'ಹಲಾಲ್' ಅಶುದ್ದವಾದರೆ 'ಜಮಿಯತ್ ಉಲಮಾ- ಇ- ಹಿಂದ್' ನಿಂದ ಬಾಬಾ ರಾಮ್‌ದೇವ್ ಕಂಪೆನಿ ಹಲಾಲ್ ಸರ್ಟಿಫಿಕೇಟ್ ಏಕೆ ಪಡೆದಿದೆ? ಬಿಜೆಪಿಗರು ಉತ್ತರಿಸುವರೇ?

'ಜಮಿಯತ್ ಉಲಮಾ- ಇ- ಹಿಂದ್' ನಿಂದ ಬಾಬಾ ರಾಮ್‌ದೇವ್ ಕಂಪೆನಿ ಹಲಾಲ್ ಸರ್ಟಿಫಿಕೇಟ್ ಪಡೆದಿರುವ ಸುದ್ದಿಯ ನಡುವೆ ಇದೀಗ 'ಹಲಾಲ್‌ ಎಂದರೇನು? ಉತ್ಪನ್ನದ ಗುಣಮಟ್ಟದ ಪರೀಕ್ಷೆಗೆ ಸರ್ಟಿಫಿಕೇಟ್‌ ಇದಾಗಿದೆಯೇ? ಅದನ್ನು ಸರ್ಕಾರ ಕೊಡುತ್ತದೆಯೇ? ಜಾತ್ಯತೀತ ಎನ್ನಲು ಹಲಾಲ್‌ ಸರ್ಟಿಫಿಕೇಟ್‌ ಅನಿವಾರ್ಯವೇ ಎಂಬ ಪ್ರಶ್ನೆಗೂ ಸಮಾಜದಿಂದ ಉತ್ತರ ಬೇಕಿದೆ. ಹಲಾಲ್‌ ಕುರಿತ ಪ್ರಶ್ನೆಗಳಿಗೆ ಪ್ರಗತಿಪರರು, ಬುದ್ಧಿಜೀವಿಗಳು, ಮುಸ್ಲಿಂ ವಿದ್ವಾಂಸರು ಇದರ ಮೇಲೆ ಬೆಳಕು ಚೆಲ್ಲಬೇಕಿದೆ’ ಎಂದು ಸದಾ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ನಾಯಕ ಸಿಟಿ ರವಿಯವರು ಬಾಲಿಷ ವಾಗಿ ಪ್ರಶ್ನಿಸಿದ್ದಾರೆ.

ಮೊದಲಿನಿಂದಲೂ ನಿರಂತರವಾಗಿ ಕೋಮು ಪ್ರಚೋದಕ ಸುಳ್ಳು ವದಂತಿಗಳನ್ನು ಹರಡುವ ಮೂಲಕ ಹಿಂದೂ ಮುಸಲ್ಮಾನ ಯುವಕರ ನಡುವಿನ ಸೌಹಾರ್ಧತೆ ಕೆಡಿಸಿ ಅವರುಗಳು ಸದಾ ಬಡಿದಾಡಿಕೊಂಡು ಸಾಯಲು, ಕೈಕಾಲು ಮುರಿದುಕೊಂಡು ಆಸ್ಪತ್ರೆ, ಜೈಲು ಸೇರಲು ಪ್ರೇರಣೆ ನೀಡುತ್ತಲೇ ಬಂದಿರುವ ಅಥವಾ ಅದುವೇ 'ಹಿಂದುತ್ವ ಮತ್ತು ದೇಶಪ್ರೇಮ' ಎಂಬಂತೆ ಯುವಕರುಗಳ ಮನದಲ್ಲಿ ತುಂಬಿರುವ ಸಂವಿಧಾನ ವಿರೋಧಿ ನೀತಿಯ ಬಿಜೆಪಿ ನಾಯಕರುಗಳ ನೇತೃತ್ವದ 'ಸ್ವಯಂ ಘೋಷಿತ ಹಿಂದುತ್ವವಾದಿ ಗುಂಪು'ಗಳು 2018ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ದೊರೆಯದಿದ್ದ ಕಾರಣಕ್ಕಾಗಿ ಆ ನಂತರದ ದಿನಗಳಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು 'ಅಪರೇಷನ್ ಕಮಲ'ದ ಮೂಲಕ ಪತನಗೊಳಿಸಿ, ಅಧಿಕಾರಕ್ಕೆ ಏರಿರುವ ಹಾಗೂ ಅಭಿವೃದ್ಧಿ ವಿರೋಧಿ(?) ಲೂಟಿಕೋರರುಗಳ ಕಪಿಮುಷ್ಟಿಯಲ್ಲಿರುವ ಇವರುಗಳ ಸರ್ಕಾರ ತನ್ನ ಆಡಳಿತಾವಧಿಯ ವೈಫಲ್ಯಗಳು ಜನಸಾಮಾನ್ಯರ ಗಮನಕ್ಕೆ ಬಾರದಂತೆ ಮುಚ್ಚಿ ಹಾಕಲು ದಿನಕ್ಕೊಂದರಂತೆ ಕೋಮು ದ್ವೇಷದ ವಿವಾದಗಳನ್ನು ಹುಟ್ಟು ಹಾಕುತ್ತಲೇ ಬಂದಿದೆ. ಸಧ್ಯಕ್ಕೆ 'ನಿರುಪದ್ರವಿ ಹಲಾಲ್' ಮಹಾನ್ ದೇಶದ್ರೋಹವೋ ಎಂಬಂತೆ ಎನ್ನಿಸಿಕೊಂಡಿದೆ.

ಅದಕ್ಕೆ ಪುರಾವೆ ಎಂಬಂತೆ ಕೆಲವು ಉದಾಹರಣೆಗಳನ್ನು ತಗೆದುಕೊಂಡರೆ ಮೊದಲಿಗೆ ಸುಳ್ಳು ಸುಳ್ಳು ವದಂತಿಗಳನ್ನು ನಿಜ ಎಂಬಂತೆ ಹರಡಿ ನಿರಂತರವಾಗಿ ಕೋಮುಧ್ವೇಷ, ಕೋಮು ಗಲಭೆಗಳನ್ನು ಹುಟ್ಟುಹಾಕಲಾಗುತ್ತಿತ್ತು. ರಾಜಧರ್ಮ ಪಾಲನೆಯ ಅಂಗವಾಗಿ ಸಂವಿಧಾನದ ಆಶಯಗಳ ಪಾಲನೆಯನ್ನು ಮುಸ್ಲಿಂ ಓಲೈಕೆ ಎಂಬ ವದಂತಿ ಹರಡಲಾಗಿತ್ತು. ಲವ್ ಜಿಹಾದ್, ಕೊರೊನಾ ಜಿಹಾದ್ ಎಂಬೆಲ್ಲಾ ಕಪೋಲಕಲ್ಪಿತ ವದಂತಿ ಹರಡಲಾಗಿತ್ತು‌. ಇತ್ತೀಚೆಗೆ ಹಿಜಾಬ್ ವಿವಾದವನ್ನು ಸೃಷ್ಟಿಸಲಾಗಿತ್ತು. ನಂತರ ಬ್ಯಾನರ್ ಹಾಕುವ ಮೂಲಕ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರ ಕ್ಕೆ ಕರೆಕೊಡಲಾಯಿತು. 'ಹಲಾಲ್‌' ಕುರಿತು ವಿವಾದ ಸೃಷ್ಟಿಸಲಾಗಿದೆ. ಹಿಂದೂಗಳು 'ಹಲಾಲ್' ಮಾಂಸ ಮತ್ತು ಅದರ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ ಮತ್ತು ಇದೀಗ ಹಲಾಲ್‌ ಎಂದರೇನು ಎಂಬ ಮತ್ತೊಂದು ಪ್ರಶ್ನೆಯನ್ನು ಬಿಜೆಪಿ ಮತ್ತದರ ಪಡೆ ಸೃಷ್ಟಿಸಿದೆ.

ಹಲಾಲ್ ಎಂಬುದು 'ಅನುಮತಿಸಿದ' ಎಂಬ ಶಬ್ದಾರ್ಥ ಹೊಂದಿದೆ. (ಅನುಮತಿಸಿದ: ನಿಯಮದ ಪ್ರಕಾರ ಅಶುದ್ದವಲ್ಲದ, ಪರಿಶುದ್ಧವಾದ ರೀತಿಯಲ್ಲಿ ತಯಾರಿಸಲ್ಪಟ್ಟ, ಮುಂತಾದ ಸಮಾನಾರ್ಥಕ ಅರ್ಥವನ್ನು ಹೊಂದಿದೆ) ಮೂಲತಃ ಇದು ಅರೇಬಿಕ್ ಪದವಾಗಿದೆ. ಇದು ಮುಸ್ಲಿಂ ಧರ್ಮಗ್ರಂಥ ಕುರಾನ್‌ನಲ್ಲಿ ವ್ಯಾಖ್ಯಾನಿಸಿದಂತೆ ಇಸ್ಲಾಮಿಕ್ ಕಾನೂನಿಗೆ ಬದ್ಧವಾಗಿದೆ. ಆಹಾರ ಉತ್ಪನ್ನಗಳು, ಮಾಂಸ ಉತ್ಪನ್ನಗಳು, ಸೌಂದರ್ಯವರ್ಧಕಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಔಷಧಗಳು, ಆಹಾರ ಪದಾರ್ಥಗಳು ಮತ್ತು ಆಹಾರ ಸಂಪರ್ಕ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಈ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಅದರ ಅಂಗವಾಗಿ 2020 ರಲ್ಲಿಯೇ, 'ಜಮಿಯತ್ ಉಲಮಾ-ಇ-ಹಿಂದ್' ಬಿಜೆಪಿಯ ಪ್ರಬಲ ಪ್ರತಿಪಾದಕ, ಯೋಗ ಗುರು ಬಾಬಾ ರಾಮ್‌ದೇವ್ ಒಡೆತನದ ಪತಂಜಲಿ ಕಂಪನಿ ಕೂಡ 'ಹಲಾಲ್' (ಅನುಮತಿ ಹೊಂದಿದ) ಪ್ರಮಾಣಪತ್ರವನ್ನು ಪಡೆದಿದೆ.

'ಹಲಾಲ್ ಅಶುದ್ದ'ವಾದರೆ, 'ಹಿಂದೂಧರ್ಮ ವಿರೋಧಿ' ಎನ್ನಿಸುವುದಾದರೆ ತನ್ನ ಕಂಪೆನಿಯ ಉತ್ಪನ್ನಗಳ ಮಾರಾಟಕ್ಕೆ ಬಾಬಾ ರಾಮ್‌ದೇವ್ ಕಂಪೆನಿ 'ಜಮಿಯತ್ ಉಲಮಾ-ಇ-ಹಿಂದ್' ನಿಂದ ಹಲಾಲ್ ಸರ್ಟಿಫಿಕೇಟ್ ಏಕೆ ಪಡೆದಿದೆ? ಅದರ ಹಿಂದಿನ ರಹಸ್ಯವೇನು ಎಂಬ ಪ್ರಶ್ನೆಗೆ ಇಂದು ಹಲಾಲ್ ಎಂದರೇನೆಂದು ಪ್ರಶ್ನಿಸುತ್ತಿರುವ ಅಥವಾ ಹಲಾಲ್ ಅಶುದ್ದ ಎಂಬಂತೆ ಪ್ರತಿಪಾದಿಸುತ್ತಿರುವ ಅದೇ ಬಿಜೆಪಿಗರು ಅಥವಾ ಕನಿಷ್ಟ ಪಕ್ಷ ಸಿಟಿ ರವಿಯವರು ಉತ್ತರಿಸಬೇಕಲ್ಲವೇ?

ಗೂಗಲ್‌ನಲ್ಲಿ ಲಭ್ಯವಿರುವ ಬಾಬಾ ರಾಮ್‌ದೇವ್ ರವರ ಕಂಪೆನಿಯು ಪಡೆದಿರುವ ಹಲಾಲ್ ಪ್ರಮಾಣಪತ್ರ ದಾಖಲೆಯು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ‌.

ಹಲಾಲ್ ಸರ್ಟಿಫಿಕೇಟ್ ಕುರಿತಾದ ಒಂದಷ್ಟು ವಿವರಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

►►https://thehindustangazette.com/election/baba-ramdevs-patanjali-has-a-halal-certificate-for-its-products-9140 ►►https://www.opindia.com/2019/10/halal-certification-india-sharia-law-india-patanjali-ramdev-baba-gaumutra-north-east-islamic-food/

ಮುಸ್ಲಿಮರ ಸಂಘಟನೆಯಾಗಿರುವ ಜಮಿಯತ್ ಉಲಾಮಾ-ಎ-ಹಿಂದ್ 'ಪತಂಜಲಿ' ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರ ನೀಡಿರುವುದು ಆಘಾತಕಾರಿಯಾಗಿದೆ ಎಂದು ಅಂಬೇಡ್ಕರ್ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪಕ ಕಾಜಿಮ್ ಅಲಿ ಆಶ್ಚರ್ಯ ಮತ್ತು ವಿರೋಧ ವ್ಯಕ್ತಪಡಿಸಿದ್ದರು. (April 28, 2020) ಈ ಕುರಿತಾದ ಒಂದಷ್ಟು ವಿವರಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

►►https://www.siasat.com/jamiat-ulama-issues-halal-certificate-patanjali-products-1881093