Advertisement

ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ

Advertisement

ಉಡುಪಿ -ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆಯವರು ಬ್ರಹ್ಮಾವರದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿ ಮತ ಯಾಚಿಸಿದರು.

ಮಣಿಪಾಲದಲ್ಲಿ ಖ್ಯಾತ ಪತ್ರಿಕೋದ್ಯಮಿ, ಮಣಿಪಾಲ ಮೀಡಿಯಾ ನೆಟ್ ವರ್ಕ್ ನ ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿ ಮತಯಾಚಿಸಿದ ಸಂಧರ್ಭ.

ರಾಜ್ಯದ ಪ್ರತಿಷ್ಠಿತ ಸಿಲ್ಕ್ ಶೋ ರೂಮ್ ಉಡುಪಿಯ "ಜಯಲಕ್ಷ್ಮಿ ಸಿಲ್ಕ್ಸ್" ನಲ್ಲಿ ಮತಯಾಚನೆ ಮಾಡಿದ ಕ್ಷಣ.

ಮಣಿಪಾಲದಲ್ಲಿರುವ ಪ್ರಸಿದ್ಧ ಮಣಿಪಾಲ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಮಣಿಪಾಲದಲ್ಲಿರುವ ಸತ್ಕಾರ್ ಆಟೋಸ್ಟ್ಯಾಂಡ್ ಸಂಘಟನೆಯ ಕಚೇರಿಯಲ್ಲಿ "ಸಮೃದ್ಧ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರ ನನ್ನ ಕನಸು" ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಸಂಧರ್ಭ.

ಮಣಿಪಾಲದ ಬೆಸ್ಟ್ ಸೆಲ್ಲರ್ ಗಾರ್ಮೆಂಟ್ಸ್ ನಲ್ಲಿ ಮತಯಾಚನೆ ಮಾಡಲಾಯಿತು.

ಕೆಎಂಸಿ ಮಣಿಪಾಲದ ವಿವಿಧ ವಿಭಾಗಗಳಲ್ಲಿ ಮತ ಯಾಚನೆ ಮಾಡಲಾಯಿತು. ಪಕ್ಷದ ಪ್ರಮುಖರು ಈ ಸಂಧರ್ಭದಲ್ಲಿ ಜೊತೆಯಲ್ಲಿದ್ದರು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಾಹೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ಮತ ಯಾಚನೆ ಮಾಡಿದರು.

ಗುಜ್ಜರಬೆಟ್ಟು ಸಮೀಪದ ಫಿಶ್ ಕಟ್ಟಿಂಗ್ ಫ್ಯಾಕ್ಟರಿಗಳಲ್ಲಿ ನಡೆದ ಮತ ಯಾಚನೆ.

ಜಯಪ್ರಕಾಶ ಹೆಗ್ಡೆಯವರು ಬಾರ್ಕೂರಿನ ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ, ಪ್ರವೀಣ್ ಬಾರ್ಕೂರು, ಶಿವರಾಜ್ ಮಲ್ಲಾರ್ ಮೊದಲಾದವರು ಹಾಜರಿದ್ದರು.

Advertisement
Advertisement
Recent Posts
Advertisement