Advertisement

ಕರ್ನಾಟಕದ ಬೊಮ್ಮಾಯಿ ಸರ್ಕಾರದ ಪೊಲೀಸರಿಂದ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಸಹಿತ ಹಲವರ ಬಂಧನ

Advertisement

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ರವರ ನೇತೃತ್ವದಲ್ಲಿ ಇಂದು ಬೆಲೆ ಏರಿಕೆ ಹಾಗೂ ಶಾಸಕ ಅರವಿಂದ ಲಿಂಬಾವಳಿಯವರ ಮಹಿಳೆಯೊಂದಿಗಿನ ಅಸಭ್ಯ ನಡವಳಿಕೆ ವಿರುದ್ದ ಬೃಹತ್ ಪ್ರತಿಭಟನೆ ನಡೆಯಿತು.

ಈ ಸಂಧರ್ಭದಲ್ಲಿ ಕರ್ನಾಟಕದ ಬೊಮ್ಮಾಯಿ ಸರ್ಕಾರದ ಪೊಲೀಸರು ಪುಷ್ಪಾ ಅಮರನಾಥ್ ಸೇರಿದಂತೆ ಹಲವಾರು ಮಹಿಳಾ ಪ್ರತಿಭಟನಾಕಾರರನ್ನು ಬಂಧಿಸಿ ಹೈಗ್ರೌಂಡ್ಸ್ ಪೋಲಿಸ್ ಠಾಣೆಗೆ ಕರೆದೊಯ್ದರು.

ಈ ಸಂಧರ್ಭದಲ್ಲಿ "ಮಹಿಳೆಯ ಮೇಲಿನ ದೌರ್ಜನ್ಯ ಹಾಗೂ ಅವಾಚ್ಯ ಶಬ್ದ ಬಳಸಿ ಹೀಯಾಳಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಈಗಿಂದಿಗಲೇ ಸಂತ್ರಸ್ಥ ಮಹಿಳೆಯ ಬಳಿ ಕ್ಷಮೆ ಕೇಳಬೇಕು ಮತ್ತು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ, ಪ್ರತಿಕೃತಿಯನ್ನು ದಹಿಸಲಾಯಿತು.

"ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಗೌರವ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಬಾರಿಯೂ ತಮ್ಮ ಭಾಷಣಗಳಲ್ಲಿ ಸುಳ್ಳನ್ನು ನುಡಿಯುತ್ತಲೇ ಇರುತ್ತಾರೆ. ಆದರೆ, ಬಿಜೆಪಿ ಶಾಸಕರುಗಳು ಹಾಗೂ ನಾಯಕರುಗಳು ಕರ್ನಾಟಕದಲ್ಲಿ ಮಹಿಳೆಯರಿಗೆ ಯಾವ ರೀತಿಯಲ್ಲಿ ಗೌರವ ನೀಡುತ್ತಿದ್ದಾರೆ ಎಂಬುದನ್ನು ಮೊದಲು ಮಾಹಿತಿಯನ್ನು ಪಡೆದು ಪ್ರಧಾನ ಮಂತ್ರಿ ಮೋದಿರವರು ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿ ಇಲ್ಲದೆ ಹೋದರೆ ಮೋದಿ ಸರ್ಕಾರ ಮಹಿಳಾ ವಿರೋಧಿ ಸರ್ಕಾರ ಎಂಬುದು ಸಾಬೀತಾದಂತಾಗುತ್ತದೆ" ಎಂದು ಈ ಸಂಧರ್ಭದಲ್ಲಿ ಪುಷ್ಪಾ ಅಮರನಾಥ್ ಹೇಳಿದ್ದಾರೆ.

"ಅರವಿಂದ್ ಲಿಂಬಾವಳಿ ಓರ್ವ ಜನಪ್ರತಿನಿಧಿ ಎಂಬ ನೆಲೆಯಲ್ಲಿ ಅವರ ಬಳಿ ಸಂತ್ರಸ್ತ ಮಹಿಳೆ ಸಂಕಷ್ಟವನ್ನು ಹೇಳಿಕೊಂಡು ಪರಿಹಾರ ಯಾಚಿಸಿ ಬಂದರೆ ಆಕೆಯ ವಿರುದ್ಧವೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಗೆ ಬೆದರಿಕೆಯನ್ನು ಹಾಕಿರುವುದು ಅಕ್ಷಮ್ಯ. ಇದು ಭೇಟಿ ಬಚಾವೋನಾ ಅಥವಾ ಭೇಟಿ ಡರಾವೋನಾ ಇವರಂತಹ ಜನಪ್ರತಿನಿಧಿಗಳು ರಾಜ್ಯಕ್ಕೆ ಬೇಕೆ? ಕೂಡಲೇ ಶಾಸಕ ಲಿಂಬಾವಳಿ ಮಾಧ್ಯಮಗಳ ಮುಂದೆ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಇಂತಹ ಅನಾಗರಿಕತೆಯಿಂದ ವರ್ತಿಸಿರುವ ಬಿಜೆಪಿ ಶಾಸಕನನ್ನು ಬಿಜೆಪಿ ಕೂಡಲೇ ಅವರನ್ನು ವಜಾ ಮಾಡಬೇಕು" ಎಂದವರು ಆಗ್ರಹಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ದಕ್ಷಿಣ ಬೆಂಗಳೂರು ಜಿಲ್ಲಾಧ್ಯಕ್ಷೆ ಜೈ ಶ್ರೀ, ರಾಜ್ಯ ಪದಾಧಿಕಾರಿಗಳಾದ ಸುಮತಿ, ರಾಧಾ, ಆಸ್ಮಾ, ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು ಹಾಗೂ ವಾರ್ಡ್ ಅಧ್ಯಕ್ಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement
Advertisement
Recent Posts
Advertisement