Advertisement

2018 ರಲ್ಲಿ 9.41% ಓಟು ಪಡೆದು ಹೀನಾಯವಾಗಿ ಸೋತಿದ್ದ ಬಿಜೆಪಿ ಇಂದು ಗೆಲುವಿನ ಮಾತನಾಡುವುದು ಹಾಸ್ಯಾಸ್ಪದ: ನಿಕೇತ್‌ರಾಜ್ ಮೌರ್ಯ

Advertisement

'2008ರ ಚುನಾವಣೆಯಲ್ಲಿ ಶೇಕಡಾ 17.79., 2013 ರಲ್ಲಿ 11.84%., 2018 ರಲ್ಲಿ 9.41% ಹೀಗೆಯೇ ಚುನಾವಣೆಯಿಂದ ಚುನಾವಣೆಗೆ ಮತ ಗಳಿಕೆಯಲ್ಲಿ ಹಿನ್ನಡೆ ಪಡೆಯುತ್ತಿರುವ ಬಿಜೆಪಿ ಗೆಲುವಿನ ಕುರಿತು ಮಾತನಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾದ ವಿಚಾರವಾಗಿದೆ. ಅವರ ಪಕ್ಷದಲ್ಲಿ ಹಲವು ಬೂತ್‌ಗಳಲ್ಲಿ ಪೋಲಿಂಗ್ ಎಜೆಂಟ್ ಕೂಡಾ ಇಲ್ಲದಿರುವುದು ಸರ್ವರಿಗೂ ತಿಳಿದಿರುವ ವಿಚಾರ. ಕಳೆದ ನಲವತ್ತು ವರ್ಷಗಳಿಂದ ನಿರಂತರವಾಗಿ ಗೆಲುವು ಸಾಧಿಸಿ ಓರ್ವ ಜನಪ್ರತಿನಿಧಿಯಾಗಿ ಕ್ಷೇತ್ರದ ಮತದಾರರ ನಡುವೆಯೇ ಇದ್ದು ನೆಲ, ಜಲ, ಶಿಕ್ಷಣ, ಆರೋಗ್ಯ, ಕೃಷಿ ಮುಂತಾದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿ, ದಾಖಲೆ ಬರೆದಿರುವ ಟಿ.ಬಿ ಜಯಚಂದ್ರ ಎಂಬ ಜನನಾಯಕ ಒಂದು ವೇಳೆ ಗೆಲುವು ಸಾಧಿಸದಿದ್ದರೆ ಆ ಸೋಲನ್ನು ಜನಪರ ಕಾಳಜಿ ಮತ್ತು ಪ್ರಾಮಾಣಿಕತೆಯ ಸೋಲು ಎಂದು ಕರೆಯಬೇಕಾಗುತ್ತದೆ ಮತ್ತು ಬೇರೆಯವರು ಗೆಲುವು ಸಾಧಿಸಿದರೆ ಅದು ನಿಜಕ್ಕೂ ಪ್ರಜಾಪ್ರಭುತ್ವದ ಅಣಕವಾಗಲಿದೆ. ಅಂತಹ ಗೆಲುವನ್ನು ದುರಾಡಳಿತ ಮತ್ತು ಹಣಬಲದ ಗೆಲುವು ಎಂದು ಕರೆಯಬೇಕಾಗುತ್ತದೆ' ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ವ್ಯಾಖ್ಯಾನಿಸಿದ್ದಾರೆ. ಅವರು ಶನಿವಾರ www.kannadamedia.com ಜೊತೆ ಮಾತನಾಡುತ್ತಿದ್ದರು. 'ಜಯಚಂದ್ರರವರ ಹಿಂದಿನ ಅವಧಿಯ ಕೊನೆಯ ಭಾಗದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮದಲೂರು ಕೆರೆಗೆ ನೀರು ಹರಿಸಲಾಗಿತ್ತಾದರೂ ಆ ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪ್ರಸ್ತುತ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪ ನವರು ಆ ಕೆಲಸವನ್ನು ಮುಂದುವರಿಸದೆ ಇದೀಗ ಚುನಾವಣಾ ಸಮಯದಲ್ಲಿ ಜನರನ್ನು ಮರಳು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಅವರುಗಳು ನೀರು ಹರಿಸದಿರುವುದು ಶಿರಾ ಕ್ಷೇತ್ರದ ಜನತೆಗೆ ಮಾಡಿದ ಮಹಾದ್ರೋಹವಾಗಿದೆ' ಎಂದವರು ಹೇಳಿದರು. 'ಒಟ್ಟಾರೆಯಾಗಿ ಹಿಂದಿನ ಚುನಾವಣೆಯಲ್ಲಿನ ಜಯಚಂದ್ರರವರ ಸೋಲು ಶಿರಾ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಉಂಟು ಮಾಡಿದೆ. ಆ ಕಾರಣಕ್ಕಾಗಿ ಶಿರಾದ ಜನತೆ ಪಶ್ಚಾತ್ತಾಪ ಪಟ್ಟು ಮಾತನಾಡುತ್ತಿರುವುದನ್ನು ನಾವು ಕ್ಷೇತ್ರದಾದ್ಯಂತ ಕಂಡಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸತ್ಯನಾರಾಯಣ ರವರ ಅನಾರೋಗ್ಯದ ಹಿನ್ನಲೆಯಲ್ಲಿ ಅವರ ಪರ ಅನುಕಂಪದ ಅಲೆ ಇದ್ದದ್ದರ ಪರಿಣಾಮ ಅವರು ಗೆಲುವು ಸಾಧಿಸಿದ್ದು ನಿಜವಾದರೂ ಇದೀಗ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದದ್ದರ ಕಾರಣದಿಂದ ಆ ಅನುಕಂಪವೇ ಪಶ್ಚಾತ್ತಾಪವಾಗಿ ಮಾರ್ಪಟ್ಟಿದೆ. ಆ ಕಾರಣಕ್ಕಾಗಿ ಜಯಚಂದ್ರರವರು ಅರ್ಧ ಮುಗಿಸಿರುವ ಕೆಲಸಗಳನ್ನು ಪೂರೈಸಲು ಅವರನ್ನೆ ಪುನಃ ಆಯ್ಕೆ ಮಾಡುವ ಶಪಥ ತೊಟ್ಟಿದ್ದಾರೆ ಕ್ಷೇತ್ರದ ಮತದಾರರು. ಅಷ್ಟಲ್ಲದೇ ಜಯಚಂದ್ರರಂತಹ ಓರ್ವ ಜನನಾಯಕನ ಅವಶ್ಯಕತೆ ಸದಾ ಈ ಕ್ಷೇತ್ರಕ್ಕಿದೆ. ಖಂಡೀತವಾಗಿಯೂ ಜಯಚಂದ್ರರವರು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ' ಎಂದವರು ಹೇಳಿದ್ದಾರೆ. _____________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement