ಬೆಂಗಳೂರು: ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್ (ರಿ) ಇದರ ಚೇರ್ಮನ್ ರಾಕೇಶ್ ಮಲ್ಲಿಯವರ ನೇತೃತ್ವದ ಎಲ್ಲಾ 14 ಅಭ್ಯರ್ಥಿಗಳು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
2021ರ ಡಿಸೆಂಬರ್ 07 ರಂದು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ) ಇದರ ರಾಜ್ಯ ಪದಾಧಿಕಾರಿಗಳ ಚುನಾವಣೆ ನಡೆದಿದ್ದು ತಾಂತ್ರಿಕ ಕಾರಣಗಳಿಂದ ಫಲಿತಾಂಶ ಪ್ರಕಟಗೊಂಡಿರಲಿಲ್ಲ. ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ದಿನಾಂಕ: 21-10-2022 ರಂದು ಮತ ಎಣಿಕೆ ನಡೆಸಲಾಯಿತು.
ಇದೀಗ ಮತ ಎಣಿಕೆಯ ಫಲಿತಾಂಶ ಪ್ರಕಟಗೊಂಡಿದ್ದು ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಹನುಮಂತೇಗೌಡ ಮತ್ತವರ ತಂಡದ ಎಲ್ಲಾ 14 ಮಂದಿ ಅಭ್ಯರ್ಥಿಗಳು ಭರ್ಜರಿಯಾಗಿ ಜಯಗಳಿಸಿದ್ದಾರೆ.
ಈ ಹಿಂದೆಯೇ ಈ ಸಂಸ್ಥೆಯ ಚೇರ್ಮನ್ ಆಗಿ ಅವಿರೋಧವಾಗಿ ಆಯ್ಕೆಯಾಗಿರುವ ರಾಕೇಶ್ ಮಲ್ಲಿಯವರು ಈ ಕುರಿತು ಪ್ರತಿಕ್ರಿಯಿಸಿದ್ದು ಜಯಗಳಿಸಿದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ ಮತ್ತು ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿದ ಚುನಾವಣಾಧಿಕಾರಿಯಾಗಿ ಪವನ್ ಕುಮಾರ್ ರವರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
•ರಾಕೇಶ್ ಮಲ್ಲಿ