ಬಿಜೆಪಿ ಮತ್ತದರ ಪರಿವಾರದ ಅಸಲಿಯತ್ತು ಅರಿಯಲು ಇದಕ್ಕಿಂತ ಬೇರೆ ಪುರಾವೆ ಬೇಕೇ? ವಿಡಿಯೋ ನೋಡಿ...

ಬಿಜೆಪಿ ಮತ್ತದರ ಹಿಂದಿನ ಸ್ವಯಂ ಘೋಷಿತ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಮುಂದಿನ ವಾರ ಉಡುಪಿ ಜಿಲ್ಲೆಯಲ್ಲಿ ನಡೆಯಲಿರುವ "ದುರ್ಗಾ ದೌಡ್" ಹೆಸರಿನ ಕಾರ್ಯಕ್ರಮಕ್ಕೆ ಅದ್ದೂರಿಯ ಸಿದ್ದತೆ ನಡೆದಿದೆ.‌ ಈ ಕಾರ್ಯಕ್ರಮಕ್ಕೆ ಮಧ್ಯಪ್ರದೇಶದ ಭೂಪಾಲ್ ಲೋಕಸಭಾ ಕ್ಷೇತ್ರದ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಮುಖ್ಯ ಬಾಷಣಕಾರರಾಗಿ ಬರಲಿದ್ದಾರೆ ಎಂಬ ಕುರಿತು ಅಲ್ಲಲ್ಲಿ ಬ್ಯಾನರ್‌ಗಳನ್ನು ಕೂಡ ಹಾಕಲಾಗಿದೆ. ಹಾಗೆಯೇ, ಈ ಕೆಳಗಿನ ವಿಡಿಯೋದಲ್ಲಿ ರಾಜಾರೋಷವಾಗಿ ನಡೆದು ಬಂದು ನಡೆದಾಡಲು ಸಮಸ್ಯೆ ಇರುವವರಂತೆ, ಕಾಲುಗಳಲ್ಲಿ ಬಲವೇ ಇಲ್ಲದವರಂತೆ ವೀಲ್‌ಚೇರ್ ನಲ್ಲಿ ಕುಳಿತು ತೆರಳಿದ ಸಾದ್ವಿ ಪ್ರಗ್ನಾಸಿಂಗ್ ಎಂಬ ಹೆಸರಿನ ಈಕೆ ಮಾಲೇಗಾಂ ಸ್ಪೋಟ ದ ಆರೋಪಿತೆ ಕೂಡ. ಹೌದು.. ಮಾಲೇಗಾಂ ಸ್ಪೋಟ, ಹೈದರಾಬಾದ್ ನ ಮಕ್ಕಾಮಸೀದಿ ಬ್ಲಾಸ್ಟ್ ಪ್ರಕರಣ, ಸಂಜೋತಾ ಎಕ್ಸ್‌ಪ್ರೆಸ್‌ ಬ್ಲಾಸ್ಟ್ ಪ್ರಕರಣ, ಅಝ್ಮೀರ್ ಸ್ಪೋಟ ಪ್ರಕರಣಗಳನ್ನು ತನಿಖೆಗೆತ್ತಿಕೊಂಡ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ಪಡೆಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಕಡಕ್ ಪೋಲಿಸ್ ಅಧಿಕಾರಿಗಳಾದ ಅಶೋಕ್ ಚಕ್ರ ಪ್ರಶಸ್ತಿ ಪುರಸ್ಕೃತ ಹೇಮಂತ್ ಕರ್ಕರೆ, ಕಾಮ್ಟೆ ಮತ್ತು ಸಾಲಸ್ಕರ್ ತಂಡ ಸಾದ್ವಿ ಪ್ರಜ್ಞಾ ಸಿಂಗ್ ಜೊತೆಗೆ ಸ್ವಾಮಿ ಅಸೀಮಾನಂದ, ಕರ್ನಲ್ ಪುರೋಹಿತ ಮುಂತಾದ ಹಲವಾರು ಸಂಘಿಗಳನ್ನು ಬಂದಿಸಿ ಜೈಲಿಗಟ್ಟಿತ್ತು. ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ 2008ರ ಸೆಪ್ಟೆಂಬರ್ ನಲ್ಲಿ ಸ್ಫೋಟ ನಡೆದಿತ್ತು. ಈ ವೇಳೆ 7 ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದ ಕುರಿತು 2011ರಲ್ಲಿ ತನಿಖಾ ದಳ ವಿಚಾರಣೆ ಆರಂಭಿಸಿತ್ತು. ಪೋಲಿಸ್ ಅಧಿಕಾರಿ ಹೇಮಂತ್ ಕರ್ಕರೆಯವರ ತಂಡದ ಅಧಿಕಾರಿಗಳು ಈ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಳನ್ನು ಸಾಕ್ಷಿ ಸಮೇತ ಬಂಧಿಸಿ, ಎಫ್‌ಐಅರ್ ಜಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ, ನ್ಯಾಯಾಂಗ ಬಂಧನ ವಿಧಿಸಿ ಆಕೆಯನ್ನು ಜೈಲಿನಲ್ಲಿ ಇಟ್ಟಿತ್ತು. ಈ ನಡುವೆ ಪಾಕ್ ಭಯೋತ್ಪಾದಕರಿಂದ ಮುಂಬೈ ದಾಳಿ (9/11)ನಡೆದು ಹಲವು ಅಮಾಯಕರನ್ನು ಕೊಲ್ಲಲಾಗುತ್ತದೆ ಮತ್ತು ಆಕೆಯನ್ನು ಬಂಧಿಸಿದ್ದ ದೇಶಪ್ರೇಮಿ ಪೋಲಿಸ್ ಅಧಿಕಾರಿ ಹೇಮಂತ್ ಕರ್ಕರೆ ಮುಂತಾದ ಅಧಿಕಾರಿಗಳನ್ನು ಕೂಡ ವ್ಯವಸ್ಥಿತವಾಗಿ ದಾಳಿ ನಡೆಸಿ ಕೊಲ್ಲಲಾಗುತ್ತದೆ. ಆಗ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ 2014ರಲ್ಲಿ ಸೋಲುವ ಮೂಲಕ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈ ನಡುವೆ ಬದಲಾದ ವಾತಾವರಣದಲ್ಲಿ ಸಾಕ್ಷಿ ಕೊರತೆ ಮತ್ತಿತರ ಕಾರಣವೊಡ್ಡಿ ಆಕೆಯನ್ನು ಮತ್ತಿತರರನ್ನು ಬಂಧನದಿಂದ ಬಿಡುಗಡೆಗೊಳಿಸಲಾಗುತ್ತದೆ ಮತ್ತು ಬಿಜೆಪಿ ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಆಕೆಗೆ ಚುನಾವಣೆಗೆ ಟಿಕೇಟು ನೀಡಿ ಗೆಲ್ಲಿಸುತ್ತದೆ. ಈ ನಡುವೆ, ಭೋಪಾಲ್‍ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್, 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದಲೇ. ನೀನು ಸರ್ವನಾಶ ಆಗುತ್ತೀಯಾ ಎಂದು ಕರ್ಕರೆ ಅವರಿಗೆ ಶಾಪ ಹಾಕಿದ್ದೆ. ಆ ಶಾಪ ಅವರಿಗೆ ತಟ್ಟಿತು, ನನ್ನನ್ನು ಬಂಧಿಸಿದ 45 ದಿನಗಳ ನಂತರ ಕರ್ಕರೆ ಉಗ್ರರಿಂದ ಪ್ರಾಣ ಬಿಟ್ಟರು ಎಂದು ಹೇಳುತ್ತಾರೆ. ಸ್ನೇಹಿತರೆ, ಈಗ ಹೇಳಿ.. ಈ ಎಲ್ಲಾ ಘಟನೆಗಳನ್ನು ಅವಲೋಕಿಸಿವಾಗ ಅದೇಕೋ ಆ 9/11 ರ ಹಿಂದಿನ ಕೈಗಳು ನಿಜಕ್ಕೂ ಯಾವುದು ಎಂಬ ಅನುಮಾನ ಬಾರದಿರುವುದೇ? ಈ ಕುರಿತು ಮತ್ತೊಂದು ಸಮಗ್ರ ತನಿಖೆ ಆಗಬೇಕು ಅನ್ನಿಸದಿರುವುದೇ? ಹಾಗೆಯೇ, ದೇಶದ ಐಕ್ಯತೆಗಾಗಿ ಪ್ರಾಣತೆತ್ತ ಕರ್ಕರೆ, ಸಾಲಸ್ಕರ್, ಕಾಮ್ಟೆ ಮತ್ತಿತರ ಅಧಿಕಾರಿಗಳ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಹಾರೈಸೋಣ.