Advertisement

ಬಿಜೆಪಿ ನಾಯಕರೆಲ್ಲ ಒಟ್ಟಾಗಿ ಬಂದರೂ ಚಿತ್ತಾಪುರ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

Advertisement

"ಬಿಜೆಪಿ ನಾಯಕರೆಲ್ಲ ಒಟ್ಟಾಗಿ ಬಂದರೂ ಚಿತ್ತಾಪುರ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ ಅವರು ಚಿತ್ತಾಪುರಕ್ಕೆ ಬಂದು ನನ್ನ ಬಳಿ ಕ್ಷಮೆ ಕೇಳಿಸಬೇಕು ಎಂದು ಮೆರವಣಿಗೆ ಮಾಡಿದರು ಆದರೆ ಅವರು ವಿಧಾನಸೌಧದಲ್ಲಿ ಏನು ಮಾಡಿದ್ದರು ಎಂಬುವುದನ್ನು ಒಮ್ಮೆ ಮನವರಿಕೆ ಮಾಡಿಕೊಳ್ಳಲಿ.ಅವರೇ ಸ್ವತಃ ಚುನಾವಣೆಯಲ್ಲಿ ಸೋತು ಇಂದು ಚುನಾವಣೆ ಹೇಗೆ ಗೆಲ್ಲಬೇಕು ಎಂದು ಪಾಠ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ" ಎಂದು ಕೆಪಿಸಿಸಿ ಐಟಿ ಸೆಲ್ ಅಧ್ಯಕ್ಷ, ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆಯವರು ಹೇಳಿದ್ದಾರೆ.

ಪ್ರಿಯಾಂಕ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಪತ್ರಿಕಾ ಗೋಷ್ಠಿಯ ವಿವರಗಳು ಇಂತಿವೆ:

➤ಬಾಬುರಾವ್ ಚಿಂಚನಸೂರು ಅವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ ಉಳಿದ 1.5 ವರ್ಷಕ್ಕೆ ಎಲ್ಲಾ ಬಿಜೆಪಿ ನಾಯಕರನ್ನು ಕರೆಸಿಕೊಂಡು ಮೆರವಣಿಗೆ ಮಾಡಿಸಿಕೊಂಡಿರುವ ಏಕೈಕ ವ್ಯಕ್ತಿ !

➤ಬಿಜೆಪಿಗರಿಗೆ ಕೋಲಿ ಸಮಾಜದ ಮೇಲೆ ಗೌರವ ಇದ್ದಿದ್ದರೆ ಚಿಂಚನಸೂರು ಅವರನ್ನು ಮೊದಲೇ MLC ಮಾಡಬೇಕಿತ್ತು ಏಕೆ ಮಾಡಲಿಲ್ಲ?

➤ಬಾಬು ರಾವ್ ಚಿಂಚನಸೂರ್ ಅವರು ಮೊದಲು ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳಬೇಕು ಮತ್ತು ನನಗೆ ಧನ್ಯವಾದ ಹೇಳಬೇಕು ನಾನು ಕ್ಷೇತ್ರದಲ್ಲಿ ಸಕ್ರಿಯವಾಗಿರಲಿಲ್ಲ ಎಂದರೆ ಇವರಿಗೆ ಯಾವ MLC ಹುದ್ದೆಯು ಸಿಗುತ್ತಿರಲಿಲ್ಲ.

➤ನಾನು ಸರ್ಕಾರದ ಭ್ರಷ್ಟಾಚಾರ, PSI ಹಗರಣ, KPTCL ನೇಮಕಾತಿ‌ ಹಗರಣ ಬಗ್ಗೆ ಮಾತನಾಡಿದ್ದಕ್ಕೆ ಇಂದು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ, IAS, IPS, KPTCL ಅಧಿಕಾರಿಗಳು ಸಸ್ಪೆಂಡ್ ಆಗಿರುವುದು ನಮ್ಮ ಹೋರಾಟದಿಂದಾಗಿ.

ಹಾಗಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಬೇಕು ಎಂದು ಈ ಬಿಜೆಪಿಗರು ಟಾರ್ಗೆಟ್ ಮಾಡುತ್ತಿದ್ದಾರೆ.
ನಾನು ಏನು ಎನ್ನುವುದು ಚಿತ್ತಾಪುರ ಜನತೆಗೆ ಗೊತ್ತಿದೆ ಚಿತ್ತಾಪುರದ ಜನರ ಆಶೀರ್ವಾದ ಇರುವರೆಗು ಏನು ಮಾಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಅವರು ಹೇಳಿದ್ದಾರೆ.

Advertisement
Advertisement
Recent Posts
Advertisement