Advertisement

"ಮೂರೂ ಬಿಟ್ಟವರು ಊರಿಗೆ ದೊಡ್ಡವರು" ಎಂಬ ಗಾದೆ ಮಾತಿನಂತೆ ಬಿಜೆಪಿ ನಡೆದುಕೊಳ್ಳುತ್ತಿದೆ: ರಮೇಶ್ ಬಾಬು

Advertisement

"ಮೂರೂ ಬಿಟ್ಟವರು ಊರಿಗೆ ದೊಡ್ಡವರು" ಎಂಬ ಗಾದೆ ಮಾತಿನಂತೆ ಕರ್ನಾಟಕದ ಭಾರತೀಯ ಜನತಾ
ಪಕ್ಷದ ನಾಯಕರು ತಮ್ಮ ವರ್ತನೆಯನ್ನು ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಹೋರಾಟಗಳಿಗೆ ಬಿಜೆಪಿ ನಾಯಕರು ಕ್ರಿಮಿನಲ್ ಆರೋಪದ ಮುಖಂಡರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಪರಮಾವಧಿ. ಇಡೀ ರಾಷ್ಟ್ರ ನೋಡುವಂತೆ ಪಿಎಸ್ಐ ಹಗರಣದಲ್ಲಿ ಗಂಭೀರ ಆರೋಪವನ್ನು ಹೊತ್ತಿದ್ದ ಭಾರತೀಯ ಜನತಾ ಪಕ್ಷ ತದನಂತರ ಸದರಿ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಕೈ ತೊಳೆದುಕಳ್ಳುವ ಪ್ರಯತ್ನವನ್ನು ಮಾಡಿತ್ತು. ಕರ್ನಾಟಕದ ಸಾವಿರಾರು ಯುವಕರ
ಭವಿಷ್ಯವನ್ನು ಕಸಿದಂತಹ ಕರ್ನಾಟಕದ ಪಿಎಸ್ಐ ಹಗರಣ, ಕಾಂಗ್ರೆಸ್ ಪಕ್ಷದ ಮತ್ತು ಪ್ರಿಯಾಂಕ್ ಖರ್ಗೆಯವರ ಪ್ರಯತ್ನದಿಂದ ಆಚೆ ಬಂದತ್ತು. ಇಡೀ ರಾಜ್ಯದಲ್ಲಿ ಒಬ್ಬ ಹಿರಿಯ ದರ್ಜೆಯ ಐಪಿಎಸ್ ಅಧಿಕಾರಿ ಮತ್ತು ಐಎಎಸ್ ಅಧಿಕಾರಿ ಅಮಾನತು ಶಿಕ್ಷೆಗೆ ಒಳಗಾದಂತಹ ಪ್ರಕರಣವಿದು ಎಂದು ವಿಧಾನಪರಿಷತ್ ಮಾಜಿ ಸದಸ್ಯರು, ಹಾಗೂ "ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದ ಅಧ್ಯಕ್ಷ"ರು ಆದ ರಮೇಶ್ ಬಾಬು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಪ್ರಕರಣದಲ್ಲಿ ಅಂದಿನ ಗೃಹ ಸಚಿವರಾದ ಅರಗ ಜ್ಞಾನೇಂದ್ರರವರು ಪ್ರಮುಖ ಆರೋಪಿ ಬಿಜೆಪಿಯ
ಅಂದಿನ ಮುಖಂಡರಾದ ಶ್ರೀಮತಿ ದಿವ್ಯಾ ಹಾಗರಗಿ ಅವರ ಮನೆಗೆ ಮತ್ತು ಶಾಲೆಗೆ ಭೇಟಿ ನೀಡಿದ ಭಾವಚಿತ್ರಗಳು/ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಆಕೆಯ ಬಂಧನದ ನಂತರ ಭಾರತೀಯ ಜನತಾ ಪಕ್ಷ ಆಕೆಯನ್ನು ಪಕ್ಷದಿಂದ ಉಚ್ಛಾ ಟಿಸಿರುವ ಹೇಳಿಕೆಯನ್ನು ನೀಡಿತ್ತು. ಆದರೆ ಮತ್ತೆ ಗುಲ್ಬರ್ಗಾದ ಪ್ರತಿಭಟನೆಯಲ್ಲಿ ಆಕೆಗೆ ಆದ್ಯತೆಯನ್ನು ನೀಡಿ ಅವರ ಜೊತೆಯಲ್ಲಿ ಬಿಜೆಪಿ ನಾಯಕರು ಬೀದಿ ಹೋರಾಟ ನಡೆಸಿರುವುದು ವಿಪರ್ಯಾಸ! ಬಿಜೆಪಿ ನಾಯಕರುಗಳಿಗೆ ಕಳಂಕಿತರನ್ನು, ಆರೋಪಿತರನ್ನು ಮತ್ತು ಕ್ರಿಮಿನಲ್ ಹಿನ್ನಲೆಯುಳ್ಳವರನ್ನು ತಮ್ಮ ಹೋರಾಟಗಳಲ್ಲಿ ಜೊತೆ ಜೊತೆಯಲ್ಲಿ ಕರೆದುಕೊಂಡು ಹೋಗದೆ ಇದ್ದರೆ ಆತ್ಮ ತೃಪ್ತಿ ಇರುವುದಿಲ್ಲ! ಕಳಂಕಿತರನ್ನು ಜೊತೆಯಲ್ಲಿ ಇಟ್ಟುಕೊಂಡು ಬಿಜೆಪಿ
ನಾಯಕರು ಗುಲ್ಬರ್ಗಾದಲ್ಲಿ ಪ್ರತಿಭಟನೆಯನ್ನು ಮಾಡುವುದರ ಮೂಲಕ ಮತ್ತೊಮ್ಮೆ ತಮ್ಮ ವ್ಯಕ್ತಿತ್ವವನ್ನು ಮತ್ತು ಸಂಘ ಪರಿವಾರದ ಆದರ್ಶಗಳನ್ನು ಸಾಬೀತು ಪಡಿಸಿಕೊಂಡಿದ್ದಾರೆ. ಕ್ರಿಮಿನಲ್ ಅಪರಾಧಿಗಳ ಜೊತೆ ಕಾಣಿಸಿಕೊಳ್ಳುವುದರ ಮೂಲಕ ತಮ್ಮ ಹವ್ಯಾಸವನ್ನು ಬೆತ್ತಲೆ ಗೊಳಿಸಿಕೊಂಡಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಬಿಜೆಪಿ ನಾಯಕರುಗಳ ಇಂತಹ ನಡೆಯನ್ನು ಖಂಡಿಸುತ್ತದೆ.

ರಾಜ್ಯದಲ್ಲಿ ಬಿಜೆಪಿ ಈ ಹಿಂದಿನ ಆಡಳಿತಾವಧಿಯಲ್ಲಿ ನಡೆದ ಬಹುದೊಡ್ಡ ಹಗರಣ ಪಿಎಸ್ಐ ಹಗರಣ, 545
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿತ್ತು. ಪಿಎಸ್ಐ ನೇಮಕಾತಿಗಾಗಿ ವರ್ಷಗಟ್ಟಲೆ ಶ್ರಮಪಟ್ಟು ಪರೀಕ್ಷೆ ಬರೆದ ನಾಡಿನ ಸಾವಿರಾರು ಯುವಕರಿಗೆ ಇದರಿಂದ ಅನ್ಯಾಯವಾಗುತ್ತಿತ್ತು. ಈ ಭ್ರಷ್ಟಾಚಾರದ ಸುಳಿವು ಸಿಗುತ್ತಿದ್ದಂತೆಯೇ ಶಾದಕರಾಗಿದ್ದ ಪ್ರಿಯಾಂಕ್ ಖರ್ಗೆಯವರು ಅಂದು ನಾಡಿನ ಯುವಕರ ಪರ ನಿಂತು ಈ ಅಕ್ರಮದ ವಿರುದ್ದ ದಾಖಲೆ ಸಮೇತ ಹೋರಾಟ ನಡೆಸಿ ಅಕ್ರಮವನ್ನು ಬಯಲಿಗೆಳೆದರು. ಆರಂಭದಲ್ಲಿ ಬಿಜೆಪಿ ಸಕಾರ ಮತ್ತು ಬಿಜೆಪಿ ನಾಯಕರುಗಳು ಇದನ್ನು ಅಲ್ಲಗಳೆದರಾದರೂ ಒತ್ತಡಕ್ಕೆ ಮಣಿದು ತನಿಖೆ ನಡೆಸಿದಾಗ ಸ್ವತಃ ಬಿಜೆಪಿ ನಾಯಕರುಗಳೇ ಈ ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿರುವುದು ಜಗಜ್ಜಾಹೀರಾಗಿತ್ತು. ದಿವ್ಯಾ ಹಾಗರಗಿ ಸೇರಿದಂತೆ ಅನಕ ಬಿಜೆಪಿ ನಾಯಕರುಗಳು ಜೈಲು ಪಾಲಾದರು. ಪ್ರಿಯಾಂಕ್ ಖರ್ಗೆಯವರ ನಿರಂತರ ಪ್ರತಿಭಟನೆಯಿಂದ ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆಯೂ ನಡೆಯಿತು.

ದಿವ್ಯ ಹಾಗಾರಗಿ ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಇತರ ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೂ ಬಿಜೆಪಿ ಅದನ್ನು ನಿರಾಕರಿಸಿ ಲೋಕದ ಕಣ್ಣಿಗೆ ಸುಳ್ಳಿನ ಸುಣ್ಣ ಸುರಿದಿತ್ತು. ಪಿ ಎಸ್ ಐ ಹಗರಣದ ಪ್ರಮುಖ ಆರೋಪಿ ಸಚಿವ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಅವರು ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಜೈಲು ಪಾಲಾಗಿ, ಈಗ ಜಾಮೀನಿನ ಮೇಲೆ ಹೊರಗೆ ಇರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಹಲವಾರು ಪಾಲ್ಗೊಂಡಿದ್ದು ನಾಚಿಕೆಗೇಡಿನ ವಿಷಯವಾಗಿದೆ. ಗುಲ್ಬರ್ಗದಲ್ಲಿ ಆರೋಪಿತರ ಜೊತೆ ಪಾದಯಾತ್ರೆಯ ಬೆವರು ಹರಿಸಿರುವ ಬಿಜೆಪಿ ನಾಯಕರು, ಕಳಂಕಿತರಿಗೆ ಪಕ್ಷದ ಉನ್ನತ ಸ್ನಾನಗಳನ್ನು ನೀಡಿ ತಮ್ಮ ಪಕ್ಷದ ಸಿದ್ಧಾಂತವನ್ನು ಬಹಿರಂಗವಾಗಿ ಜಾರಿಗೊಳಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement