Advertisement

ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ!

Advertisement

ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಭಾರತೀಯ ವೈದ್ಯಕೀಯ ಸಂಘದ ಪ್ರವೇಶ

ಭಾರತೀಯ ವೈದ್ಯಕೀಯ ಸಂಘ (ರಿ ) ಮಂಗಳೂರು ಪ್ರಪ್ರಥಮ ಬಾರಿಗೆ ವೈದ್ಯಕೀಯ ಸೇವೆಯ ಜೊತೆಗೆ ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಪಾಲ್ಗೊಳ್ಳಲಿದ್ದು ಡಾ. ಅವಿನ್ ಆಳ್ವರವರ ನೇತೃತ್ವದಲ್ಲಿ ವೈದ್ಯಕೀಯ ಸಂಘವು ಸ್ವತಃ ಕಂಬಳ ಕೋಣ ಗಳನ್ನು ಕಂಬಳಕ್ಕೆ ಇಳಿಸಲಿದೆ. ಇದರೊಂದಿಗೆ ತುಳು ನಾಡಿನ ಜಾನಪದ ಕ್ರೀಡಾ ಸಂಸ್ಕೃತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಎಪ್ರಿಲ್ 12 ಶುಕ್ರವಾರ ಸಂಜೆ 5 ಗಂಟೆಗೆ ಆರಂಭಗೊಳ್ಳುವ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ.)ಇದರ ಆಯೋಜನೆಯಲ್ಲಿ ಗುರುಪುರದಲ್ಲಿ ನಡೆಯುವ "ಮೂಳೂರು- ಅಡ್ಡೂರು" ಹೊನಲು ಬೆಳಕಿನ ಜೋಡುಕರೆ ಕಂಬಳ ಉತ್ಸವದಲ್ಲಿ ನಮ್ಮ ಕೋಣಗಳನ್ನು ಕಂಬಳದ ಕರೆಗೆ ಇಳಿಸುವ ಸಂದರ್ಭದಲ್ಲಿ ನಮ್ಮ ಸಂಘದ ಸದಸ್ಯರು ಉಪಸ್ಥಿತರಿರ ಬೇಕಾಗಿ ಗೌರವ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.

ಕೋಣಗಳನ್ನು ಕಂಬಳದ ಕರೆಗೆ ಇಳಿಸುವ ಸಂದರ್ಭದಲ್ಲಿ ಎಲ್ಲರೂ ಬಿಳಿ ಪಂಚೆ ಬಿಳಿ ಟಿ ಶರ್ಟ್ ಅಥವಾ ಜುಬ್ಬಾ ಮತ್ತು ಮುಂಡಾಸು ಧರಿಸುವ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ನಮ್ಮೆಲ್ಲರ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿ ವಿನಂತಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ(ರಿ)ಮಂಗಳೂರು ಇದರ ಅಧ್ಯಕ್ಷರಾದ ಡಾ. ರಂಜನ್ ಆರ್. ಕೆ., ಪ್ರಧಾನ ಕಾರ್ಯದರ್ಶಿ ಡಾ.ಅವಿನ್ ಆಳ್ವ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement