'ಯಾರೂ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಬಸ್ ಟಿಕೇಟು ಖರೀದಿಸಬೇಡಿ' ಎಂದು ಕರೆನೀಡಿರುವ ಮಾನ್ಯ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೇ,
ಇದೀಗಷ್ಟೇ ಪ್ರಮಾಣವಚನ ಸ್ವೀಕರಿಸಿರುವ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಯಡಿ 200ಯೂನಿಟ್ ತನಕದ ಉಚಿತ ವಿದ್ಯುತ್, ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ, ಅನ್ನಭಾಗ್ಯ ಅಕ್ಕಿ 10 ಕೆಜಿಗೆ ಏರಿಕೆ, ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವಿದರರಿಗೆ ಮತ್ತು ಡಿಪ್ಲೊಮಾ ಪದವಿದರರಿಗೆ ನಿರುದ್ಯೋಗ ಭತ್ಯೆ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಹಿರಿಯ ಮಹಿಳೆಗೆ ಮಾಸಿಕ 2ಸಾವಿರ ರೂಪಾಯಿ ನೀಡುವ ಯೋಜನೆಗಳಿಗೆ ತಾತ್ವಿಕ ಮಂಜುರಾತಿ ನೀಡಿದೆ. ಈ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಾಗಲು ಯಾರ‌್ಯಾರು ಅರ್ಹರು? ಅವರುಗಳ ಅಂಕಿಸಂಖ್ಯೆಗಳೇನು ಎಂಬ ಕುರಿತಾದ ರೂಪುರೇಷೆಗಳು ರೂಪುಗೊಂಡು ಮುಂದಿನ ಸಂಪುಟ ಸಭೆಯಲ್ಲಿ ಅವುಗಳು ಯೋಜನೆಗಳಾಗಿ ಜಾರಿಗೊಳ್ಳಲಿದೆ. ಹಾಗೆ ಮಾಡಲಾಗುವುದೆಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಪೈಪೋಟಿ: ಬಿಜೆಪಿ ಹಿಂದಿನ ಮೋದ್ಯಮಗಳು ಬಿತ್ತಿದ್ದ ವಿಷಬೀಜ?
ಹಾಗೆಯೇ, ಸರ್ಕಾರದ ಹೊಸ ಯೋಜನೆಗಳ ಜಾರಿಯ ಕುರಿತಾದ ಈ ಮೇಲಿನ ಸಾಮಾನ್ಯ ನಿಯಮಗಳ ಕುರಿತು ಹಲವು ಅವಧಿಗಳ ಕಾಲ ಸಚಿವರಾಗಿ ಕೆಲಸ ಮಾಡಿರುವ ತಮಗೆ ಅರಿವಿದೆ ಎಂದು ನಾವು ಅಂದುಕೊಂಡಿದ್ದೇವೆ.
ಹಾಗೆಯೇ ಈ ನಡುವೆ ಅವುಗಳು ಯೋಜನೆಗಳಾಗಿ ಜಾರಿಯಾಗುವ ಮೊದಲೇ 'ಯಾರೂ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಬಸ್ ಟಿಕೇಟು ಖರೀದಿಸಬೇಡಿ' ಎಂಬ ತಮ್ಮ ಪತ್ರಿಕಾಹೇಳಿಕೆ ನೋಡಿ ನಿಜಕ್ಕೂ ಆಶ್ಚರ್ಯವಾಯಿತು. ಅದೇಕೆಂದರೆ ತಮ್ಮ ಈ ಹೇಳಿಕೆಯನ್ನು ನೋಡಿ ಅದ್ಯಾರಾದರೂ ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸಿದರೆ ಖಂಡಿತವಾಗಿಯೂ ಸಂಬಂಧಿಸಿದ ಅಧಿಕಾರಿಗಳು ಅವರ ಮನೆಯ ಫ್ಯೂಸ್ ಕೀಳುವ ಮೂಲಕ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುತ್ತಾರೆ ಮತ್ತು ಮಹಿಳೆಯರು ಬಸ್ಸಿನಲ್ಲಿ ಟಿಕೇಟು ಖರೀದಿಸಲು ನಿರಾಕರಿಸಿದರೆ ಬಸ್ ಕಂಡಕ್ಟರ್ ಅವರನ್ನು ಕೆಳಕ್ಕಿಳಿಸುತ್ತಾರೆ. ಇದು ನಿಯಮ ಕೂಡ ಹೌದು.
ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಳಂಬ ಏಕೆ?
ಸರಳ ರಾಜಕಾರಣಿ ಎಂದು ತಮ್ಮ ಪಕ್ಷೀಯರಿಂದ ಹೊಗಳಿಸಿಕೊಳ್ಳುವ ತಾವು ಇಂತಹ ದಿಕ್ಕುತಪ್ಪಿಸುವ ಹೇಳಿಕೆಯನ್ನು ನೀಡುವ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಹೊರಟಿರುವುದು ನಿಜಕ್ಕೂ ಖೇದಕರವಾದ ವಿಚಾರವಾಗಿದೆ.
"ಅದಾನಿ ಕಂಪೆನಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು? ಪ್ರಧಾನಿ- ಅದಾನಿ ಸಂಬಂಧ ಏನು?" ಈ ಮಾತುಗಳಿಗೆ ಮೋದಿ ಬೆದರಿದರೇ?