Advertisement

ಮಣಿಪುರದ ಪರಿಸ್ಥಿತಿ ಇಡೀ ದೇಶದಲ್ಲಿ ಬರುವ ಮೊದಲು ಎಚ್ಚೆತ್ತುಕೊಳ್ಳಿ!

Advertisement

ಬರಹ: ಡಾ. ಸುಬ್ರಹ್ಮಣ್ಯ ಭಟ್ (ಲೇಖಕರು ಪತ್ರಕರ್ತರು ಹಾಗೂ ಜನಪರ ಚಿಂತಕರು)

ಹೌದು, ಮಣಿಪುರ ಎಸ್ ಟಿ ಮೀಸಲಾತಿ ವಿಚಾರದಲ್ಲಿ ಈಗ ಹೊತ್ತಿ ಉರಿಯುತ್ತಿದೆ.
ಆದರೆ ಯತ್ನಾಳ್, ಅನಂತಕುಮಾರ ಹೆಗಡೆಯವರು ಹೇಳುವಂತೆ ಬಿಜೆಪಿ 2024ರ ಚುನಾವಣೆಯಲ್ಲಿ 2/3 ರಷ್ಟು ಲೋಕಸಭಾ ಸ್ಥಾನಗಳನ್ನು ಪಡೆದರೆ ಸಂವಿಧಾನ ಬದಲಾಯಿಸ್ತಾರೆ. ಆಗ ದಲಿತರಿಗೂ ಮೀಸಲಾತಿಯಿಲ್ಲ, ಹಿಂದುಳಿದ ವರ್ಗದವರಿಗೂ ಮೀಸಲಾತಿಯಿಲ್ಲ!

ಈಗ ಮಣಿಪುರದಲ್ಲಿ ನಡೆಯುತ್ತಿರುವ ಮೀಸಲಾತಿ ಕುರಿತಾದ ಹೋರಾಟ ಆಗ ಇಡೀ ದೇಶದಲ್ಲಿ ವ್ಯಾಪಿಸಿ, ಮೀಸಲಾತಿಯಿಂದ ವಂಚಿತರಾದವರು ಪರಿತಪಿಸುವಂತಾಗುವ ಕಾಲ ಬಹುದೂರವಿಲ್ಲ. ಸಂವಿಧಾನವೇ ಬದಲಾದ ಮೇಲೆ ಮೀಸಲಾತಿ ಬಿಡಿ, ಮೀಸಲಾತಿ ಬೇಕೆಂದು ಹೋರಾಡಲು ಅವಕಾಶ ನೀಡಲಾರರು ನೆನಪಿರಲಿ!

ಇವತ್ತು ಬಿಜೆಪಿಯ ಬಾವುಟ ಹಿಡಿದು ಜೈ ಅನ್ನುತ್ತಿರುವ ದಲಿತ, ಹಿಂದುಳಿದ ವರ್ಗದವರೇ ನೀವೆಲ್ಲ ಬೀದಿಯಲ್ಲಿ ನಿಂತು ನಿಮ್ಮ ಹಕ್ಕಿಗಾಗಿ ಹೋರಾಡುವ ಕಾಲ ಇನ್ನು ಕೆಲವೇ ವರ್ಷಗಳಲ್ಲಿ ಬರಲಿದೆ.‌

ಇಂದು ಹಾಕಿದ ಜೈಕಾರ ಬಲು ದುಬಾರಿಯಾಗಿ, ಬಿಜೆಪಿಗೆ ಧಿಕ್ಕಾರ ಕೂಗುವ ದುರವಸ್ಥೆ ಪ್ರಾಪ್ತಿಯಾಗಲಿದೆ.
ಏಕೆಂದರೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಯತ್ನಾಳ್, ಹೆಗಡೆ ಹೇಳಿಕೆಯನ್ನು ಪ್ರಧಾನಿಯಿಂದ ಹಿಡಿದು ಯಾವೊಬ್ಬ ಬಿಜೆಪಿ ನಾಯಕರೂ ಅಲ್ಲಗಳೆದಿಲ್ಲ. ಇಂದು ಮಣಿಪುರ ಮುಂದೆ ಇಡೀ ಭಾರತ!

ಸಂವಿಧಾನ ಬದಲಾದರೆ ಮೀಸಲಾತಿಯೂ ಇಲ್ಲ. ಹೋರಾಟಕ್ಕೆ ಅವಕಾಶವೂ ಇಲ್ಲ.
ಬಿಜೆಪಿ ತೊಲಗಿಸಿ ಸಂವಿಧಾನ ಉಳಿಸಿ
ಭಾರತವನ್ನು ರಕ್ಷಿಸಿ!

Advertisement
Advertisement
Recent Posts
Advertisement