನು ಪೋಲಿಯೊ ಮುಕ್ತ ಮಾಡಿದ್ದರು ಮತ್ತು ಅನೇಕ ಮಾರಣಾಂತಿಕ ರೋಗಗಳ ಚಿಕಿತ್ಸಾ ವೆಚ್ಚವನ್ನು ಒಂದು ಲಕ್ಷದಿಂದ ಕೆಲವು ಸಾವಿರ ರೂಪಾಯಿಗೆ ತಗ್ಗಿಸಿದ್ದರು.
•ನಿಜ, ಆ ಮೌನದಲ್ಲೂ ವಿಶೇಷತೆ ಇತ್ತು ಜಗತ್ತಿನ ಅತ್ಯಂತ ದಕ್ಷ, ಪಾರದರ್ಶಕ, ನಿಷ್ಟಾವಂತ, ಪ್ರಧಾನಿಯಾಗಿ ಕಾರ್ಯ ಮಾಡಿದ ಸರದಾರ ಡಾ. ಮನಮೋಹನ್ ಸಿಂಗ್ ಅವರು ಸ್ವತಃ ಕಡಿಮೆ ಮಾತನಾಡುತ್ತಿದ್ದರೆ ಅವರು ಮಾಡಿದ ಅಸಂಖ್ಯಾತ ಜನಪರ ಕೆಲಸಗಳೇ ಸ್ವತಃ ಇಂದಿಗೂ ದೇಶದಾದ್ಯಂತ ಮಾತನಾಡುತ್ತಿವೆ.