Advertisement

ಸಮೀಕ್ಷಾ ವರದಿ: ಕುಂದಾಪುರ, ಬೈಂದೂರು, ಉಡುಪಿ ಸೇರಿದಂತೆ ಜಿಲ್ಲೆಯ ಐದೂ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ!

Advertisement

"ಕನ್ನಡ ಮೀಡಿಯಾ ಡಾಟ್ ಕಾಮ್" ಸುದ್ದಿಜಾಲತಾಣ ಸೋಶಿಯಲ್ ಮೀಡಿಯಾದ ಮೂಲಕ ರಾಜ್ಯಾದ್ಯಂತ ಎಲ್ಲಾ 224 ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 138ರಿಂದ 144ತನಕದ ಸೀಟುಗಳ ಬಹುಮತ ಪಡೆದು ಅಧಿಕಾರಕ್ಕೆರಲಿದೆ. ಹಾಗೆಯೇ ಉಡುಪಿ ಜಿಲ್ಲೆಯ ಐದಕ್ಕೆ ಐದೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿದೆ.

ಸಮೀಕ್ಷೆಯ ಪ್ರಕಾರ ಕಾಂಗ್ರೆಸ್: 138 ರಿಂದ 144. ಬಿಜೆಪಿ: 44ರಿಂದ 56. ಜೆಡಿಎಸ್: 18ರಿಂದ 24. ಇತರ: 12ರಿಂದ 18 ಸೀಟುಗಳನ್ನು ಪಡೆಯಲಿದೆ.

ಸಮೀಕ್ಷೆಯ ಸಮಯದಲ್ಲಿ ಯಾವ ಕಾರಣಕ್ಕಾಗಿ ಕಾಂಗ್ರೆಸ್, ಬಿಜೆಪಿ ಯಾ ಜೆಡಿಎಸ್ ಪಕ್ಷದ ಕುರಿತು ಒಲವು ಹೊಂದಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ ಶೇಕಡಾ 58ರಷ್ಟು ಜನ ಬೆಲೆ ಎರಿಕೆ, ಹಿಜಾಬ್, ಹಲಾಲ್ 40 ಪರ್ಸೆಂಟ್ ಲಂಚ ಮುಂತಾದ ಬಿಜೆಪಿಯ ದುರಾಡಳಿತ ಹಾಗೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನ ಕುರಿತಾಗಿ ನಿರೀಕ್ಷೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಹಾಗೆಯೇ ಕಾಂಗ್ರೆಸ್ ಪಕ್ಷ ನಡೆಸಿದ ಆಂತರಿಕ‌ ಸಮೀಕ್ಷೆಯಲ್ಲಿ ಕಾಂಗ್ರೆಸ್ 125ರಿಂದ 130 ಸೀಟುಗಳನ್ನು ಪಡೆದರೆ, ಬಿಜೆಪಿ 62ರಿಂದ 68 ಸೀಟುಗಳನ್ನು ಪಡೆಯಲಿದೆ. ಹಾಗೆಯೇ ಜೆಡಿಎಸ್ 24ರಿಂದ 29 ಸೀಟುಗಳನ್ನು ಪಡೆಯಲಿದೆ ಎಂದು ಕೆಪಿಸಿಸಿ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಕಟಿಸಲಾಗಿದೆ.

ದೇಶದ ಹಲವು ಪ್ರತಿಷ್ಠಿತ ಪತ್ರಿಕೆಗಳು ನಡೆಸಿದ ಸಮೀಕ್ಷಾ ವರದಿಗಳು ಕೂಡ ಕಾಂಗ್ರೆಸ್ ಮೇಲುಗೈ ಸಾಧಿಸುತ್ತವೆ ಎಂದಿದೆ. ಕ್ರಮಾನುಸಾರ ಅವುಗಳ ವರದಿ ಈ ಕೆಳಗಿನಂತಿದೆ:

ಎನ್‌ಡಿಟಿವಿ ಸಮೀಕ್ಷೆಯ ಪ್ರಕಾರ- ಕಾಂಗ್ರೆಸ್: 131ರಿಂದ 142. ಬಿಜೆಪಿ: 55ರಿಂದ 62. ಜೆಡಿಎಸ್: 16ರಿಂದ 25. ಇತರ: 0ದಿಂದ 4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ.

ಎಬಿಪಿ ಸಿ ವೋಟರ್ ಪೋಲ್ ಪ್ರಕಾರ: ಕಾಂಗ್ರೆಸ್ 120ರಿಂದ 13. ಬಿಜೆಪಿ: 61ರಿಂದ 75. ಜೆಡಿಎಸ್: 16ರಿಂದ 26 ಕ್ಷೇತ್ರಗಳಲ್ಲಿ ಹಾಗೂ ಇತರ 0ದಿಂದ 5 ಸ್ಥಾನಗಳಲ್ಲಿ ವಿಜಯ ಗಳಿಸಲಿದೆ.

E-ದಿನ ಸಮೀಕ್ಷೆಯ ಪ್ರಕಾರ: ಕಾಂಗ್ರೆಸ್ 132ರಿಂದ 140. ಬಿಜೆಪಿ 57ರಿಂದ 65. ಜೆಡಿಎಸ್ 19ರಿಂದ 25. ಇತರ 1ರಿಂದ 8.

ಟಿವಿ 9 ಕನ್ನಡ ಸಮೀಕ್ಷೆಯ ಪ್ರಕಾರ: ಕಾಂಗ್ರೆಸ್ 112ರಿಂದ 119. ಜಿಜೆಪಿ 75ರಿಂದ 87. ಜೆಡಿಎಸ್ 18ರಿಂದ 27. ಇತರ 0ದಿಂದ 5.

C Daily Tracker ಪ್ರಕಾರ: ಕಾಂಗ್ರೆಸ್ 154. ಬಿಜೆಪಿ 43. ಜೆಡಿಎಸ್ 21. ಇತರ 6.

ರಾಜ್ಯದ ಇಂಟೆಲಿಜೆನ್ಸ್ ರಿಪೋರ್ಟ್ ಪ್ರಕಾರ ಕಾಂಗ್ರೆಸ್: 124. ಬಿಜೆಪಿ: 77. ಜೆಡಿಎಸ್: 22. ಇತರ 1.

ಆರೆಸ್ಸೆಸ್ ಆಂತರಿಕ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 119. ಬಿಜೆಪಿ 76. ಜಿಡಿಎಸ್ 29. ಇತರ 0.

ಆರೆಸ್ಸೆಸ್ ಸಮೀಕ್ಷೆಯ ಕುರಿತು ಆತಂಕ ಹೊಂದಿರುವ ಬಿಜೆಪಿ ಹೈಕಮಾಂಡ್ ಸಮೀಕ್ಷಾ ವರದಿಯನ್ನು ಬುಡಮೇಲು ಮಾಡಿ ಅಧಿಕಾರದ ಗದ್ದುಗೆಯನ್ನೇರಲು ಶತಾಯ ಗತಾಯ ಪ್ರಯತ್ನದಲ್ಲಿ ತೊಡಗಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಸೇರಿದಂತೆ ಇಡೀ ಕೇಂದ್ರ ಸರ್ಕಾರದ ಸಚಿವ ಸಂಪುಟವೇ ರಾಜ್ಯದ ಮೂಲೆಮೂಲೆಗಳಲ್ಲಿ ಮಿಂಚಿನ ಕಾರ್ಯಾಚರಣೆಯಲ್ಲಿ ತೊಡಗಿದೆ.

Advertisement
Advertisement
Recent Posts
Advertisement