"ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಬಿಜೆಪಿಯ ಬಿ ಟೀಂ ಎಂಬ ಆರೋಪ ನೂರಕ್ಕೆ ನೂರು ಸತ್ಯ" ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆ ಇದೀಗ ವೈರಲ್ ಆಗಿದೆ.
ಇದು ಕಳೆದ ಜುಲೈ ತಿಂಗಳಲ್ಲಿ ವಿಜಯಪುರದಲ್ಲಿ ನೀಡಿರುವ ಹೇಳಿಕೆಯಾಗಿದ್ದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಅಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುತಾಲಿಕ್ ರವರು, "ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಆಗಿರುವ ಮುಸ್ಲಿಮರನ್ನು ಎಸ್‌ಡಿಪಿಐ, ಪಿಎಫ್‌ಐ ವ್ಯವಸ್ಥಿತವಾಗಿ ಒಡೆಯುತ್ತಿದೆ. ಇದರಿಂದ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗುತ್ತಿದೆ. ಬಿಜೆಪಿಗೆ ಬೇಕಿರುವುದು ಅದುವೇ ಹೊರತೂ ದೇಶದ ಸುರಕ್ಷತೆ ಅಥವಾ ಹಿಂದೂಗಳ ಸುರಕ್ಷತೆ ಬಿಜೆಪಿಗೆ ಬೇಕಾಗಿಲ್ಲ. ಅಧಿಕಾರಕ್ಕೆ ಬಂದು ಮೆರೆಯಬೇಕು ಎಂಬುವುದು ಮಾತ್ರವೇ ಬಿಜೆಪಿಯ ಅಜೆಂಡವಾಗಿದೆ. ಹೀಗಾಗಿ ಈ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಲು ಮುಂದಾಗುತ್ತಿಲ್ಲ" ಎಂದು ಆರೋಪಿಸಿದ್ದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಬಯಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮುತಾಲಿಕ್ ರವರು, "ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿಯಲ್ಲಿ ನಮ್ಮಂತ ಹಿಂದೂ ಪರ ಮುಖಂಡರು, ಕಾರ್ಯಕರ್ತರಿಗೆ ಅವಕಾಶ ಇಲ್ಲ. ಆ ಪಕ್ಷದಲ್ಲಿ ಭ್ರಷ್ಟರು, ಲೂಟಿಕೋರರು, ಲಫಂಗರಿಗೆ ಮಾತ್ರ ಅವಕಾಶ ಇದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
"ಹಿಂದುಗಳಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿ ಇರುವ ಆರೋಪಿಗಳು ತಮ್ಮ ಹೆಂಡತಿ, ಮಕ್ಕಳೊಂದಿಗೆ ಫೋನ್‌ನಲ್ಲಿ ಆನಂದವಾಗಿ ಮಾತನಾಡುತ್ತಾರೆ ಎಂದಾದರೆ ಜೈಲುಗಳೆಂದರೆ ಲಾಡ್ಜಿಂಗ್, ಬೋರ್ಡಿಂಗಾ? ಎಂದವರು ಪ‍್ರಶ್ನಿಸಿದ್ದರು.
(ಪ್ರಜಾವಾಣಿಯ ಸ್ಕ್ರೀನ್‌ಶಾಟ್)
ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಮೇಲಿನ ವರದಿಯ ವಿವರಗಳ ಓದುವಿಕೆಗಾಗಿ:
https://www.prajavani.net/amp/karnataka-news/sdpi-pfi-bjps-b-team-alleges-pramod-muthalik-956602.html