Advertisement

ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೊಂದು ಬಹಿರಂಗ ಪತ್ರ!

Advertisement

ಇದೀಗಷ್ಟೇ ಶಾಲೆ, ಕಾಲೇಜುಗಳು ಆರಂಭಗೊಂಡಿವೆ. ಬಹುಶಃ ಪ್ರತೀ ಹೆತ್ತವರು 'ನಮ್ಮ ಮಕ್ಕಳು ಉತ್ತಮವಾಗಿ ಕಲಿತು, ಉತ್ತಮ ಉದ್ಯೋಗಕ್ಕೆ ಸೇರಿ, ಉತ್ತಮ ಸಂಬಳ ಪಡೆದು ಈ ನಾಡಿನ ಸತ್ಪೃಜೆಗಳಾಗಿ ಹೆಸರು ಪಡೆಯಬೇಕು' ಎಂಬ ಹಂಬಲದಿಂದ ಅಥವಾ ಸದಾಶಯದಿಂದ ಹೇಳಿದಷ್ಟು ಫೀಸು ತೆತ್ತು ಒಳ್ಳೆಯ ಶಾಲೆ ಮತ್ತು ಕಾಲೇಜುಗಳಿಗೆ ಸೇರ್ಪಡೆಗೊಳಿಸುತ್ತಿದ್ದಾರೆ. ಆದರೆ ಕೆಲವು ಮುಗ್ದ ವಿಧ್ಯಾರ್ಥಿಗಳು, ದುಷ್ಕರ್ಮಿ ರಾಜಕಾರಣಿಗಳು ಹರಡುವ ವದಂತಿಗಳಿಗೆ ಬಲಿಯಾಗುತ್ತಿದ್ದಾರೆ.

ಹಾಗೆಯೇ, ಇದೀಗಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷದ ಹೆಸರು ಕೆಡಿಸಲು ಕೆಲವು ಸ್ಥಾಪಿತ ಹಿತಾಸಕ್ತ ದೇಶದ್ರೋಹಿ ಸಂಘ ಟನೆಗಳು ಮತ್ತೆ ತಮ್ಮ ಬಾಲ ಬಿಚ್ಚುವ ಅಪಾಯದ ಮುನ್ಸೂಚನೆ ಇದೆ. ಆ ಕುರಿತು ಕರ್ನಾಟಕದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ವಿನಂತಿಸಿ ಹೀಗೊಂದು ಬಹಿರಂಗ ಪತ್ರ.

ಈ ನಾಡಿನ ಮುಗ್ಧ ವಿಧ್ಯಾರ್ಥಿ- ವಿದ್ಯಾರ್ಥಿನಿಯರೇ,

ಅಧಿಕಾರಕ್ಕಾಗಿ ಹಪಹಪಿಸುವ ಸ್ವಾರ್ಥ ರಾಜಕಾರಣಿಗಳು ಹರಡುವ ಸುಳ್ಳು ವದಂತಿಗಳನ್ನು ನಂಬುವ ಮೂಲಕ ಎಲ್‌ಕೆಜಿ ಯಿಂದಲೂ ನಿಮ್ಮ ಜೊತೆ ಆಡಿ ಬೆಳೆದ ಮುಸ್ಲಿಂ ಹುಡುಗಿಯರು ಹಿಜಾಬ್ ಹಾಕುವುದನ್ನು ವಿರೋಧಿಸಿ, ಅದಕ್ಕೆ ಪ್ರತಿಯಾಗಿ ನೀವು ಕೇಸರಿ ಶಾಲು ಧರಿಸಿ ಆ ಹುಡುಗಿಯರನ್ನು ಅಟ್ಟಾಡಿಸಿ, ಅವರಲ್ಲಿ ಭಯ ಹುಟ್ಟಿಸಿದೊಡನೆ ನೀವು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಂತಾಗುವುದಿಲ್ಲ. ಅದೇ ಮುಸಲ್ಮಾನರು ಹಲಾಲ್ ಮೂಲಕ ಕಡಿದ ಮಾಂಸವನ್ನು ತಿಂತಾರೆಂದು ವಿರೋಧಿಸಿ ಅವರ ಅಂಗಡಿಗಳಿಗೆ ದಾಳಿ ನಡೆಸಿದರೆ ನಿಮಗೆ ಕೈತುಂಬಾ ಸಂಬಳ ಸಿಗುವ ಉತ್ತಮವಾದ ಕಂಪನಿಯೊಂದರಲ್ಲಿ ಉದ್ಯೋಗ ದೊರಕಿದಂತಾಗುವುದಿಲ್ಲ. ಅವರು ಅಜಾನ್ ಕೂಗುತ್ತಾರೆಂದು ಪ್ರತಿಭಟಿಸಿದರೆ ನಿಮ್ಮ ಮತ್ತು ನಿಮ್ಮ ಕುರಿತು ಕನಸು ಹೊತ್ತಿರುವ ನಿಮ್ಮ ಹೆತ್ತವರ ಹೊಟ್ಟೆ ತುಂಬಲಾರದು. ಅವರುಗಳ ಖರ್ಚು ವೆಚ್ಚಕ್ಕೆ ಕಾಸು ದೊರಕಿದಂತಾಗಿವುದಿಲ್ಲ. ಹಾಗೆಯೇ, ನಿಮ್ಮ ಹೆತ್ತವರು ನಿಮ್ಮನ್ನು ಲಕ್ಷಾಂತರ ರೂಪಾಯಿ ಸಾಲ ಕಡ ಮಾಡಿ ಶಾಲೆ, ಕಾಲೇಜುಗಳಿಗೆ ಸೇರಿಸುವುದು ನೀವು ಅಂತಹ ನೀಚರುಗಳ ಮಾತುಕೇಳಿ ಇಂತಹ ದುಷ್ಕೃತ್ಯಗಳನ್ನು ನಡೆಸಿ, ಕೇಸು ಹಾಕಿಸಿಕೊಂಡು ಕೋರ್ಟು ಮನೆ ಅಲೆಯುವ ಮೂಲಕ ಭವಿಷ್ಯವನ್ನು ಹಾಳು ಮಾಡಿಕೊಳ್ಳಲಿ ಎಂದಲ್ಲ. ಬದಲಿಗೆ ಈ ಮೇಲೆ ಹೇಳಿದಂತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಆಶಯದಿಂದ ಎಂಬುದನ್ನು ಅರಿತುಕೊಳ್ಳಿ.


(ಚಿತ್ರಕೃಪೆ: ಗೂಗಲ್)

ನಿಮಗೆ ನಮಗೆಲ್ಲರಿಗೂ ಇರುವುದು ಒಂದೇ ಒಂದು ಜೀವನ. ಆ ನಿಮ್ಮ ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಕಾಲೇಜಿನ ಗೇಟಿನ ಹೊರಗಿನ ಸಂದಿಯಲ್ಲಿ ಅಡಗಿ ನಿಂತು ಕೇಸರಿ ಶಾಲು ವಿತರಿಸುವವರ ಹಿಡೆನ್ ಅಜೆಂಡಾದ ಕುರಿತು ಅರಿತುಕೊಳ್ಳಿ. ಅವರನ್ನು ವಿರೋಧಿಸಿ, ಮತ್ತೆಂದೂ ಅವರು ಅಲ್ಲಿ ಬಾರದಂತೆ ಖಡಕ್ ಆಗಿ ಎಚ್ಚರಿಕೆ ನೀಡಿ ಅವರನ್ನು ಅಲ್ಲಿಂದ ಓಡಿಸಿ. ಅಂಬೇಡ್ಕರ್ ರವರ "ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು" ಸಿದ್ದಾಂತದ ಸಂವಿಧಾನವನ್ನು ಪಾಲನೆ ಮಾಡಿ, ಉತ್ತಮ ಅಂಕಗಳೊಂದಿಗೆ ನಿಮ್ಮ ವಿದ್ಯಾಭ್ಯಾಸವನ್ನು ಪೂರೈಸಿ, ಉತ್ತಮ ಉದ್ಯೋಗಕ್ಕೆ ಸೇರಿಕೊಂಡು ನಿಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ.

ಹಾಗೆಯೇ, ನಿಮಗೆ ದೊರೆತಿರುವ ಉತ್ತಮ ವಿದ್ಯಾಭ್ಯಾಸವನ್ನು ಸದುಪಯೋಗಪಡಿಸಿಕೊಂಡು, ನಿಮ್ಮ ಮನೆಯ ಸುತ್ತಮುತ್ತಲಿನ ವೃದ್ದರನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ ವೃದ್ಧಾಪ್ಯ ವೇತನವನ್ನು, ವಿದವೆಯರನ್ನು ಗುರುತಿಸಿ ವಿಧವಾ ವೇತನವನ್ನು, ಮನೆಯಿಲ್ಲದವರನ್ನು ಗುರುತಿಸಿ 44ಸಿ, 44ಸಿಸಿ, ಆಶ್ರಯ ಮುಂತಾದ ಮನೆಗಳನ್ನು, ಕಡು ಬಡತನದಲ್ಲಿರುವವರನ್ನು ಗುರುತಿಸಿ ಬಿಪಿಎಲ್ ಕಾರ್ಡುಗಳನ್ನು ದೊರಕಿಸಿಕೊಡುವ ಮೂಲಕ ಅನ್ನಭಾಗ್ಯ, ಅಂತ್ಯೋದಯದಂತಹ ಹತ್ತಾರು, ನೂರಾರು ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಯತ್ನಿಸಿ.

ಅದಲ್ಲದೇ, ನಿಮ್ಮ ಪರಿಸರದ ಫಲಾನುಭವಿಗಳನ್ನು ಗುರುತಿಸಿ ಅವರುಗಳನ್ನು ಹತ್ತಿರದ ಸೈಬರ್ ಸೆಂಟರ್‌ಗೆ ಕರೆದೊಯ್ದು ಇದೀಗ ಸಿದ್ದರಾಮಯ್ಯ ನವರ ಸರಕಾರ ಜಾರಿಗೊಳಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಶಕ್ತಿಯೋಜನೆ ಮುಂತಾದ ಜನಪರ ಯೋಜನೆಗಳಿಗೆ ಹೆಸರು ನೋಂದಣಿ ಮಾಡಲು ಸಹಕರಿಸಿ. ಆ ಮೂಲಕ ನಮಗೆಲ್ಲವನ್ನೂ ಕೊಟ್ಟ ನಮ್ಮ ಸಮಾಜದ ಋಣವನ್ನು ತೀರಿಸಲು ಪ್ರಯತ್ನಿಸಿ.

ನಮಸ್ಕಾರ.

ಇಂತಿ ನಿಮ್ಮ ಹಿತೈಷಿ
"ಶಾಂತಿಪ್ರಿಯ"

Advertisement
Advertisement
Recent Posts
Advertisement