Advertisement

ಡಾ. ಅವಿನ್ ಆಳ್ವಗೆ ಐಎಂಎ ರಾಷ್ಟ್ರ ಮತ್ತು ರಾಜ್ಯ ಪುರಸ್ಕಾರ!

Advertisement

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಂಗಳೂರು ಘಟಕದ ಕಾರ್ಯದರ್ಶಿ ಡಾ. ಅವಿನ್ ಆಳ್ವಗೆ 2023-24ನೇ ಸಾಲಿನ ಕರ್ನಾಟಕ ರಾಜ್ಯ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಮತ್ತು ಭಾರತದ ಅತ್ಯುತ್ತಮ ಕಾರ್ಯದರ್ಶಿ ರಾಷ್ಟ್ರೀಯ ಐಎಂಎ ಪುರಸ್ಕಾರ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈ ಪುರಸ್ಕಾರ ಡಾ. ಅವಿನ್ ಆಳ್ವ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಂಗಳೂರು ಐಎಂಎ ಶಾಖೆಯನ್ನು ದೇಶಾದ್ಯಂತ ಇರುವ 3,000 ಶಾಖೆ ಗಳ ನಡುವೆ ಅಗ್ರ ಸ್ಥಾನಕ್ಕೇರಿಸಲು ಮಾಡಿದ ಸಾಧನೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ನಾಯಕತ್ವ, ಸೇವಾ ಮನೋಭಾವ, ಮತ್ತು ಅಪಾರ ಕೊಡುಗೆಗಳಿಗೆ ನೀಡಲಾದ ಗೌರವವಾಗಿದೆ ಎಂದು ಐಎಂಎ ಕರ್ನಾಟಕ ರಾಜ್ಯ ಮಂಡಳಿ ಮತ್ತು ನವ ದೆಹಲಿಯ ಕೇಂದ್ರ ಕಚೇರಿಯ ಪ್ರಕಟಣೆ ತಿಳಿಸಿದೆ.

Advertisement
Advertisement
Recent Posts
Advertisement