ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಾ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿಕೊಳ್ಳುತ್ತಿರುವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶಗೊಳಿಸುತ್ತಿರುವುದನ್ನು ವಿರೋಧಿಸಿ ಕೆಪಿಸಿಸಿ ವತಿಯಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಕಾರ್ಯಕ್ರಮದ ಭಾಗವಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಶಾಸ್ತ್ರಿ ಸರ್ಕಲ್‌ನಲ್ಲಿ ಮೌನಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಹಿರಿಯ ನಾಯಕರಾದ ಮಲ್ಯಾಡಿ ಶಿವರಾಮ ಶೆಟ್ಟಿ, ದೇವಾನಂದ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಬಿ. ಹಿರಿಯಣ್ಣ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ ಹೆಗ್ಡೆ, ಕೃಷ್ಣದೇವ ಕಾರಂತ, ಬೀಜಾಡಿ ಅಶೋಕ್ ಪೂಜಾರಿ, ಗಣೇಶ್ ಶೇರೆಗಾರ, ಸದಾನಂದ ಖಾರ್ವಿ, ಅಶ್ವಥ್ ಕುಮಾರ್, ನಾಗರಾಜ ನಾಯ್ಕ, ಮರತ್ತೂರು ಚಂದ್ರಶೇಖರ ಶೆಟ್ಟಿ, ಕೋಡಿ ಅಬ್ದುಲ್ಲಾ, ಭಾಸ್ಕರ ಶೆಟ್ಟಿ, ವಕ್ವಾಡಿ ರಮೇಶ್ ಶೆಟ್ಟಿ, ಕೇಶವ ಭಟ್, ರಂಗನಾಥ ಭಟ್, ದಿವಾಕರ ಶೆಟ್ಟಿ, ಹೊಸ್ಮಠ ಗೋಪಾಲ ಶೆಟ್ಟಿ, ಕೋಣಿ ನಾರಾಯಣ ಆಚಾರ್, ವಿನೋದ್ ಕ್ರಾಸ್ತಾ, ಗಂಗಾಧರ್ ಶೆಟ್ಟಿ, ಇಂಟಕ್ ಅಧ್ಯಕ್ಷ ಚಂದ್ರ ಅಮೀನ್, ಎನ್‌ಎಸ್‌ಯುಐ ಅಧ್ಯಕ್ಷ ಸುಜನ್ ಶೆಟ್ಟಿ, ಇಚ್ಚಿತಾರ್ಥ ಶೆಟ್ಟಿ, ಪ್ರಭಾವತಿ ಶೆಟ್ಟಿ, ಚಂದ್ರಶೇಖರ ಖಾರ್ವಿ, ಮಹಮದ್ ಅಶ್ಪಾಕ್, ಶ್ರೀಧರ್ ಶೇರೆಗಾರ, ರೇವತಿ ಶೆಟ್ಟಿ, ಆಶಾ ಕರ್ವಾಲೋ, ಜ್ಯೋತಿ ನಾಯ್ಕ, ಶೋಬಾ ಸಚ್ಚಿದಾನಂದ, ಜ್ಯೋತಿ ಪುತ್ರನ್, ಅಭಿಜಿತ್ ಪೂಜಾರಿ, ಸಚ್ಚಿದಾನಂದ ಎಂ.ಎಲ್, ದೀಪಕ್ ನಾವುಂದ, ಅಶೋಕ್ ಸುವರ್ಣ, ರಾಕೇಶ್ ಶೆಟ್ಟಿ ವಕ್ವಾಡಿ, ಚಂದ್ರಕಾಂತ ನಾಯ್ಕ, ಶಿವರಾಮ ಪುತ್ರನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.