ಕುಂದಾಪುರ- ಜ.12: ಹಸಿದ ಹೊಟ್ಟೆಗೆ ಅನ್ನ ನೀಡದ ದೇವರಾಗಲಿ, ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂಬ ಸ್ವಾಮಿ ವಿವೇಕಾನಂದರು ನೂರಾರು ವರ್ಷಗಳ ಹಿಂದೆಯೇ ಹೇಳಿದರು.ಕೇಂದ್ರ ಸರಕಾರದ ಕಾರ್ಪೋರೇಟ್ ಪರ ನೀತಿಗಳಿಂದ ಹಸಿವಿನ ಸೂಚ್ಯಂಕದಲ್ಲಿ ಭಾರತವು 111ನೇ ಸ್ಥಾನದಲ್ಲಿರುವ ದಯನೀಯ ಸ್ಥಿತಿಗೆ ಕಾರಣವಾಗಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್ ನರಸಿಂಹ ಹೇಳಿದರು.
ಅವರು ಸ್ವಾಮಿ ವಿವೇಕಾನಂದರ 160ನೇ ದಿನಾಚರಣೆ ಪ್ರಯುಕ್ತ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ನಡೆದ
ಬೆಲೆ ಏರಿಕೆ, ಬಡತನ, ಹಸಿವು,ಅಪೌಷ್ಟಿಕತೆ ನಿಯಂತ್ರಣಕ್ಕಾಗಿ, ದುಡಿಯುವ ಜನರ ಐಕ್ಯತೆ ಮತ್ತು ಹಕ್ಕುಗಳ ರಕ್ಷಣೆಗಾಗಿ, ವೇತನ,ಉದ್ಯೋಗ, ಜೀವನೋಪಾಯಕ್ಕಾಗಿ, ರೈತ,ಕಾರ್ಮಿಕ, ಜನವಿರೋಧಿ ಕಾನೂನುಗಳ ವಾಪಾಸ್ಸಾತಿಗಾಗಿ, ಕೇಂದ್ರದ ಸಾರ್ವಜನಿಕ ಉದ್ದಿಮೆಗಳು, ಸಂವಿಧಾನ ಮೌಲ್ಯಗಳ ರಕ್ಷಣೆಗಾಗಿ 25 ಬೇಡಿಕೆಗಳನ್ನೊಳಗೊಂಡಂತೆ ಸಿಐಟಿಯು ರಾಜ್ಯ ಸಮಿತಿ ಕರೆಯ ಮೇರೆಗೆ ಸಾರ್ವಜನಿಕರಿಂದ ಸಹಿ ಸಂಗ್ರಹದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಸಂಚಾಲಕರಾದ ಚಂದ್ರಶೇಖರ ವಿ, ಸಿಐಟಿಯು ಮುಖಂಡರಾದ ಚಿಕ್ಕ ಮೊಗವೀರ, ಸಂತೋಷ ಹೆಮ್ಮಾಡಿ, ಮಧುಶ್ರಿ, ಸುಧೀರ್, ಕ್ರಷ್ಣ ಪೂಜಾರಿ, ಅಣ್ಣಪ್ಪ ಅಬ್ಬಿಗುಡ್ಡಿ,ಚಂದ್ರ ದೇವಾಡಿಗ,ಮೋಹನ, ರಾಜು ದೇವಾಡಿಗ,ಸುಧಾಕರ, ಅಲೆಕ್ಸಾಂಡರ್, ರೆಹಮಾನ್, ಗುಲಾಬಿ ಮುಂತಾದವರಿದ್ದರು.