Advertisement

"ಮೋದಿಜೀ, ಭಯ ಆಗ್ತಿದೆಯಾ?" ರಾಹುಲ್ ವಿಡಿಯೋ ನೋಡಿ

Advertisement

ಕಳೆದ ಐದು ವರ್ಷಗಳಿಂದಲೂ ಪದೇಪದೇ ಅಂಬಾನಿ- ಅದಾನಿ ಹೆಸರನ್ನೆತ್ತಿಕೊಂಡು ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಶೆಹಜಾದ (ರಾಜಕುಮಾರ) ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯ ಬಳಿಕ ಅಂಬಾನಿ- ಅದಾನಿಗಳ ಹೆಸರನ್ನೇ ಎತ್ತುತ್ತಿಲ್ಲ ಏಕೆ? : ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕುರಿತು ಪ್ರಧಾನಿ ಮೋದಿಯವರು ಬುಧವಾರ (ಮೇ/08) ತೆಲಂಗಾಣದ ವೇಮುವಾಡದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಕೇಳಿರುವ ಪ್ರಶ್ನೆಯಾಗಿದೆ.

"ಕಾಂಗ್ರೆಸ್ ಗೆ ಅಂಬಾನಿ -ಅದಾನಿ ಜೊತೆ ಡೀಲ್ ನಡೆದಿದೆಯಾ?" ಎಂಬ ಈ ಮೇಲಿನ ಮೋದಿ ಪ್ರಶ್ನೆಗೆ ವಿಡಿಯೋ ಸಂದೇಶದ ಮೂಲಕ ರಾಹುಲ್ ಕಟುಕಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದ್ದು ಜನತೆ ಅತ್ಯುತ್ಸಾಹದಿಂದ ಅದನ್ನು ಶೇರ್‌ಮಾಡುತ್ತಿದ್ದಾರೆ. ಸೋಫಾ ತುದಿಯಲ್ಲಿ ಕುಳಿತ ವಿಶಿಷ್ಟ ಭಂಗಿಯ ರಾಹುಲ್ ರ ಈ ಕೌಂಟರ್ ಹೇಳಿಕೆಯ ಕುರಿತು ಜನ ಪ್ರಶಂಸೆಯ ಮಾತನಾಡುತ್ತಿದ್ದಾರೆ.

ಆ ವಿಡಿಯೋದ ಕನ್ನಡ ಅವತರಣಿಕೆಯ ಸಾರಾಂಶ ಇಂತಿದೆ;

ನಮಸ್ಕಾರ ಮೋದಿಜೀ! ಭಯ ಆಗಿದೆಯೇ? ಸಾಮಾನ್ಯವಾಗಿ ನೀವು ಅಂಬಾನಿ- ಅದಾನಿಗಳ ಹೆಸರನ್ನು ಮುಚ್ಚಿದ ಬಾಗಿಲ ಹಿಂದಷ್ಟೇ ಪ್ರಸ್ತಾಪಿಸುತ್ತಾ ಇದ್ದಿದ್ದೀರಿ. ಆದರೀಗ ಮೊತ್ತ ಮೊದಲ ಬಾರಿಗೆ ಸಾರ್ವಜನಿಕವಾಗಿ ಅವರ ಹೆಸರುಗಳನ್ನು ಎತ್ತಿದ್ದೀರಿ. ಅಂದ ಹಾಗೆ "ಅಂಬಾನಿ- ಅದಾನಿಗಳು ಟೆಂಪೋ ತುಂಬಾ ಹಣ ಸಂದಾಯ ಮಾಡಿದ್ದಾರೆ" ಎಂದು ಹೇಳಿದ್ದೀರಲ್ಲ? ಅದು ನಿಮ್ಮ ವೈಯಕ್ತಿಕ ಅನುಭವದ ಮೇಲೆ ಹೇಳಿದ್ದೀರೋ ಹೇಗೆ? ಆದಷ್ಟು ಬೇಗ ಈ ಬಗೆಗೆ ಕೂಡ ಒಂದು ತನಿಖೆಗೆ ಆದೇಶಿಸಿ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಜೊತೆಗೆ "ಕೈಗಾರಿಕೋದ್ಯಮಿಗಳಿಗೆ ಮೋದಿಯವರು ಅದೆಷ್ಟು ಸರ್ಕಾರದ ಹಣವನ್ನು ದಾನ ಮಾಡಿದ್ದಾರೋ ಅಷ್ಟೇ ಹಣವನ್ನು ಕಾಂಗ್ರೆಸ್ ಈ ದೇಶದ ಜನರಿಗೆ ವಿತರಿಸಲಿದೆ" ಎಂದು ರಾಹುಲ್ ಅದೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Advertisement
Advertisement
Recent Posts
Advertisement