ದಿನಾಂಕ 14 - 4 - 2024 ರಂದು (ಆದಿತ್ಯವಾರ ) ಆಚರಿಸಲಿರುವ ಡಾ. ಅಂಬೇಡ್ಕರ್ ಜಯಂತಿಯನ್ನು ಈ ವರ್ಷದ ವಿಶೇಷ ಚುನಾವಣಾ ಪ್ರಚಾರ ಅಭಿಯಾನವಾಗಿ ಹಮ್ಮಿಕೊಳ್ಳಲು ಉಡುಪಿ ಜಿಲ್ಲಾ ಕಾಂಗ್ರೆಸ್ ನಿರ್ಧರಿಸಿ ಆದೇಶವೊಂದನ್ನು ಹೊರಡಿಸಿದೆ.
ಈ ನಿಟ್ಟಿನಲ್ಲಿ ಕೆಲವು ಕಡ್ಡಾಯ ಸೂಚನೆಗಳನ್ನು ಹೊರಡಿಸಿದ್ದು ಆ ಸೂಚನೆಗಳು ಇಂತಿವೆ:
•ಸದ್ರಿ ದಿನದಂದು ಬೆಳಿಗ್ಗೆ ಗಂಟೆ 8:00 ಕ್ಕೆ ಸರಿಯಾಗಿ ಜಿಲ್ಲೆಯಲ್ಲಿರುವ ರಾಷ್ಟ್ರ ˌರಾಜ್ಯ ˌ ಜಿಲ್ಲಾ ˌ ತಾಲೂಕು ಹಾಗೂ ಗ್ರಾಮ ಮಟ್ಟದ ಕಾಂಗ್ರೆಸ್ ಮುಖಂಡರು ತಮ್ಮ ತಮ್ಮ ಮನೆಯಿರುವ ಬೂತಿನಲ್ಲಿ ಆ ಬೂತ್ ಮಟ್ಟದ ಕಾರ್ಯಕರ್ತರ ಜೊತೆಗೆ ಸೇರಿಕೊಂಡು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮನೆ ಮನೆಗೆ ತೆರಳಿ ವಿಶೇಷ ಪ್ರಚಾರ ಅಭಿಯಾನವನ್ನು ಆರಂಭಿಸಬೇಕು.
•ತಮ್ಮ ಬೂತಿನ ಮತದಾರ ಪಟ್ಟಿಯಲ್ಲಿರುವ ಪ್ರಥಮ ಮನೆಯ ಪ್ರಚಾರದಲ್ಲಿ ಸ್ಥಳೀಯ ಬೂತ್ ನ ಎಲ್ಲಾ ನಾಯಕರಿದ್ದ ಛಾಯಾಚಿತ್ರವನ್ನು ತೆಗೆದು ಸಂಬಂಧ ಪಟ್ಟ ಜಿಲ್ಲಾ ಉಸ್ತುವಾರಿಗಳಿಗೆ ಕಳುಹಿಸ ಬೇಕು.
•ಈ ವಿಶೇಷ ಪ್ರಚಾರ ಅಭಿಯಾನದಲ್ಲಿ ಪ್ರತೀ ಬೂತಿನಲ್ಲಿರುವ ಎಲ್ಲಾ ಘಟಕಗಳ ಒಬ್ಬೊಬ್ಬ ಪದಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸತಕ್ಕದ್ದು.
•ಬೂತು ದೊಡ್ಡದಾಗಿದ್ದಲ್ಲಿ ನಾಯಕರು ನಾಲ್ಕರಿಂದ ಐದು ಪ್ರತ್ಯೇಕ ಗುಂಪುಗಳಾಗಿ ರಚಿಸಿ ಒಂದೇ ದಿನದಲ್ಲಿ ತಮ್ಮ ಬೂತಿನ ಪ್ರಚಾರವನ್ನು ಮುಗಿಸಬೇಕು.
•ಆದ್ದರಿಂದ ಪ್ರತಿ ಪದಾಧಿಕಾರಿಗಳು ಕೂಡಲೇ ಈ ಬಗ್ಗೆ ತಮ್ಮ ಬೂತಿನ ಕಾರ್ಯಕರ್ತರನ್ನು ಸಂಪರ್ಕಿಸಿ ಡಾ.ಅಂಬೇಡ್ಕರ್ ಜಯಂತಿಯ ಪ್ರಚಾರ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ತಮಗೆ ಈ ಮೂಲಕ ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ನಿರ್ದೇಶನ ನೀಡಲಾಗಿದೆ.
•ಚುನಾವಣಾ ಪ್ರಚಾರ ನಿಮಿತ್ತ ತಾ 16 - 04 - 2024 ರಂದು ಮಂಗಳವಾರ ಉಡುಪಿ ಜಿಲ್ಲೆಗೆ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಗಳು ಹಾಗೂ KPCC ಅಧ್ಯಕ್ಷರೂ ಆದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ರವರು ಭೇಟಿ ನೀಡಲಿದ್ದು ಬೂತು ಮಟ್ಟದಲ್ಲಿ ನಡೆಯುವ ಈ ಸಭೆಗಳಲ್ಲಿ ಈ ಮುಖಂಡರುಗಳ ಆಗಮನದ ವಿಷಯವನ್ನು ಕಾರ್ಯಕರ್ತರಿಗೆ ತಿಳಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.