Advertisement

40% ಕಮಿಷನ್ ಪರಿಣಾಮ? ಮೆಟ್ರೋ ಪಿಲ್ಲರ್ ಕುಸಿತ: ತಾಯಿ, ಮಗು ದಾರುಣ ಸಾವು!

Advertisement

ನಿನ್ನೆ ಬೆಂಗಳೂರಿನಲ್ಲಿ ನಿರ್ಮಾಣ ಹಂತದ "ನಮ್ಮ ಮೆಟ್ರೋ" ಪಿಲ್ಲರ್ ಕುಸಿದು ಅದರ ಕಬ್ಬಿಣದ ಸಲಾಖೆಗಳು ತಲೆಯ ಮೇಲೆ ಬಿದ್ದು, ಅದರಡಿಯಲ್ಲಿ ಸ್ಕೂಟರಿನಲ್ಲಿ ತೆರಳುತ್ತಿದ್ದ ತಾಯಿ ಮತ್ತು ಮಗು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸ್ಕೂಟರ್ ಚಾಲನೆ ಮಾಡುತ್ತಿದ್ದ ಪತಿ ಮತ್ತು ಇನ್ನೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಹೆಣ್ಣೂರಿನ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್ಮೆಂಟ್ ನಿವಾಸಿ 28 ವರ್ಷದ ತೇಜಸ್ವಿನಿ ಮತ್ತು ಅವರ ಎರಡೂವರೆ ವರ್ಷದ ಮಗು ವಿಹಾನ್ ಎಂದು ಗುರುತಿಸಲಾಗಿದೆ. ಮೂಲತಃ ಗದಗ ಜಿಲ್ಲೆಯವರು ಎನ್ನಲಾದ ಮೃತ ತೇಜಸ್ವಿಸಿ ಮತ್ತು ಗಂಭೀರವಾಗಿ ಗಾಯಗೊಂಡಿರುವ ಆಕೆಯವರ ಪತಿ ಲೋಹಿತ್ ಕುಮಾರ್ 'ಮಾನ್ಯತಾ ಟೆಕ್ ಪಾರ್ಕ್' ನಲ್ಲಿರುವ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದರು. ದಂಪತಿಗೆ ಅವಳಿಜವುಳಿ ಮಕ್ಕಳಿದ್ದು, ಕೆಲಸಕ್ಕೆ ಹೋಗುವ ಮುನ್ನ ಅವರುಗಳು ಪ್ರತಿದಿನ ನಾಗಾವರದ ಪ್ಲೇಸ್ಕೂಲ್ ಗೆ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಈ ದುರ್ಘಟನೆ ನಲವತ್ತು ಪರ್ಸೆಂಟ್ ಕಮಿಷನ್ ನ ಪರಿಣಾಮವಾಗಿಯೇ ನಡೆದಿದೆ ಎಂಬ ಆಕ್ರೋಶದ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಯಾವುದೇ ಕಾಮಗಾರಿ ತೀರಾ ಕಳಪೆಯಾದರೆ ಏನಾಗಬಹುದು ಎಂಬುದಕ್ಕೆ ಇದೊಂದು ಉತ್ತಮವಾದ ಉದಾಹರಣೆಯಾಗಿದೆ ಕೂಡ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲೆಡೆ ನಿರ್ಮಾಣ ಹಂತದ ರಾಜಕಾಲುವೆ, ಬ್ರಿಡ್ಜ್, ಪ್ಲೈಓವರ್ ಗಳು, ಕಟ್ಟಡಗಳು ಕುಸಿದು ಕಾರ್ಮಿಕರು, ಜನಸಾಮಾನ್ಯರು ಸಾಯುತ್ತಿರುವ ಘಟನೆಗಳು ವರದಿಯಾಗುತ್ತಲೆ ಇದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ 12ಕೋಟಿ ರೂಪಾಯಿ ವೆಚ್ಚದ ನಿರ್ಮಾಣ ಹಂತದ ಜೆಟ್ಟಿ ನೀರುಪಾಲಾಗಿತ್ತು. ರಾಜ್ಯದಾದ್ಯಂತ ಕಳಪೆ ಕಾಮಗಾರಿಗಳ ಪರಿಣಾಮವಾಗಿ ರಸ್ತೆಗುಂಡಿಗಳು ನಿರ್ಮಾಣಗೊಂಡಿದ್ದು ದ್ವಿಚಕ್ರ ಸವಾರರು ಅದರಲ್ಲಿ ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವಿಲ್ಲಿ ಉಲ್ಲೇಖಿಸಲೇ ಬೇಕಿದೆ.

ಆದರೆ "ಅಪರೇಷನ್ ಕಮಲ ಸರ್ಕಾರದ 40% cm ಸಾಹೇಬರು" ಕುಖ್ಯಾತಿಯ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿಯವರು ತಾವು ಜನಪರ ಎಂದು ಬಿಂಬಿಸಲು ಸರ್ಕಾರದಿಂದ 10ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ತಮ್ಮ ಅಧಿಕಾರವನ್ನು ಚಲಾಯಿಸಿ ಮುಖ್ಯ ಇಂಜಿನಿಯರ್ ಸೇರಿ ಎಲ್ಲಾ ಇಂಜಿನಿಯರ್ ಗಳ ಅಮಾನತು ಘೋಷಿಸುವ ಮೂಲಕ "ತಮ್ಮ ಸರ್ಕಾರ ಭ್ರಷ್ಟರ ವಿರುದ್ಧ ಕಠಿಣ ನಿಲುವು ಹೊಂದಿದೆ" ಎಂಬ ಭಾವನೆಯನ್ನು ಜನರಲ್ಲಿ ಬಿಂಬಿಸಲು ಹರಸಾಹಸ ಪಡುತ್ತಿದ್ದಾರೆ. ಕರ್ತವ್ಯಲೋಪ ಆರೋಪದಿಂದ ಜಾರಿಕೊಳ್ಳಲು ನಿಯಮದಂತೆ ಗುತ್ತಿಗೆದಾರರ ವಿರುದ್ಧ ಗೋವಿಂದಪುರ ಠಾಣೆಯ ಪೋಲೀಸರು ಮೊಕದ್ದಮೆಯನ್ನು ಕೂಡ ದಾಖಲಿಸಿದ್ದಾರೆ.

"ರಾಜ್ಯ ಸರ್ಕಾರ ಪುಡಿಗಾಸು ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಸತ್ತವರು ಸತ್ತರು, ಅನಾಥರಾದವರು ಅನಾಥರಾದರು! ಆದರೆ ಈ ಆಪರೇಷನ್ ಕಮಲ ಸರ್ಕಾರದ ನೀಚ ದೊರೆಗಳಿಗಂತೂ ಯಾವುದೇ ನಷ್ಟ ಇಲ್ಲ. ಇವರುಗಳ ತೀಜೋರಿಗಂತೂ 40% ಕಮಿಷನ್ ಬಿದ್ದಾಯ್ತು. ಅಪರೇಷನ್ ಕಮಲಕ್ಕೆ ಹಣ ವ್ಯಯಿಸಿದ ದೆಹಲಿ ದೊರೆಗಳಿಗೂ ಪಾಲು ಕಳುಹಿಸಿಯಾಯ್ತು! ಕೆಲಸ ಕಳೆದುಕೊಂಡ ಇಂಜಿನೀಯರ್‌ಗಳಿಗೆ ಖಂಡಿತವಾಗಿಯೂ ಶೀಘ್ರದಲ್ಲೇ ಬಿ ರಿಪೋರ್ಟ್ ಸಿಗುತ್ತೆ. ಅವರುಗಳು ಮತ್ತೆ ಕೆಲಸಕ್ಕೆ ಸೇರಿಕೊಂಡು ಕಮಿಷನ್ ವಸೂಲಿ ಮಾಡಿ ಆಪರೇಷನ್ ಕಮಲ ಸರ್ಕಾರದ ಪದತಲದಲ್ಲಿಡುವ ಕೆಲಸವನ್ನು ಆರಂಭಿಸಲಿದ್ದಾರೆ. ಆ ಕಾರಣಕ್ಕಾಗಿ ಅಸಹಾಯಕ ಪ್ರಜೆಗಳಾದ ನಾವು, ನೀವು ಜಾಗೃತರಾಗೋಣ. 40% ಕಮಿಷನ್ ಸರ್ಕಾರ ರಚಿಸಿದ ಯಾವುದೇ ಕಟ್ಟಡದೊಳಗೆ ಅಥವಾ ಸೇತುವೆಗಳ ಅಡಿಯಲ್ಲಿ ಯಾ ಮೇಲೆ ಪ್ರಯಾಣಿಸದೇ ಜೀವ ಉಳಿಸಿಕೊಳ್ಳೋಣ. ಆ ಮೂಲಕ ನಮ್ಮ ಕುಟುಂಬ ಅನಾಥವಾಗೋದು ತಪ್ಪಿಸೋಣ" ಎಂದು ಘಟನಾ ಸ್ಥಳದಲ್ಲಿ ಜನರಾಡಿಕೊಳ್ಳುತ್ತಿರುವುದು ಕೇಳಿ ಬಂದಿದೆ.

Advertisement
Advertisement
Recent Posts
Advertisement