Advertisement

23 ತಿಂಗಳ ಸೆರೆವಾಸದ ಬಳಿಕ ಪತ್ರಕರ್ತ ಸಿದ್ದಿಕಿ ಕಪ್ಪನ್ ಗೆ ಶರತ್ತಿನ ಜಾಮೀನು! ಯುಪಿ ಸರ್ಕಾರದ ಪ್ರಕಾರ ಕಪ್ಪನ್ ಮಾಡಿರುವ ಅಪರಾಧವೇನು?

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಲೇಖಕರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಹತ್ರಾಸ್ ನಲ್ಲಿ ಸರ್ಕಾರ ಮಾಡಿದ ಅನ್ಯಾಯವನ್ನು ವಿವರಿಸುವ ಸಾಹಿತ್ಯ ಹೊಂದಿದ್ದೆ ಭಯೋತ್ಪಾದನೆ ಎಂದು ವಾದ ಮಾಡಿದ ಸರ್ಕಾರ!!

ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರಿಗೆ 23 ತಿಂಗಳು ಜೈಲು ವಾಸದ ನಂತರ ಸುಪ್ರೀಂ ಕೋರ್ಟು ಷರತ್ತಿನ ಜಾಮೀನು ನೀಡಿದೆ.

ಆರು ವಾರಗಳ ಕಾಲ ದೆಹಲಿಯಲ್ಲೇ ಇದ್ದು ಠಾಣೆಗೆ ಪ್ರತೀವಾರ ಹಾಜರಾತಿ ಹಾಕಿದ ನಂತರ ಕೇರಳಕ್ಕೆ ತೆರಳಲು ಅನುಮತಿ ನೀಡಿದೆ.

ಅಂದ ಹಾಗೆ,

ಸುಪ್ರೀಂ ಕೋರ್ಟಿನಲ್ಲಿ ಜಾಮೀನು ನಿರಾಕರಿಸಲು ಸರ್ಕಾರ ಮುಂದಿಟ್ಟ ವಾದಗಳು ಹೀಗಿವೆ:

- ಕಪ್ಪನ್ ಅವರು ಹತ್ರಾಸ್ ಗೆ ಹೋಗುತ್ತಿದ್ದದ್ದು ದಲಿತರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ ಹುಟ್ಟು ಹಾಕಲು, ವರದಿ ಮಾಡಲು ಅಲ್ಲ.

ಅದಕ್ಕೆ ಪುರಾವೆಯೇನು?

ಎಂದು ಕೋರ್ಟು ಕೇಳಿದ್ದಕ್ಕೆ ,

ಅವರ ಬಳಿ ಹತ್ರಾಸ್
ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆದುಕೊಂಡ ರೀತಿಯನ್ನು ವಿವರಿಸುವ ಸಾಹಿತ್ಯವಿತ್ತು ಎಂದು ಸರ್ಕಾರಿ ವಕೀಲರು ಹೇಳಿದರು.

ಆಗ ಕೋರ್ಟು ಎಲ್ಲರಿಗೂ ಅವರವರ ಅಭಿಪ್ರಾಯವನ್ನು ಹೇಳುವ ಹಕ್ಕಿದೆ.

2012 ರಲ್ಲಿ ನಿರ್ಭಯ ಪ್ರಕರಣದಲ್ಲಿ ಅಂಥ ಒಂದು ಪ್ರತಿಭಟನೆಯಿಂದಾಗಿಯೇ ಹಲವಾರು ಸಧಾರಣೆಗಳನ್ನು ಸರ್ಕಾರ ತರಲು ಸಾಧ್ಯವಾಯಿತಲ್ಲವೇ ಎಂದು ಕೋರ್ಟು ಕೇಳಿತು.

- ಕಪ್ಪನ್ ಅವರ ಮೇಲೆ UAPA ಹಾಕಲು ಬೇಕಾದ ಪುರಾವೆಯೇನು ಸಿಕ್ಕಿತು?

ಅವರ ಬಳಿ ಸ್ಪೋಟಕಗಳಿದ್ದವೇ ?

ಎಂದು ಕೋರ್ಟು ಕೇಳಿತು.

ಅದಕ್ಕೆ ಸರ್ಕಾರಿ ವಕೀಲರು ಕಪ್ಪನ್ ಬಳಿ ಯಾವುದೇ ಸ್ಪೋಟಕ ಸಿಗಲಿಲ್ಲವೆಂದೂ, ಅವರ ಬಳಿ ಸ್ಪೋಟಕ ಸಾಹಿತ್ಯ ಮಾತ್ರ ಸಿಕ್ಕಿತೆಂದು ಉತ್ತರಿಸಿದರು...

ಆ ಸ್ಪೋಟಕ ಸಾಹಿತ್ಯದಲ್ಲಿ ಪೊಲೀಸರು ಅಶ್ರುವಾಯು ದಾಳಿ ಮಾಡಿದಾಗ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ವಿವರಗಳೆಲ್ಲವೂ ಇದ್ದ ಟೂಲ್ ಕಿಟ್ ಆಗಿತ್ತು ಎಂದು ಸರ್ಕಾರಿ ವಕೀಲರು ವಾದ ಮಾಡಿದರು??!!!!.

ಆಗ ಕಪ್ಪನ್ ವಕೀಲರಾದ ಕಪಿಲ್ ಸಿಬಲ್ ಅವರು ಅದು ಅಮೇರಿಕಾದಲ್ಲಿ "ಬ್ಲಾಕ್ ಲೈವ್ಸ್ ಮ್ಯಾಟರ್ " ಎಂಬ ಸಂಸ್ಥೆಯ ಸಾಹಿತ್ಯ. ಇಂಟರ್ ನೆಟ್ ನಲ್ಲಿ ಲಭ್ಯ ಎಂದು ಹೇಳಿದರು.

- ಅಂತಿಮವಾಗಿ ಕೋರ್ಟು ಈ ವರೆಗೆ ನೀವು ಕಪ್ಪನ್ ಅವರ ಯಾವ ಅಪರಾಧವನ್ನು ಸಾಬೀತು ಮಾಡುವಂಥ ಒಂದೇ ಒಂದು ಮಾಹಿತಿ ಅಥವಾ ಪುರಾವೆಯನ್ನು ನೀಡಿಲ್ಲ. ಹೆಚ್ಸೆಂದರೆ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹತ್ರಾಸ್ ಘಟನೆಗೆ ಸಂಬಂಧಪಟ್ಟ ಸಾಹಿತ್ಯ ಸಿಕ್ಕಿತು ಎಂದಷ್ಟೇ ಹೇಳಬಹುದು. ಹಾಗೂ ಚಾರ್ಜ್ ಶೀಟ್ ದಾಖಲಾಗಿ ವರ್ಷವೇ ಕಳೆದರೂ ವಿಚಾರಣೆ ಸದ್ಯಕ್ಕೆ ಪ್ರಾರಂಭವಾಗುವ ಸೂಚನೆಯಿಲ್ಲ ಎಂದು ಹೇಳುತ್ತಿದ್ದೀರಿ . ಆದ್ದರಿಂದ ಕಪ್ಪನ್ ಅವರಿಗೆ ಜಾಮೀನು ನೀಡಲಾಗುವುದು ಎಂದು ಹೇಳಿ ಷರತ್ತಿನ ಜಾಮೀನು ನೀಡಿದರು.

ಇದರಲ್ಲಿ ಗಂಭೀರವಾಗಿ ಗಮನಿಸಬೇಕಾದ ವಿಷಯವೆಂದರೆ :

- ಕಪ್ಪನ್ ಅವರ ಬಳಿ ಯಾವುದೇ ಸ್ಪೋಟಕ ವಾದ ಸಾಮಗ್ರಿಯಾಗಲೀ ಅಥವಾ ಮಾಹಿತಿಯಾಗಲಿ ದೊರೆಯದಿದ್ದರೂ ಪೊಲೀಸರು UAPA ಹಾಕಿದ್ದರು.

- ಹತ್ರಾಸ್ ಪ್ರಕರಣದಲ್ಲಿ ಪೋಲೀಸರ ಕ್ರಮಗಳನ್ನು ಟೀಕಿಸಿದ್ದನ್ನೇ ದೇಶದ್ರೋಹ ಹಾಗೂ ಉಗ್ರಗಾಮಿ ಕೃತ್ಯ ಎಂದು ಕೋರ್ಟಿನಲ್ಲಿ ವಾದಿಸಿತು.

- ಮೇಲ್ನೋಟಕ್ಕೆ ಸರ್ಕಾರದ ದುರುದ್ದೇಶ ಸ್ಪಷ್ಟವಾಗಿದ್ದರೂ ಉತ್ತರ ಪ್ರದೇಶದ ಸೆಷನ್ಸ್ಕ ನ್ಯಾಯಾಧೀಶರು, ಹೈಕೋರ್ಟು ನ್ಯಾಯಾಧೀಶರು ಹಾಗೂ ಈವರೆಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಕಪ್ಪನ್ ಅವರಿಗೆ ನ್ಯಾಯವನ್ನು-ಜಾಮೀನನ್ನು ನಿರಾಕರಿಸಿದ್ದರು.

ನೆನಪಿರಲಿ..:

- ಏನೂ ಅಪರಾಧ ಮಾಡದಿದ್ದರೂ........................ಹತ್ರಾಸ್ ನಲ್ಲಿ ದಲಿತ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಠಾಕೂರ್ ಯುವಕರನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದ ಉತ್ತರ ಪ್ರದೇಶದ ಬಿಜೆಪಿಯ ಠಾಕೂರ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರ್ಕಾರ ಮಾಡಿದ ಅನ್ಯಾಯವನ್ನು ವರದಿ ಮಾಡಲು ಹೋದ ಏಕೈಕ ಕಾರಣಕ್ಕಾಗಿ............... ಕಪ್ಪನ್ ಎಂಬ ಪತ್ರಕರ್ತ ಈ ದೇಶದಲ್ಲಿ ದೇಶದ್ರೋಹ ಹಾಗೂ ಭಯೋತ್ಪಾದನೆಯ ಆರೋಪದಲ್ಲಿ 23 ತಿಂಗಳು ಜೈಲು ಪಾಲಾಗಿದ್ದರು

ಅಂದಹಾಗೆ,

ಒಂದು ಪ್ರಶ್ನೆ ..

ಪ್ರಧಾನಿಗಳು ನಿನ್ನೆ ದೇಶದ ಜನರಿಗೆ ಕರ್ತವ್ಯ ಮಾಡಿ ಎಂದು ಕರ್ತವ್ಯಪಥದ ಮರುನಾಮಕರಣದ ನಂತರ ಕರೆ ನೀಡಿದರಲ್ಲವೇ? ..

ಪತ್ರಕರ್ತ ಕಪ್ಪನ್ ಕೂಡ ತನ್ನ ವರದಿಗಾರನ ಕರ್ತವ್ಯ ಮಾಡುತ್ತಿದ್ದರಲ್ಲವೇ?

ಹಾಗಿದ್ದ ಮೇಲೆ ಅವರನ್ನು ಏಕೆ ಬಂಧಿಸಲಾಯಿತು ?

ಹಾಗಾದರೆ ಕರ್ತವ್ಯಪಥ ಎಂದರೇನು?

Advertisement
Advertisement
Recent Posts
Advertisement